ವಿಜಯನಗರ: ವ್ಯಕ್ತಿಯೊಬ್ಬ ಬೀದಿ ದೀಪ ಸರಿಪಡಿಸಲು ಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಹರಪನಹಳ್ಳಿ ತಾಲೂಕಿನ ಒಡೆಯರಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ರೇಣುಕಪ್ಪ (37) ಸಾವನ್ನಪ್ಪಿದ್ದಾರೆ. ಗ್ರಾಪಂ (Gram Panchayat) ಸಿಬ್ಬಂದಿ ಹೇಳಿದ್ದಾರೆ ಎಂಬ ಕಾರಣಕ್ಕೆ ರೇಣುಕಪ್ಪ ವಿದ್ಯುತ್ ಕಂಬ ಹತ್ತಿ ದೀಪ ಸರಿಪಡಿಸುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ವಿದ್ಯುತ್ ಪ್ರಹರಿಸಿ ಸಾವನ್ನಪ್ಪಿದ್ದಾರೆ.
ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರೇಣುಕಪ್ಪ ಗ್ರಾಮದಲ್ಲಿ ವಿದ್ಯುತ್ ಪಂಪ್ ಸೆಟ್ ಹಾಗೂ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.








