ಬಳ್ಳಾರಿ : ದೇವರ ದರ್ಶನಕ್ಕೆಂದು ಬಂದ ವ್ಯಕ್ತಿ ದೇವರ ಪಾಲಾಗಿರುವ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಡೆದಿದೆ. ಲಾಕ್ ಡೌನ್ ನಿಂದ ಬಂದ ಆಗಿದ್ದ ದೇವಸ್ಥಾನಗಳು ಜೂನ್ 1 ರಿಂದ ನಿಧಾನವಾಗಿ ಓಪನ್ ಆಗುತ್ತಿವೆ. ಅಲ್ಲದೆ ದೇವಸ್ಥಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ, ಹರಕೆ ಮುಂತಾದುವುಗಳಿಗೆ ಅವಕಾಶವಂತೂ ಇಲ್ಲವೇ ಇಲ್ಲ.
ಆದರೂ ಸಹ ಬಳ್ಳಾರಿಯ ಹಳೆ ದರೋಜಿಯ ಕುಟುಂಬ ದೇವರಿಗೆ ಹರಕೆ ತೀರಿಸಲು ಟ್ರಾಕ್ಟರ್ ನಲ್ಲಿ ಕುಟುಂಬ ಸಮೇತವಾಗಿ ಬಂದಿತ್ತು. ಆದರೆ ಹುಲಗಿಯಲ್ಲಿ ದೇವರ ದರ್ಶನಕ್ಕೆ ಇವರಿಗೆ ಅವಕಾಶ ಸಿಕ್ಕಿಲ್ಲ. ದೇವರ ಮೇಲಿನಯಿಂದಾಗಿ ಹೇಗಾದರೂ ಮಾಡಿ ಹರಕೆ ತೀರಿಸಲೇ ಬೇಕೆನ್ನುವ ಕಾರಣಕ್ಕೆ ಕಮಲಾಪುರದ ಹತ್ತಿರ ಹೊಲವೊಂದರಲ್ಲಿ ಮೂರ್ತಿ ಪ್ರತಿಪಾಷ್ಟಿಪಿಸಿ ಪೂಜೆ ಮಾಡಲು ಸಿದ್ದತೆ ನಡೆಸಿದ್ದರು.
ಹರಕೆ ಪೂಜೆ ನಡೆಸಲು ಮಡಿಕೆಯೊಂದು ಬೇಕಾಗಿತ್ತು. ಹಾಗಾಗಿ ಚನ್ನಪ್ಪ ಎಂಬುವವರು ಕಲಲಾಪುರಕ್ಕೆ ಮಡಕೆ ತರಲು ಬಂದಿದ್ದರು. ಈ ವೇಳೆ ಯಮಸ್ವರೂಪಿಯಾಗಿ ಬಂದ ಲಾರಿಯ ಟೈರ್ ಬ್ಲಾಸ್ಟ್ ಆಗಿದೆ. ಸರಪಳಿಯೊಂದಿಗೆ ರಭಸವಾಗಿ ಅಪ್ಪಳಿಸಿದ ಮ್ಯಾಟ್ ಮತ್ತು ಲಾರಿ ಚೈನ್ ಹೊಡೆತಕ್ಕೆ ಚನ್ನಪ್ಪ ಎನ್ನುವವರ ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾ ಇದ್ದರೂ ದೇವರಿಗೆ ಹರಕೆ ತೀರಿಸಲು ಬಂದಿದ್ದ ಚೆನ್ನಪ್ಪ ನವರನ್ನು ಇಂದು ದೇವರ ಪಾಲಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.








