ADVERTISEMENT
Thursday, August 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

ಮಟಕಾ ದೊರೆಯೂ ಮತ್ತವನ ಯುಗಾಂತ್ಯವಾದ ಕಥೆಯೂ

admin by admin
May 13, 2020
in Marjala Manthana, Newsbeat, ಮಾರ್ಜಲ ಮಂಥನ
Share on FacebookShare on TwitterShare on WhatsappShare on Telegram

ಮಟಕಾ ಸಾಮ್ರಾಜ್ಯದ ಮುಕುಟವಿಲ್ಲದ ಮಹಾರಾಜ ರತನ್ ಲಾಲ್ ಖತ್ರಿ ಎಂಬ ಓಸಿ/

ರತನ್ ಲಾಲ್ ಖತ್ರಿ.. ಈ ಹೆಸರು ದೇಶದ ಮಟಕಾ ಪ್ರೇಮಿಗಳಿಗೆ ಖಂಡಿತಾ ಚಿರಪರಿಚಿತವಾಗಿರತ್ತೆ. ಬೇಕಿದ್ದರೆ ನೀವು ದೇಶದ ಗ್ರಾಮದ ಯಾವುದೇ ಅನಕ್ಷರಸ್ಥನಿಗೆ ಕೇಳಿ ನೋಡಿ, ರತನ್ ಲಾಲ್ ಖತ್ರಿ ಎಂದರೆ ಓ! ಸೆಟ್ಟಾ, ಮಟಕಾ, ಓಸಿ ಎನ್ನುತ್ತಾರೆ. ಈ ದೇಶದಲ್ಲಿ ಓಸಿ (ಓಪನ್ ಮತ್ತು ಕ್ಲೋಸ್) ಎನ್ನುವ ನಿರ್ಬಂಧಿತ ಕಾನೂನು ಬಾಹಿರ ಜೂಜೊಂದನ್ನು ಸಂಘಟನಾತ್ಮಕವಾಗಿ ಹಳ್ಳಿ ಹಳ್ಳಿಗಳಿಗೂ ಹರಡುವುದು ಮತ್ತು ಅನಭಿಷಿಕ್ತವಾಗಿ ಆಳುವುದು ಅಷ್ಟು ಸುಲಭದ ವಿಷಯವಲ್ಲ. ಜೂಜಿನಂತಹ ಕಾನೂನುಬಾಹಿರ ದಂದೆಯಲ್ಲಿ ಮೋಸ ವಂಚನೆಗಳು ಸಾಮಾನ್ಯ. ಆದರೆ ಓಸಿ ಅಥವಾ ಮಟ್ಕಾದಲ್ಲಿ ಊಹೂಂ! ಸುತಾರಾಂ ಇಲ್ಲ. ಎರಡಂಕಿಯಲ್ಲಿ ಓಪನ್ ಅಥವಾ ಕ್ಲೋಸ್ ಹೊಡೆದರೆ ಕಟ್ಟಿದ ಒಂದು ರೂಪಾಯಿಗೆ 7 ರೂಪಾಯಿ, ಡಬಲ್ ಡಿಜಿಟ್ ಮ್ಯಾಚ್ ಆದರೆ 70 ರೂಪಾಯಿ, ಮೂರು ಡಿಜಿಟ್ ಬಂದುಬಿಟ್ಟರೆ 700 ರೂಪಾಯಿ ನಿಕ್ಕಿ. ಹತ್ತೇ ರೂಪಾಯಿ ಕಟ್ಟಿ ಡಬ್ಬಲ್ ಡಿಜಿಟ್ ಹೊಡೆದರೂ 700 ರೂಪಾಯಿ ಲಾಭ. ಮುಂಬೈನಲ್ಲಿ ಕುಳಿತು ರತನ್ ಲಾಲ್ ಖತ್ರಿ ಮಧ್ಯರಾತ್ರಿಗೆ ಯಾವುದೋ ಒಂದು ನಂಬರ್ ತೆಗೆದನೆಂದರೆ ನಾಳೆ ಬೆಳಿಗ್ಗೆ ಓಸಿ ಕಟ್ಟಿದವರಿಗೆ ಪರೀಕ್ಷೆಯ ಫಲಿತಾಂಶವಿದ್ದಂತೆ. ಖತ್ರಿ ಯಾವ ನಂಬರ್ ತೆಗೆದ? ಕಟ್ಟಿದ್ದು ಯಾವ ನಂಬರ್ ಗೆ? ಓಪನ್ ಹೊಡಿತಾ? ಕ್ಲೋಸ್ ಹೊಡಿತಾ? ಜಂಟಿ ನಂಬರ್ ಬಂತಾ? ತ್ರಿಬ್ಬಲ್ ಡಿಜಿಟ್ ಯಾರಿಗೆ ಬಂಪರ್? ಇವಿಷ್ಟೂ ಚರ್ಚೆಗಳು ಹಳ್ಳಿಯ ಕ್ಯಾಂಟೀನ್ ಗಳಲ್ಲಿ, ಹರಟೆ ಕಟ್ಟೆಯಲ್ಲಿ, ಹೊಲಗದ್ದೆಯಲ್ಲಿ ದಿನವಿಡೀ ಸೆನ್ಸೇಷನ್ ಸುದ್ದಿ. ಅಷ್ಟಕ್ಕೂ ಈ ರತನ್ ಲಾಲ್ ಖತ್ರಿ ಯಾರು? ಎಲ್ಲಿದ್ದಾನೆ? ನೋಡೋಕೆ ಹೇಗಿದ್ದಾನೆ? ಹೇಗೆ ನಂಬರ್ ಎತ್ತುತ್ತಾನೆ? ಸುಳಿಹು ಏನು ಕೊಡ್ತಾನೆ? ಇಷ್ಟು ದೊಡ್ಡ ಮಟ್ಟದ ನೆಟ್ ವರ್ಕ್ ನಲ್ಲಿ ಕೋಟ್ಯಾಂತರ ರೂಪಾಯಿ ಕಾಳಧನದ ಲೇವಾದೇವಿ ಹೇಗೆ ಮಾಡ್ತಾನೆ? ಈ ಪ್ರಶ್ನೆಗಳು ನಾನು ತಾರುಣ್ಯಕ್ಕೆ ಬಂದ ದಿನದಿಂದಲೂ ಕೇಳಿಕೊಂಡು ಬಂದಿದ್ದೇನೆ.

Related posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

August 13, 2026
upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

August 13, 2026

ಓಸಿ ನಮ್ಮ ಹಳ್ಳಿಗಳಲ್ಲಿ ಎಷ್ಟೋ ಮನೆಗಳನ್ನು ಹಾಳು ಮಾಡಿದೆ, ಎಷ್ಟೋ ಸಂಸಾರಗಳನ್ನು ಬೀದಿಯಲ್ಲಿ ನಿಲ್ಲಿಸಿದೆ. ನಮ್ಮೂರಲ್ಲಿ ಒಬ್ಬನಿದ್ದ, ಮಹಾ ಪಟಿಂಗ ಲಂಪಟ. ಅವನಿಗೆ 777 ನಂಬರ್ ಮೇಲೆ ವಿಪರೀತ ಮೋಹ. ಅವನ ಗಾಡಿಯ ನಂಬರ್ ಪ್ಲೇಟ್ ನಲ್ಲಿಯೂ 7 ಅಂಕಿ ಇರಲೇಬೇಕಿತ್ತು. ಅವರಪ್ಪನ ಕಾಲದಿಂದಲೂ ಅವರು ನಮ್ಮೂರಿನ ಓಸಿ ಏಜೆಂಟರು. ಅವರ ಹೆಸರಿನ ಹಿಂದೆ ಓಸಿ ಅನ್ನುವುದು ಸರ್ ನೇಮ್ ತರಹ ಗಟ್ಟಿಯಾಗಿ ನಿಂತುಬಿಟ್ಟಿತ್ತು. ನಿಮಗೆ ಆಶ್ಚರ್ಯವಾಗಬಹುದು. ಆ ಮಹಾನುಭಾವ ಬೈಕ್ ತಗೊಂಡಿದ್ದು, ಓಮಿನಿ, ಲಾರಿ ಖರೀದಿಸಿದ್ದು ಕೊನೆಗೆ ಮನೆ ಕಟ್ಟಿಸಿದ್ದೂ ಕೂಡಾ ಈ 7ರ ಅಂಕಿಯ ಓಸಿ ಅದೃಷ್ಟ ಪರೀಕ್ಷೆಯಲ್ಲೇ. ಅವನು ಕಳೆದುಕೊಂಡಿದ್ದೂ ಅಷ್ಟೇ ಇರಬಹುದೇನೋ. ಆದರೆ ಸಮಾಜಕ್ಕೆ ಬೇಕಿರುವುದು ಅವನು ಗಳಿಸಿಕೊಂಡಿದ್ದು ಮಾತ್ರವೇ ತಾನೆ. ಹೀಗಾಗಿ ಓಸಿ ಆಡುವ ಮಹಾ ಮಹಾ ಪುರುಷೋತ್ತಮರಿಗೆಲ್ಲಾ ಅವನು ರೋಲ್ ಮಾಡೆಲ್. ಓಸಿಯ ಗುಣಾಕಾರ-ಭಾಗಾಕಾರಕ್ಕೊಂದು ಚಾರ್ಟ್ ಬೇರೆ ಇತ್ತು. ನನಗೆ ಅತೀವ ಆಶ್ಚರ್ಯ ಅನ್ನಿಸುತ್ತಿದ್ದಿದ್ದು, ಶಾಲೆಯಲ್ಲಿ ಗಣಿತವೆಂದರೆ ಕಬ್ಬಿಣದ ಕಡಲೆ ಎಂದು ಒದ್ದಾಡುತ್ತಿದ್ದವರೆಲ್ಲಾ ಓಸಿ ಚಾರ್ಟ್ ಇಟ್ಟುಕೊಂಡು ಅದೇನೋ ಲೆಕ್ಕಾಚಾರ ಹಾಕಿ ನಾಳೆ ಓಪನ್ ಇದು, ಕ್ಲೋಸ್ ಇದಾಗಬಹುದು, ಮೂರಂಕಿ ಇದೇ ಹೊಡೆಯಬಹುದು ಎಂದು ಅಂದಾಜಿಸ್ತಿದ್ರು. ಅವರಲ್ಲೆ ಕೆಲವರ ಲೆಕ್ಕ ಭಾಗಶಃ ತಾಳೆಯೂ ಆಗುತ್ತಿತ್ತು. ಮತ್ತು ಅವರೆಲ್ಲಾ ಪರಮ ದಡ್ಡ ಶಿಖಾಮಣಿಗಳಾಗಿದ್ದರು ಎನ್ನುವುದು ವಿಧಿಯ ವಿಪರ್ಯಾಸ.

ಓಸಿ ನಂಬರ್ ಜಾಕ್ ಪಾಟ್ ಹಿಂದೆ ರಾತ್ರಿ ಬಿದ್ದ ಕನಸುಗಳ ಆಯಾಮವೂ ಇರ್ತಿತ್ತು ಅಂದರೆ ನಂಬ್ತೀರಾ? ಬೇಕಿದ್ದರೆ ನೀವಿದನ್ನು ಮೂಢ ನಂಬಿಕೆ ಅಂತನ್ನಿ, ಕಾಕತಾಳೀಯ ಅಂತ ಹೇಳಿ. ಕನಸಲ್ಲಿ ಹುಡುಗಿ ಬಂದರೆ ಎರಡು ಜಡೆ ಅಂದರೆ 2 ಓಪನ್. ಆನೆಯೋ ಎಮ್ಮೆಯೋ ಬಂದರೆ 9 ಓಪನ್, ಹಾವು ಬಂದರೆ 7 ಓಪನ್ ಮತ್ತು ಕ್ಲೋಸ್ ಡಬ್ಬಲ್ ಡಿಜಿಟ್. ಅಂತೆಲ್ಲಾ ಯೋಚಿಸುತ್ತಿದ್ದರು ಈ ಮಹಾ ಮೇದಾವಿಗಳು. ಅವರ ಅದೃಷ್ಟವೋ, ಕಾಕತಾಳಿಯೋ ಮತ್ತೊಂದು ಅವರ ತರ್ಕದ ಒಂದು ನಂಬರ್ ಓಪನ್ನೋ ಕ್ಲೋಸೋ ಡಬ್ಬಲ್ ಡಿಜಿಟ್ಟೋ ಆಗಿ ವಿಸ್ಮಯ ಮೂಡಿಸುತ್ತಿತ್ತು. ಕನಸಿನ ಆಧಾರದಲ್ಲಿ ಹತ್ತೋ ಇಪ್ಪತ್ತೋ ರೂಪಾಯಿ ಕಟ್ಟಿದವನು 8 ಪಟ್ಟು ಹೆಚ್ಚು ಹಣ ಎಣಿಸಿ ಮನೆಗೆ ಖುಷಿಯಿಂದ ಹೋಗುತ್ತಿದ್ದರೆ, ಉಳಿದವರು ಮಾರನೆಯ ದಿನ ಕನಸುಗಳನ್ನು ಹುಡುಕುತ್ತಾ ಅಲೆಯುತ್ತಿದ್ದರು. ರಾತ್ರಿ ಏನಾದ್ರೂ ಕನಸು ಬಿತ್ತಾ ಅಂತ ಯಾರಾದ್ರೂ ಬೆಳ್ಳಂಬೆಳಿಗ್ಗೆ ಪ್ರಶ್ನೆ ಮಾಡಿದ್ರೆ ಅವನು ಖಂಡಿತಾ ಓಸಿ ಕಟ್ತಾನೆ ಅನ್ನುವುದು ಖಾತ್ರಿ. ನನಗೆ ತೀರಾ ಅಚ್ಚರಿ ಉಂಟುಮಾಡ್ತಿದ್ದಿದ್ದು, ಅಲ್ಲೆಲ್ಲೋ ಸಾವಿರಾರು ಕಿಲೋಮೀಟರ್ ದೂರದ ಬಾಂಬೆನಲ್ಲಿ ಕೂತ ರತನ್ ಲಾಲ್ ಖತ್ರಿಗೆ ಈ ಮುಂಡೇಮುಕ್ಳಿಗೆ ಬಿದ್ದ ಕನಸು ಹೇಗೆ ಗೊತ್ತಾಯ್ತು ಅನ್ನೋ ವಿಚಾರ.

ಇನ್ನು ಮತ್ತೊಂದಷ್ಟು ಪಂಡಿತರಿದ್ದರು. ಬೆಳಗ್ಗೆ ಬೆಳಿಗ್ಗೆಯೇ ಯಾವುದಾದ್ರೂ ಕ್ಯಾಂಟೀನ್ ಹೊಕ್ಕು ಅರ್ಧ ಟೀ ಆರ್ಡರ್ ಮಾಡಿ ಅವತ್ತಿನ ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ಕಾರ್ಟೂನ್ ಅನ್ನೇ ತದೇಕ ಚಿತ್ತರಾಗಿ ನೋಡುತ್ತಾ ಗಂಟೆಗಟ್ಟಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕೂತು ಬಿಡುತ್ತಿದ್ದರು. ಅವರು ಹೀಗೆ ಪರಮ ಯೋಗಿಗಳಂತೆ ಕಾರ್ಟೂನ್ ನೋಡುವುದನ್ನು ನೋಡಿದ ನಾನೂ ಬಹಳ ಸಲ ಅವರು ಹೋದ ನಂತರ ಅದೇ ಪತ್ರಿಕೆಯ ಅದೇ ಕಾರ್ಟೂನ್ ಅನ್ನು ಹಿಂದೆ ಮುಂದೆ ಮಾಡಿ ತಲೆಕೆಳಗಾಗಿಸಿ ನೋಡಿದ್ದೇನೆ. ಈ ಹುಟ್ಟಾ ಕಳ್ಳಬಡ್ಡಿಮಕ್ಕಳ ಅಂತರ್ ರ್ಜ್ಞಾನ ವೃದ್ಧಿಸುವ ಯಾವುದೇ ಸುಳಿವು ಅದರಲ್ಲಿಲ್ಲವಲ್ಲ ಅಂತ ತಲೆ ತುರಿಸಿಕೊಂಡು ಬಂದಿದ್ದೇನೆ. ಆಮೇಲೊಂದು ದಿನ ಗೊತ್ತಾದ ಸತ್ಯವೇನೆಂದರೆ ರತನ್ ಲಾಲ್ ಖತ್ರಿ ಮಾರನೆಯ ದಿನ ಹೊಡೆಯುವ ನಂಬರ್ ಸುಳಿವನ್ನು ಪ್ರಜಾವಾಣಿಯ ಕಾರ್ಟೂನ್ ನಲ್ಲಿ ಇಟ್ಟಿರುತ್ತಾನೆ ಅನ್ನುವುದು. ಮುಂಬೈ ಮಾರವಾಡಿ ರತನ್ ಲಾಲ್ ಖತ್ರಿಯೇನು ಪ್ರಜಾವಾಣಿ ಪತ್ರಿಕೆಯ ಬ್ರಾಂಡ್ ಅಂಬಾಸಡರ್ರಾ? ಇಂತದ್ದೊಂದು ಮೂಡನಂಬಿಕೆಯೂ ಕೆಲ ಕಾಲ ನಮ್ಮೂರಿನ ಓಸಿ ಎಂಬ ವಿಕ್ಷಿಪ್ತ ಲೋಕವನ್ನು ಆಳಿತ್ತು.

ಹೀಗೆ ಅಗೋಚರವಾಗಿ ಕುಳಿತು ಒಂದು ಟೆಲಿಫೋನ್ ಮೂಲಕ ಓಸಿ ಎನ್ನುವ ಬೃಹತ್ ಅನಧಿಕೃತ, ಅನೈತಿಕ, ಕಾನೂನು ಬಾಹಿರ ಜೂಜು ಸಾಮ್ರಾಜ್ಯ ಕಟ್ಟಿದ ರತನ್ ಲಾಲ್ ಖತ್ರಿ ಮೊನ್ನೆ ಶನಿವಾರ ತನ್ನ ಮುಂಬೈನ ನವಜೀವನ್ ಸೊಸೈಟಿಯ ಮನೆಯಲ್ಲಿ ಅನಾರೋಗ್ಯದಿಂದ ನಿಧನನಾಗಿದ್ದಾನೆಂದು ಅವನ ಕುಟುಂಬದ ಮೂಲಗಳು ತಿಳಿಸಿವೆ. ಖತ್ರಿ ಸಾಯುವಾಗ ಅವನಿಗೆ 88 ವರ್ಷ. ಸಾಯುವ ಕೊನೆಯ ಕಾಲದಲ್ಲೂ ಮಟಕಾ ಅಥವಾ ಓಸಿಯ ಅಂತಿಮ ಜಾಕ್ ಪಾಟ್ ನಂಬರ್ ಅನ್ನು ನಿರ್ಧರಿಸಿ ಪ್ರಕಟಿಸುತ್ತಿದ್ದಿದ್ದೇ ಖತ್ರಿ ಎನ್ನುವ ಮಾತುಗಳಿವೆ. ರತನ್ ಲಾಲ್ ಖತ್ರಿ ಭಾರತದ ಅತಿ ದೊಡ್ಡ ಓಸಿ ಜಾಲವನ್ನು ಕಟ್ಟುವ ಮೂಲಕ ಬೆಟ್ಟಿಂಗ್ ದಂದೆಯನ್ನು ಪ್ರಾರಂಭಿಸಿದ ಮೂಲಪುರುಷ ಅಂದ್ರೆ ತಪ್ಪಲ್ಲ. ಸಿಂಧಿ ಮನೆತನದವನಾದ ಖತ್ರಿ ಈ ದೇಶದವನೇ ಅಲ್ಲ. ಅವನ ಮೂಲಕ ಪಾಕಿಸ್ತಾನದ ಕರಾಚಿ. 1947ರಲ್ಲಿ ವಿಭಜನೆಯಾದಾಗ ಅಲ್ಲಿಂದ ಇಲ್ಲಿಗೆ ಖತ್ರಿಯ ಕುಟುಂಬ ವಲಸೆ ಬಂದಾಗ ಖತ್ರಿಗೆ ನಿಗಿನಿಗಿ ತಾರುಣ್ಯ. 1962ರಲ್ಲಿ ಮುಂಬೈನಲ್ಲಿ ಸಣ್ಣದಾಗಿ ಹುಟ್ಟಿಕೊಂಡ ನಂಬರ್ ಗೇಮ್ ಮಟಕಾವನ್ನು ಕಾನೂನಾತ್ಮಕಗೊಳಿಸುವ ಅಭಿಲಾಷೆ ಖತ್ರಿಗಿತ್ತು. ಮೊದಮೊದಲು ಇದನ್ನು ಪ್ರಯತ್ನ ಸಹ ಪಟ್ಟಿದ್ದನಂತೆ. ನಂತರ ಕ್ರಮೇಣ ದೇಶದ ಬೇರೆ ಬೇರೆ ಭಾಗಗಳಿಗೆ ಈ ಜಾಲವನ್ನು ವಿಸ್ತರಿಸಿ ಈ ಗ್ಯಾಂಬ್ಲಿಂಗ್ ನೆಟ್ವರ್ಕ್ ನ ಮುಖಟವಿಲ್ಲದ ಅನಭಿಷಿಕ್ತ ದೊರೆಯಂತೆ ದಶಕಗಳ ಕಾಲ ಆಳಿದ ರತನ್ ಲಾಲ್ ಖತ್ರಿ ಮಟಕಾ ಕಿಂಗ್ ಎಂದೇ ಪ್ರಖ್ಯಾತನೂ ವಿಖ್ಯಾತನೂ ಆಗಿದ್ದು ಈಗ ಇತಿಹಾಸ.

1960ರ ದಶಕದಲ್ಲಿ ಪ್ರಾರಂಭದಲ್ಲಿ ನ್ಯೂ ಯಾರ್ಕ್ ಕಾಟನ್ ಎಕ್ಸ್ ಚೇಂಜ್ ನ ಓಪನ್ ಮತ್ತು ಕ್ಲೋಸ್ ರೇಟ್ ಆಧಾರದಲ್ಲಿ ಖತ್ರಿ ಮಟಕಾದ ಓಪನ್ ಮತ್ತು ಕ್ಲೋಸ್ ನಿರ್ಧರಿಸುತ್ತಿದ್ದನಂತೆ. ಮೊದಲು ವರ್ಲಿ ಮಟಕಾ ಎಂದು ಹೆಸರಿಟ್ಟಿದ್ದ ಈ ವಹಿವಾಟಿಗೆ ನಂತರದ ದಿನಗಳಲ್ಲಿ ರತನ್ ಮಟಕಾ ಎನ್ನುವ ಹೆಸರೇ ಖಾಯಮ್ಮಾಯ್ತು. ಆ ಕಾಲದಲ್ಲಿ ದಿನವೊಂದಕ್ಕೆ ಓಪನ್ ಕ್ಲೋಸ್ ನಂಬರ್ ಗೇಮ್ ವಹಿವಾಟು 1 ಕೋಟಿ ಮುಟ್ಟಿತ್ತೆಂದರೆ ರತನ್ ಲಾಲ್ ಖತ್ರಿ ಎಂತಹ ಚಾಣಾಕ್ಷ ಜೂಜುಕೋರ ಅನ್ನುವುದನ್ನು ನೀವೇ ಅರ್ಥ ಮಾಡಿಕೊಳ್ಳಿ. ಆದ್ರೆ ಒಂದಂತೂ ಸತ್ಯ. ರತನ್ ಲಾಲ್ ಖತ್ರಿ ತಾನು ಸಾಯುವ ತನಕ ಯಾರಿಗೇ ಜಾಕ್ ಪಾಟ್ ಹೊಡೆದರೂ ನಯಾ ಪೈಸೆ ಇಟ್ಟುಕೊಳ್ಳದೇ ಕೊಟ್ಟಿದ್ದಾನೆ. ಮಾಡಿದ್ದು ಕಾನೂನು ಬಾಹಿರ ವಹಿವಾಟೇ ಆದರೂ ಖತ್ರಿ ಯಾರಿಗೂ ವಂಚನೆ ಮಾಡಿಲ್ಲ. ಈ ಸುದ್ದಿ ಕೇಳಿ ನಮ್ಮ ತ್ಯಾಗರ್ತಿಯ ಓಸಿ ಪ್ರಿಯರ ಮನಸುಗಳಿಗೆ ಸೂತಕ ಕವಿದಿರಬಹುದು. ನಾಳೆಯಿಂದ ಓಸಿ ನಂಬರ್ ಯಾರು ಎತ್ತುತ್ತಾರೆ ಎಂದು ಯೋಚಿಸುತ್ತಾ ಅನಾಥ ಭಾವದಿಂದ ಅವರೆಲ್ಲಾ ಚಿಂತಿಸುತ್ತಾ ರತನ್ ಲಾಲ್ ಖತ್ರಿಗೊಂದು ಶ್ರದ್ಧಾಂಜಲಿ ಅರ್ಪಿಸುತ್ತಿರಬಹುದೇನೋ?

-ವಿಭಾ


ShareTweetSendShare
Join us on:

Related Posts

reliance-digital-india-sale-disco-offers-august-2026

ರಿಲಯನ್ಸ್ ಡಿಜಿಟಲ್ ತಂದಿದೆ ‘ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್

by admin
August 13, 2026
0

ರಿಲಯನ್ಸ್ ಡಿಜಿಟಲ್ ತಂದಿದೆ 'ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್ (D.I.S.C.O.)' ಸ್ಮಾರ್ಟ್ಫೋನ್‌ಗಳು, ಗೃಹೋಪಯೋಗಿ ವಸ್ತುಗಳು, ಟಿವಿಗಳು, ಲ್ಯಾಪ್ ಟಾಪ್ ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ಗಳ ಮೇಲೆ ವಿಶೇಷ ಕೊಡುಗೆಗಳು ಮುಂಬೈ,  2026: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ರಿಟೇಲರ್  ರಿಲಯನ್ಸ್ ಡಿಜಿಟಲ್, ತನ್ನ ಅಪ್ರತಿಮ ಡಿಜಿಟಲ್ ಇಂಡಿಯಾ ಸೇಲ್‌ಗಾಗಿ ಹೊಸ ಗುರುತನ್ನು D.I.S.C.O. (ಡಿಜಿಟಲ್ ಇಂಡಿಯಾ ಸೇಲ್ ಕ್ರೇಜಿ ಆಫರ್ಸ್) ಅನ್ನು ಪ್ರಾರಂಭಿಸಿದೆ. ರಿಲಯನ್ಸ್ ಡಿಜಿಟಲ್ ಸ್ಟೋರ್ಸ್, RelianceDigital.in ಮತ್ತು ಮೈಜಿಯೋ ಸ್ಟೋರ್ಸ್‌ನಲ್ಲಿ ಆಗಸ್ಟ್ 16 ರವರೆಗೆ ಚಾಲನೆಯಲ್ಲಿರುವ ಈ ಅಭಿಯಾನವು ಸ್ಮಾರ್ಟ್ಫೋನ್‌ಗಳು, ಟಿವಿಗಳು, ಲ್ಯಾಪ್‌ಟಾಪ್, ಗೃಹೋಪಯೋಗಿ ವಸ್ತುಗಳು ಮತ್ತು ಹೆಚ್ಚಿನವುಗಳ ಮೇಲೆ ವಿಶೇಷ ಕೊಡುಗೆಗಳನ್ನು ತಂದಿದೆ. ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳ ಮೇಲಿನ ಋತುವಿನ ಕೆಲವು ಅತ್ಯುತ್ತಮ ಡೀಲ್ ಗಳನ್ನು ಒಟ್ಟುಗೂಡಿಸುವ ಈ ಮಾರಾಟವು ಹಳೆಯ ಉತ್ಪನ್ನಗಳ ಮೇಲೆ ವರ್ಧಿತ ವಿನಿಮಯ ಮೌಲ್ಯ, ಆಯ್ದ ಎಲೆಕ್ಟ್ರಾನಿಕ್ಸ್ ಮೇಲೆ ₹ 15,000 ವರೆಗೆ ಎಕ್ಸ್‌ಚೇಂಜ್ ಬೋನಸ್, ಎರಡನೇ ಉತ್ಪನ್ನದ ಖರೀದಿಗೆ ಫ್ಲಾಟ್ 50% ರಿಯಾಯಿತಿ, ಬ್ಯಾಂಕ್ ಕಾರ್ಡ್‌ಗಳು, ಪೇಪರ್ ಫೈನಾನ್ಸ್ ಮತ್ತು ಯುಪಿಐ ಮೂಲಕ ₹ 30,000 ವರೆಗೆ ರಿಯಾಯಿತಿ ಮತ್ತು ಮಾರಾಟದ ಸಮಯದಲ್ಲಿ ಪೂರಕ ಒಂದು ವರ್ಷದ ವಿಸ್ತೃತ ವಾರಂಟಿಯನ್ನು ನೀಡುತ್ತದೆ. ನಿಮ್ಮ ಸ್ಮಾರ್ಟ್ಫೋನ್, ಟಿವಿ, ಲ್ಯಾಪ್‌ಟಾಪ್ ಅಥವಾ ಗೃಹೋಪಯೋಗಿ ಉಪಕರಣಗಳನ್ನು ಅಪ್ಗ್ರೇಡ್ ಮಾಡಲು ಯೋಜಿಸುತ್ತಿದ್ದರೂ, ಅದನ್ನು ಮಾಡಲು ಇದಕ್ಕಿಂತ ಉತ್ತಮ ಸಮಯ ಎಂದಿಗೂ ಸಿಗಲಾರದು.  D.I.S.C.O. ಕೊಡುಗೆಗಳ ವಿವರ ಇಲ್ಲಿದೆ: ಸ್ಮಾರ್ಟ್ಫೋನ್‌ಗಳು ಮತ್ತು ಪರಿಕರಗಳು: ಗ್ರಾಹಕರು ₹10,999 ರಿಂದ ಪ್ರಾರಂಭವಾಗುವ ಕೈಗೆಟುಕುವ 4G ಸ್ಮಾರ್ಟ್ಫೋನ್, ₹13,999 ನಿಂದ 5G ಸ್ಮಾರ್ಟ್ಫೋನ್ ಅಥವಾ ಐಫೋನ್‌ಗಳು ಮತ್ತು ₹2 ಲಕ್ಷದವರೆಗೆ ಬೆಲೆಯ ಫೋಲ್ಡೆಬಲ್ ಫೋನ್ ಸೇರಿದಂತೆ ಪ್ರೀಮಿಯಂ ಫ್ಲ್ಯಾಗ್ ಶಿಪ್ ಸಾಧನಗಳನ್ನು ಹುಡುಕುತ್ತಿರಲಿ, ರಿಲಯನ್ಸ್ ಡಿಜಿಟಲ್ ಪ್ರತಿ ಬೆಲೆ ವಿಭಾಗದಲ್ಲಿ ಆಯ್ಕೆಗಳನ್ನು ಹೊಂದಿದೆ. ಗ್ರಾಹಕರು 30 ತಿಂಗಳವರೆಗೆ ನೋ ಕಾಸ್ಟ್ ಇಎಂಐ, ಆಯ್ದ ಸ್ಮಾರ್ಟ್ಫೋನ್‌ಗಳಿಗೆ 10,000 ರೂ.ವರೆಗೆ ವಿನಿಮಯ ಬೋನಸ್, ಇಯರ್ಬಡ್‌ಗಳು, ಹೆಡ್ಫೋನ್‌ಗಳು, ಬ್ಲೂಟೂತ್ ಸ್ಪೀಕರ್‌ಗಳು, ಧರಿಸಬಹುದಾದ ವಸ್ತುಗಳು ಮತ್ತು ಮೊಬೈಲ್ ಬಿಡಿಭಾಗಗಳಿಗೆ ಯುಪಿಐ ಪಾವತಿಗಳ ಮೇಲೆ 10% ವರೆಗೆ ರಿಯಾಯಿತಿ ಮತ್ತು ಆಯ್ದ ಬ್ಲೂಟೂತ್ ಸ್ಪೀಕರ್,, ಇಯರ್ಬಡ್ ಮತ್ತು ಪವರ್ ಬ್ಯಾಂಕ್ ಮೇಲೆ ₹15,000 ಅಥವಾ ಅದಕ್ಕಿಂತ ಹೆಚ್ಚಿನ ಬೆಲೆಯ ಖರೀದಿಗಳೊಂದಿಗೆ ಫ್ಲಾಟ್ 50% ರಿಯಾಯಿತಿ ಪಡೆಯಬಹುದು. ಗೃಹೋಪಯೋಗಿ ಉಪಕರಣಗಳು: ₹50,000 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಗೆ ಶಾಪಿಂಗ್ ಮಾಡಿ ಮತ್ತು 43,900 ರೂ.ಗಳ ಡೈಸನ್ ಬಿಗ್ ಬಾಲ್ ವ್ಯಾಕ್ಯೂಮ್ ಕ್ಲೀನರ್ ಅನ್ನು 13,900 ರೂ.ಗೆ ಪಡೆಯಿರಿ. ₹39,990 ನಿಂದ ಪ್ರಾರಂಭವಾಗುವ 65-ಇಂಚಿನ 4K UHD ಗೂಗಲ್ ಟಿವಿ ಮೂಲಕ  ನಿಮ್ಮ ಮನೆಯ ಮನರಂಜನೆಯನ್ನು ನವೀಕರಿಸಿ, ಮತ್ತು ₹39,990 ನಿಂದ ಪ್ರಾರಂಭವಾಗುವ ಸೈಡ್ ಬೈ ಸೈಡ್ ರೆಫ್ರಿಜರೇಟರ್ ಆಯ್ಕೆ ಮಾಡಿ ಮತ್ತು 12000/- ವರೆಗಿ‌ನ ಮೌಲ್ಯದ ಉಚಿತ ಪಡೆಯಿರಿ ಮತ್ತು 15,000/-ವರೆಗೆ ವಿನಿಮಯ ಪ್ರಯೋಜನಗಳನ್ನು ಪಡೆಯಿರಿ. ಗ್ರಾಹಕರು *₹18,000 ಮೌಲ್ಯದ ಉಚಿತಗಳೊಂದಿಗೆ ₹55,990 ರಿಂದ ಪ್ರಾರಂಭವಾಗುವ ವಾಷರ್ ಡ್ರೈಯರ್ ಅನ್ನು ಸಹ ಮನೆಗೆ ತರಬಹುದು. ಲ್ಯಾಪ್ ಟಾಪ್‌ಗಳು: ಕೇವಲ ₹ 39,999 ರಿಂದ ಪ್ರಾರಂಭವಾಗುವ ಲ್ಯಾಪ್ ಟಾಪ್‌ಗಳ ಮೇಲೆ ₹ 5,000 ವರೆಗೆ ಉಚಿತ 1+2 ವರ್ಷಗಳ ವಿಸ್ತೃತ ವಾರಂಟಿ ಮತ್ತು ವಿನಿಮಯ ಪ್ರಯೋಜನಗಳನ್ನು ಪಡೆಯಿರಿ.

upendra-next-level-movie-launch-aradhana-ram-pair

ʻರಿಯಲ್ ಸ್ಟಾರ್ʼ ಉಪೇಂದ್ರ ಅಭಿನಯದ ಕನ್ನಡ – ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಬಿಗ್‌ ಬಜೆಟ್‌ ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

by admin
August 13, 2026
0

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ, ಕನ್ನಡ - ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ‘ನೆಕ್ಟ್ಸ್‌ ಲೆವೆಲ್’ (Next Level) ಅಧಿಕೃತವಾಗಿ ಆರಂಭವಾಗಿದೆ....

ashoka-university-placements-100-percent-record-highest-package

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು!

by admin
August 13, 2026
0

ಕ್ಯಾಂಪಸ್ ಪ್ಲೇಸ್‌ಮೆಂಟ್‌ನಲ್ಲಿ ಅಶೋಕ ವಿವಿ 100% ಸಾಧನೆ, ಗರಿಷ್ಠ 42.5 ಲಕ್ಷ ರೂ. ಪ್ಯಾಕೇಜ್ ಪಡೆದು ಬೀಗಿದ ವಿದ್ಯಾರ್ಥಿಗಳು! ದೆಹಲಿ - ಎನ್‌ಸಿಆರ್ ಮೂಲದ ಪ್ರಸಿದ್ಧ ಅಶೋಕ...

shatkarma-kerala-mantravada-truth-psychology

Astro- ಈ_ಪ್ರಯೋಗಗಳು_ಕೇರಳದ_ಮಂತ್ರವಾದದ_ಅತ್ಯಂತ_ಹಳೆಯ_ಭಾಗ.

by admin
August 13, 2026
0

ಇದನ್ನ ಷಟ್ಕರ್ಮ ಅಂತ ಕರೀತಾರೆ - ಅಂದ್ರೆ 6 ಕರ್ಮಗಳು. ಒಡಿಯನ್ ವಿದ್ಯೆಯೂ ಇದರಲ್ಲೇ ಬರುತ್ತೆ. ಇವು ಅಥರ್ವಣ ವೇದದಿಂದ ಬಂದಿವೆ ಅಂತ ಹೇಳ್ತಾರೆ. ಶ್ರೀ ಕ್ಷೇತ್ರ...

nagara-panchami-2026-date-muhurat-significance

ನಾಗ ಪಂಚಮಿ ಹಬ್ಬದ ಮಹತ್ವ ಮತ್ತು ಆಚರಣೆಯ ಮುಖ್ಯಾಂಶಗಳು

by admin
August 13, 2026
0

ನಾಗ ಪಂಚಮಿ ಸೋಮವಾರ, ಆಗಸ್ಟ್ 17, 2026 ನಾಗ ಪಂಚಮಿ ಪೂಜೆ ಮುಹೂರ್ತ - 05:51 AM ರಿಂದ 08:29 AM ಅವಧಿ - 02 ಗಂಟೆಗಳು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram