The modern Bhagirath is no more-ಆಧುನಿಕ ಭಗೀರಥ ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದ ಕಲ್ಮನೆ ಕಾಮೆ ಗೌಡ ಅವರು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನವರು ಕುಂದನ ಬೆಟ್ಟದಲ್ಲಿ 17ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ ಅವರು ಅನಾರೋಗ್ಯದಿಂದ ಇಂದು ನಿಧನರಾಗಿದ್ದಾರೆ.
ಪತ್ನಿ ಇಬ್ಬರು ಗಂಡು ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ ಅವರನ್ನ ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ನಡೆಯಲಿದೆ.
ಅಂತರ್ಜಲ ವೃದ್ದಿಗೆ ನೆರವಾಗಲು ಕುಂದನ ಬೆಟ್ಟದಲ್ಲಿ (kundana betta) 17ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿದ ಕಲ್ಮನೆ ಕಾಮೇಗೌಡ ಅವರಿಗೆ (Kalmane Kamegowda) 84 ವರ್ಷ ವಯಸ್ಸಾಗಿತ್ತು.
ಪ್ರಾಣಿ, ಪಕ್ಷಿಗಳು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೆ ಆಸರೆ ಒದಗಿಸಿದ್ದ ಕಾಮೇಗೌಡ ಅವರು . ಕೆರೆಯ ನೀರು ಕಲುಷಿತವಾಗದಂತೆ ಹಾಗೂ ಕೆರೆಯಲ್ಲಿ ಜಾನುವಾರುಗಳನ್ನು ತೊಳೆಯದಂತೆ ಕವಲು ಕಾಯುತ್ತಿದ್ದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್ ನಲ್ಲಿ ಪರಿಸರ ಪ್ರೇಮಿಯಾದ ಕಲ್ಮನೆ ಕಾಮೇಗೌಡ ಅವರ ಸಾಧನೆಯನ್ನು ಪ್ರಶಂಸಿಸಿದ್ದರು. ನಿನ್ನೆ ತೀವ್ರ ಅಸ್ವಸ್ಥರಾಗಿದ್ದ ಅವರು ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ಕಲ್ಮನೆ ಕಾಮೇಗೌಡರು ಕುರಿಗಾರರಾಗಿದ್ದು ತಮ್ಮ ಸಣ್ಣ ವಯಸ್ಸಿನಲ್ಲೆ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ಗ್ರಾಮದ ಸಮೀಪದಲ್ಲಿರುವ ಕುಂದೂರು ಬೆಟ್ಟದಲ್ಲಿ ಸ್ವಂತ ದುಡ್ಡಿನಲ್ಲೆ 16 ಕೆರೆಗಳನ್ನು ನಿರ್ಮಾಣ ಮಾಡಿದ್ದ ಕಾಮೇಗೌಡರು ಅಂತರ್ಜಲ ವೃದ್ಧಿಗಾಗಿ ಪಣತೊಟ್ಟಿದ್ದ ಅವರು ಕೆರೆ ನಿರ್ಮಾಣ ಮಾಡಿ ಕಾಡಿನ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕೆಲಸ ಮಾಡುವ ಮೂಲಕ ಆಧುನಿಕ ಭಗೀರಥ ಎಂದೆ ಪ್ರಖ್ಯಾತರಾಗಿದ್ದರು.
ಕೆರೆ ಮಾತ್ರವಲ್ಲದೆ ಬೆಟ್ಟದ ತಪ್ಪಲಿನಲ್ಲಿ ಗಿಡ, ಮರಗಳನ್ನು ನೆಟ್ಟು ಅವುಗಳನ್ನ ಪೋಷಿಸುವ ಹೊಣೆ ಹೊತ್ತಿದ್ದರು. ಅನಕ್ಷರಸ್ಥರಾಗಿದ್ದ ಅವರಿಗೆ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.