ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ, ಒಂದು ಓವರ್‌ನಲ್ಲಿ ಒಟ್ಟು 11 ಎಸೆತಗಳನ್ನು ಬೌಲ್ ಮಾಡಲಾಗಿದ್ದು, ಇದರಲ್ಲಿ ತಂಡವು 20 ರನ್ ಗಳಿಸಿದೆ. ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ನಡುವೆ ನಡೆದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಈ ಅದ್ಭುತ ನಡೆದಿದೆ.
ಚೆಪಾಕ್ ಸೂಪರ್ ಗಿಲ್ಲಿಸ್ ಮತ್ತು ಸೇಲಂ ಸ್ಪಾರ್ಟನ್ಸ್ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆಪಾಕ್ ತಂಡ 5 ವಿಕೆಟ್‌ಗೆ 217 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಸೇಲಂ ತಂಡ 9 ವಿಕೆಟ್ ಗೆ 165 ರನ್ ಗಳಿಸಲಷ್ಟೇ ಶಕ್ತವಾಯಿತು.
ಸೇಲಂ ಬೌಲರ್ ಅಭಿಷೇಕ್ ತನ್ವಾರ್ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಒಟ್ಟು 20 ರನ್ ನೀಡಿದರು. ಓವರ್‌ನ 5 ಎಸೆತಗಳನ್ನು ಪರಿಪೂರ್ಣ ಯಾರ್ಕರ್‌ನೊಂದಿಗೆ ಎಸೆದರು. ಕೊನೆಯ ಎಸೆತದಲ್ಲಿ ಬ್ಯಾಟ್ಸ್ಮನ್ನ್ನು ಕ್ಲೀನ್ ಬೋಲ್ಡ್ ಮಾಡಿದರು. ಆದರೆ ಆ ಕೊನೆಯ ಎಸೆತ ನೋ ಬಾಲ್ ಆಗಿತ್ತು. ಇಲ್ಲಿಂದ ಸಂಪೂರ್ಣ ಓವರ್ ವಿಚಾರ ತಲೆಕೆಳಗಾಗಿತ್ತು. ಈ ಓವರ್ ಅನ್ನು ಮುಗಿಸಲು ಅವರು 11 ಎಸೆತಗಳನ್ನು ಬೌಲ್ ಮಾಡಿದರು.
ನೋ ಬಾಲ್ ನಂತರ 6 ಎಸೆತಗಳನ್ನು ಎಸೆದ ಅಭಿಷೇಕ್ ಕೇವಲ 1 ಬಾಲ್ ಮಾತ್ರ ಸರಿಯಾಗಿ ಮಾಡಲು ಶಕ್ತರಾದರು. ಫ್ರೀ ಹಿಟ್‌ನಲ್ಲಿ 1 ರನ್ ಗಳಿಸಿದರು ಮತ್ತು ನಂತರದ ಎಸೆತವನ್ನು ಮತ್ತೆ ನೋ ಬಾಲ್ ಬೌಲ್ ಮಾಡಿದರು. ಆ ನೋ ಬಾಲ್ ಎಸೆತದಲ್ಲಿ ಮತ್ತೆ ಸಿಕ್ಸರ್ ಬಾರಿಸಿದರು. ಇದಾದ ನಂತರ ಮತ್ತೊಮ್ಮೆ ನೋ ಬಾಲ್ ಆಯಿತು. ಆ ಎಸೆತದಲ್ಲಿ 2 ರನ್ ಗಳಿಸಿದರು. ಮುಂದಿನ ಚೆಂಡು ವೈಡ್ ಆಗಿತ್ತು. ಇದರೊಂದಿಗೆ ಬೌಲರ್ ಕೊನೆಯ ಎಸೆತ ಇನ್ನೂ ಬಾಕಿ ಇರುವಾಗಲೇ 12 ರನ್ ನೀಡಿದ್ದರು. ಕೊನೆಯ ಬಾಲ್ ನಲ್ಲಿ ಸಂಜಯ್ ಯಾದವ್ ಸಿಕ್ಸರ್ ಬಾರಿಸಿದರು.








