ಮೋಸ್ಟ್ ವ್ಯಾಲ್ಯುಬಲ್ ಕ್ರಿಕೆಟರ್ ಆಫ್ ದಿ ಇಯರ್ ಯಾರು ಗೊತ್ತಾ..?
ಪಾಕಿಸ್ತಾನ ಕ್ರಿಕೆಟ್ ಮಂಡಳಿಯು 2021 ರ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.
2021 ರಲ್ಲಿ, ಪಾಕಿಸ್ತಾನವು ಉತ್ತಮ ಯಶಸ್ಸನ್ನು ಸಾಧಿಸಿದೆ.
T20 ವಿಶ್ವಕಪ್-2021 ರಲ್ಲಿ,ದೀರ್ಘಕಾಲದ ಎದುರಾಳಿಯಾದ ಭಾರತದ ವಿರುದ್ಧ ಪಾಕಿಸ್ತಾನ ತಂಡವು 10 ವಿಕೆಟ್‌ಗಳಿಂದ ಐತಿಹಾಸಿಕ ಜಯವನ್ನು ದಾಖಲಿಸಿತ್ತು.
ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ಪಾಕಿಸ್ತಾನ ಸೋಲಿಸಿದ್ದು ಇದೇ ಮೊದಲು. ಇದರೊಂದಿಗೆ, ಟಿ20ಯಲ್ಲಿ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು (20) ಜಯಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನ ಪಾತ್ರವಾಗಿದೆ.
ಆರಂಭಿಕರಾದ ಮೊಹಮ್ಮದ್ ರಿಜ್ವಾನ್ ಮತ್ತು ನಾಯಕ ಬಾಬರ್ ಅಜಮ್ ಪಾಕಿಸ್ತಾನದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಇವರೊಂದಿಗೆ ಬೌಲರ್ ಹಸನ್ ಅಲಿ ಮತ್ತು ಶಾಹೀನ್ ಶಾ ಆಫ್ರಿದಿ ಬೌಲಿಂಗ್ ನಲ್ಲಿ ಅದ್ಭುತವಾಗಿ ಮಿಂಚಿದ್ದಾರೆ.
ಈ ಮಧ್ಯೆ ಪಾಕಿಸ್ತಾನದ ಆರಂಭಿಕ ಆಟಗಾರ ಮೊಹಮ್ಮದ್ ರಿಜ್ವಾನ್ ವರ್ಷದ ಅತ್ಯಂತ ಮೌಲ್ಯಯುತ ಕ್ರಿಕೆಟಿಗ ಪ್ರಶಸ್ತಿಗೆ ಬಾಜನರಾಗಿದ್ದಾರೆ.
ಕಳೆದ ವರ್ಷ ಟಿ20ಯಲ್ಲಿ ರಿಜ್ವಾನ್ 1,326 ರನ್ ಗಳಿಸಿದ್ದರು. ಇನ್ನು ಹಸನ್ ಅಲಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೆ ಭಾಜನವಾದರೆ, ನಾಯಕ ಬಾಬರ್ ಅಜಮ್ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಅದೇ ರೀತಿ ಪಾಕಿಸ್ತಾನದ ಯುವ ಬೌಲರ್ ಮೊಹಮ್ಮದ್ ವಾಸಿಮ್ ವರ್ಷದ ಜೂನಿಯರ್ ಉದಯೋನ್ಮುಖ ಕ್ರಿಕೆಟಿಗ ಪ್ರಶಸ್ತಿ ಪಡೆದುಕೊಂಡಿದ್ದಾರೆ.









