ಬೆಂಗಳೂರು: ಉಜ್ಬೇಕಿಸ್ತಾನದ ಮಹಿಳೆಯ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದು ಕೊಲೆ ಎಂಬುವುದು ತನಿಖೆಯಿಂದ ತಿಳಿದು ಬಂದಿದೆ. ಅಸ್ಸಾಂನ ಅಮೃತ್ ಹಾಗೂ ರಾಬರ್ಟ್ ಎಂಬುವವರು ಬಂಧಿತ ಆರೋಪಿಗಳು. ಆರೋಪಿಗಳು ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದಿದ್ದರು. ಬಿಡಿಎ ಹತ್ತಿರದ ಹೋಟೆಲ್‌ನ ಸ್ವಚ್ಛತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.
ಶೇಷಾದ್ರಿಪುರಂನ ಜಗದೀಶ್ ಹೋಟೆಲ್‌ನಲ್ಲಿ ಉಜ್ಬೇಕಿಸ್ತಾನದ ಮಹಿಳೆ ಸಾವನ್ನಪ್ಪಿದ್ದರು. ಪೊಲೀಸರ ತನಿಖೆಯಲ್ಲಿ ಇದು ಕೊಲೆ ಎಂಬುವುದು ತಿಳಿದು ಬಂದಿಲ್ಲು. ಈ ಮಹಿಳೆ ಕಳೆದ ಕೆಲವು ವರ್ಷಗಳಿಂದ ಭಾರತ ಪ್ರವಾಸ ಮಾಡುತ್ತಿದ್ದು, 50ಕ್ಕೂ ಅಧಿಕ ಬಾರಿ ಭಾರತಕ್ಕೆ ಬಂದಿದ್ದರು. ಮಹಿಳೆ ಹೋಟೆಲ್‌ಗೆ ಬಂದಾಗ ರಷ್ಯನ್ ಕಾಲ್‌ಗರ್ಲ್ ಅಂತಾ ಕಸ್ಟಮರ್ ಒಬ್ಬ ಬಂದಿದ್ದಾನೆ. ಆಗ ಇವರು ರಷ್ಯನ್ ಅಲ್ಲ ಎಂಬುವುದು ಗೊತ್ತಾದಾಗ ಹಣ ನೀಡಿ ಹೋಗಿದ್ದಾನೆ. ಈ ವೇಳೆ ಆಸ್ಸಾಂ ಮೂಲದ ಇವರು ಕೂಡ ಕಾಲ್ ಗರ್ಲ್ ಅಂದುಕೊಂಡು ಅನುಚಿತವಾಗಿ ವರ್ತಿಸಿದ್ದಾರೆ. ಆಗ ವಿದೇಶಿ ಮಹಿಳೆ ಕಪಾಳಮೋಕ್ಷ ಮಾಡಿದ್ದಾರೆ. ಆಗ ಕೋಪಗೊಂಡು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಮಹಿಳೆ ಬಳಿಯಿದ್ದ ವಿದೇಶಿ ಹಣ, ರೂಪಾಯಿ, ಮೊಬೈಲ್ ತೆಗೆದುಕೊಂಡು ಕೇರಳದಲ್ಲಿ ತಲೆ ಮರೆಸಿಕೊಂಡಿದ್ದಾರೆ. ಸದ್ಯ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.