ಮದ್ದೂರಿನಲ್ಲಿ ಆಲೆಮನೆ ಕಾರ್ಮಿಕನ ಕೊಲೆ murder saaksha tv
ಮದ್ದೂರು: ಆಲೆಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು, ಸಹೋದ್ಯೋಗಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.
ಉತ್ತರ ಪ್ರದೇಶದ ಮುಜಾಫರ್ ಜಿಲ್ಲೆ, ಬುಡನಾ ತಾಲ್ಲೂಕಿನ, ಮುಂಡಾಫರ್ ಗ್ರಾಮದ ರೋಥಾಸ್ (46) ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಮುಜಾಫರ್ ನಗರದ ಬ್ರಷ್ ಮೋಹನ್ ಎಂಬಾತ ರೋಥಾಸ್ ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು, ಗೆಜ್ಜಲಗೆರೆ ಗ್ರಾಮದ ಸತೀಶ್ ಎಂಬವರ ಆಲೆ ಮನೆ ಹಿಂಭಾಗದ ಇಟ್ಟಿಗೆ ಗೂಡಿನಲ್ಲಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಸತೀಶ್ ಅವರ ಅಲೆ ಮನೆಯಲ್ಲಿ ಒಂದು ವಾರದಿಂದ ಇಬ್ಬರೂ ಕೆಲಸ ಮಾಡುತ್ತಿದ್ದರು. ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಈ ವೇಳೆ ಮೋಹನ್ ಮತ್ತು ರೋಥಾ ನಡುವೆ ಜಗಳವಾಗಿದೆ ಎನ್ನಲಾಗಿದ್ದು, ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.