Mysore | ಟೊಮೆಟೊ ವಿಚಾರಕ್ಕೆ ಮಹಿಳೆ ಕೊಲೆ!
ಮೈಸೂರು : ಕೊಳೆತ ಟೊಮೇಟೋಗಳನ್ನು ರಸ್ತೆಗೆ ಎಸೆದ ವಿಚಾರಕ್ಕೆ ಮಹಿಳೆಯನ್ನು ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಉದಯಗಿರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರಿನ ಉದಯಗಿರಿಯ ಕೆ.ಎನ್.ಪುರ ದ ಗಿರೀಶ್ ಹಾಗೂ ಶಿವರಾಜ್ ಬಂಧಿತ ಆರೋಪಿಗಳಾಗಿದ್ದಾರೆ.
ಇವರು ಫೆಬ್ರವರಿ 2 ರಂದು ಕೆ.ಎನ್.ಪುರದ ನಿವಾಸಿ ಸುನೀತಾ ಎಂಬಾಕೆಯನ್ನು ಭೀಕರವಾಗಿ ಕೊಲೆ ಮಾಡಿ ನಂತರ ಆಕೆಯ ತಾಯಿ ಭಾರತಿ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು.
ಫೆಬ್ರವರಿ 2ರಂದು ಸುನೀತಾ ಅವರ ತಾಯಿ ಭಾರತಿ ಕೊಳೆತ ಟೊಮೋಟೊಗಳನ್ನು ಬೀದಿಗೆ ಬಿಸಾಡಿದ್ದರು.
ಈ ವಿಚಾರದಲ್ಲಿ ಶಿವರಾಜು ಮಗ ಗಿರೀಶ್ ಕ್ಯಾತೆ ತೆಗೆದಿದ್ದಾರೆ. ಇಬ್ಬರ ನಡುವೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿದೆ.
ಈ ವೇಳೆ ಗಿರೀಶ್ ಮಚ್ಚಿನಿಂದ ಸುನಿತಾ ಮೇಲೆ ಹಲ್ಲೆ ನಡೆಸಿದ್ದಾನೆ. ಜಗಳ ಬಿಡಿಸಲು ಬಂದ ಸುನಿತಾರ ತಾಯಿ ಭಾರತಿ ಮೇಲೂ ಹಲ್ಲೆ ನಡೆಸಿದ್ದಾನೆ.
ಇದರಿಂದ ಸ್ಥಳದಲ್ಲಿಯೇ ಸುನಿತಾ ಮೃತಪಟ್ಟಿದ್ದಾರೆ. ತಾಯಿ ಭಾರತಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯ ಬಳಿಕ ಇಬ್ಬರು ಆರೋಪಿಗಳು ಪರಾರಿಯಾಗಿದ್ದರು.
ಇತ್ತ ಈ ಸಂಬಂಧ ಪ್ರಕರಣದಾಖಲಿಸಿಕೊಂಡಿದ್ದ ಉದಯಗಿರಿ ಠಾಣಾ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು.
ಇದೀಗ ಆರೋಪಿಗಳು ತಮಿಳುನಾಡಿನ ಧರ್ಮಪುರಿಯಲ್ಲಿ ಪತ್ತೆಯಾಗಿದ್ದು, ಅವರನ್ನ ಅರೆಸ್ಟ್ ಮಾಡಲಾಗಿದೆ.
The murder of a woman for a rotten tomato issue; police arrest two people at mysore









