ಬೆಳಗಾವಿ: 2ನೇ ಹೆಂಡತಿ ಬಿಟ್ಟು ತನ್ನ ಹತ್ತಿರ ಇರುವಂತೆ ಪೀಡಿಸುತ್ತಿದ್ದ ಮೊದಲ ಪತ್ನಿಯನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಬೆಳಗಾವಿ (Belagavi) ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ. ಶಮಾ ರಿಯಾಜ್ ಪಠಾಣ್(25) ಕೊಲೆಯಾಗಿರುವ ಪತ್ನಿ. ರಿಯಾಜ್ ಪಠಾಣ್(30) ಕೊಲೆ ಮಾಡಿದ ಪಾಪಿ ಗಂಡ. ಎರಡನೇ ಹೆಂಡತಿ ಫರ್ಜಾನಾ ಪಠಾಣ್ ಮಾತು ಕೇಳಿ, ಶಮಾ ಮಲಗಿದ್ದಾಗ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
10 ವರ್ಷಗಳ ಹಿಂದೆ ಶಮಾಳೊಂದಿಗೆ ರಿಯಾಜ್ ಮದುವೆಯಾಗಿದ್ದ (Marriage). ಒಂದೂವರೆ ವರ್ಷದ ಹಿಂದೆ ಫರ್ಜಾನಾ ಜೊತೆಗೆ 2ನೇ ಮದುವೆಯಾಗಿದ್ದ. ಮೂರು ದಿನ ಮೊದಲ ಹೆಂಡತಿ, 4 ದಿನ 2ನೇ ಹೆಂಡತಿ ಮನೆಯಲ್ಲಿರುತ್ತಿದ್ದ. ಆದರೆ, ಶಮಾ 2ನೇ ಹೆಂಡತಿಯನ್ನು (Wife) ಬಿಟ್ಟು ತನ್ನ ಬಳಿಯೇ ಇರುವಂತೆ ಪೀಡಿಸುತ್ತಿದ್ದರು. ಇದಕ್ಕೆ ಆತ ಒಪ್ಪಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಮಾ ಮೇಂಟೆನೆನ್ಸ್ ಕೇಸ್ ಹಾಕುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಳು ಎನ್ನಲಾಗಿದೆ.
ಈ ವಿಚಾರ ತಿಳಿದು ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ನಂತರ ಎರಡನೇ ಪತ್ನಿಯೊಂದಿಗೆ ಪರಾರಿಯಾಗಿದ್ದಾನೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.