ಚೆನ್ನೈ : ಕತ್ತು ಕೊಯ್ದು ಇಬ್ಬರು ಮಂಗಳಮುಖಿಯರು ಸೇರಿ ಮೂವರ ಬರ್ಬರ ಕೊಲೆ ಮಾಡಿ ರಸ್ತೆ ಪಕ್ಕ ಬೀಸಾಡಿ ಹೋಗಿರುವ ಘಟನೆ ತಮಿಳುನಾಡಿನ ಪಾಲಯಂಕೊಟ್ಟೈನಲ್ಲಿ ನಡೆದಿದೆ. ಅನುಷ್ಕಾ (35), ಭವಾನಿ (34) ಮತ್ತು ಮುರುಗನ್ (38) ಕೊಲೆಯಾದವರಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಋಷಿಕೇಶ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಮುರುಗನ್ ಮಂಗಳಮುಖಿಯರಾದ ಅನುಷ್ಕಾ ಮತ್ತು ಭವಾನಿ ಎಂಬ ಇಬ್ಬರನ್ನು ಮದುವೆಯಾಗಿದ್ದ. ಈ ಮೂವರು ಮಗುವನ್ನ ದತ್ತು ಪಡೆಯಲು ನಿರ್ಧರಿಸಿದ್ದರು. ಅದರಂತೆ ಮಗುವಿಗಾಗಿ ಋಷಿಕೇಶ್ ಎಂಬಾತನನ್ನು ಸಂಪರ್ಕಿಸಿದ್ದರು. ಋಷಿಕೇಶ್ ಮಗು ಕೊಡಿಸುವದಾಗಿ ಹೇಳಿ ಮೂವರಿಂದ ಐದು ಲಕ್ಷ ರೂ. ಪಡೆದುಕೊಂಡು ಮೋಸ ಮಾಡಿದ್ದನು.
ಇದರಿಂದ ಕೋಪಗೊಂಡಿದ್ದ ಮುರುಗನ್, ಸೋಶಿಯಲ್ ಮೀಡಿಯಾದಲ್ಲಿ ಋಷಿಕೇಶ್ ಸೋದರಿಯ ಬಗ್ಗೆ ಕೆಟ್ಟದಾಗಿ ಬರೆದುಕೊಂಡಿದ್ದನು. ಮುರುಗನ್ ವರ್ತನೆಯಿಂದ ಕೋಪಗೊಂಡ ಋಷಿಕೇಶ್ ತನ್ನಿಬ್ಬರ ಗೆಳೆಯರ ಜೊತೆ ಸೇರಿ ಮೂವರ ಕತ್ತು ಕೊಯ್ದು ಕೊಲೆ ಮಾಡಿ, ಹೆದ್ದಾರಿ ಪಕ್ಕದ ಕಣಿವೆಯಲ್ಲಿ ಶವಗಳನ್ನು ಬಿಸಾಕಿದ್ದನು. ಸದ್ಯ ಶವಗಳನ್ನು ಕಣಿವೆಯಿಂದ ಹೊರ ತೆಗೆದಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.