ನೀಟ್ ಪಲಿತಾಂಶ ಪ್ರಕಟ. ಮೈಸೂರಿನ ವಿದ್ಯಾರ್ಥಿಗೆ 5 ನೇ ರ್ಯಾಂಕ್

1 min read
NEET Exam

ನೀಟ್ ಪಲಿತಾಂಶ ಪ್ರಕಟ ಮೈಸೂರಿನ ವಿದ್ಯಾರ್ಥಿಗೆ 5 ನೇ ರ್ಯಾಂಕ್

ಮೆಡಿಕಲ್, ಡೆಂಟಲ್ ಪ್ರವೇಶಕ್ಕೆ ನಡೆದಿದ್ದ 2021ನೇ ಸಾಲಿನ ನೀಟ್ ಫಲಿತಾಂಶ(NEET Result) ಸೋಮವಾರ ಪ್ರಕಟವಾಗಿದ್ದು, ಮೈಸೂರಿನ ವಿದ್ಯಾರ್ಥಿಯೊಬ್ಬ 5ನೇ ರ‍್ಯಾಂಕ್ ಪಡೆದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾನೆ‌.

ಮೈಸೂರಿನ ಮೇಘನ್ ಎನ್ನುವ ವಿದ್ಯಾರ್ಥಿ 5 ನೇ ರ್ಯಾಂಕ್ ಪಡೆದು ಮೆಡಿಕಲ್ ಸೀಟ್ ಗೆ ಅರ್ಹತೆ ಗಳಿಸುವ ಮೂಲಕ ರಾಜ್ಯಕ್ಕೆ ಕೀರ್ತಿಯನ್ನ ತಂದಿದ್ದಾರೆ.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆಸಿದ್ದ  ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET-UG) 2021. ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಮೃಣಾಲ್ ಕುಟ್ಟೇರಿ, ತನ್ಮಯ್ ಗುಪ್ತಾ ಮತ್ತು ಕಾರ್ತಿಕಾ ಜಿ ನಾಯರ್ ಅವರು ಅಖಿಲ ಭಾರತ ಶ್ರೇಣಿ (AIR) ನ್ನು ಗಳಿಸಿದ್ದಾರೆ. NTA ಯು ಅಂಕಪಟ್ಟಿಗಳನ್ನು ಇಮೇಲ್ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಿದ್ದಾರೆ. ಫಲಿತಾಂಶವು ಈಗ neet.nta.nic.in ನಲ್ಲಿ ಲಭ್ಯವಿದೆ.

ಸೆಪ್ಟೆಂಬರ್ 12 ರಂದು ಪರೀಕ್ಷೆಯನ್ನು ನಡೆಸಲಾಯಿತು ಮತ್ತು 16 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಹಾಜರಾಗಿದ್ದರು. ಅಭ್ಯರ್ಥಿಯು ಗಳಿಸಿದ ಕಟ್-ಆಫ್ ಮತ್ತು ಅಂಕಗಳ ಆಧಾರದ ಮೇಲೆ NTA ಅಖಿಲ ಭಾರತ ಮೆರಿಟ್ (all india rank) ಪಟ್ಟಿಯನ್ನು ಸಿದ್ಧಪಡಿಸುತ್ತದೆ. NEET ಫಲಿತಾಂಶ 2021 ಪ್ರಕಟವಾದ ನಂತರ, ಕೌನ್ಸೆಲಿಂಗ್ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಪದವಿಪೂರ್ವ ವೈದ್ಯಕೀಯ / ದಂತ ವೈದ್ಯಕೀಯ ಕೋರ್ಸ್‌ಗಳ ಎಲ್ಲಾ ಸೀಟುಗಳಿಗೆ NEET (UG) – 2021 ಮೂಲಕ ಪ್ರವೇಶವನ್ನು ಮಾಡಲಾಗುತ್ತದೆ. ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಯಾವ ಮನೆಯಲ್ಲಿ ಈ 5 ವಸ್ತುಗಳು ಇರುತ್ತವೆಯೋ ಅಲ್ಲಿ ಬಡತನ ಹತ್ತಿರವೂ ಸುಳಿಯುವುದಿಲ್ಲಾ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd