ಬೊಮಾಯಿ ನೇತೃತ್ವದಲ್ಲೇ ಮುಂದಿನ ಚುನಾವಣೆ : ಸುನೀಲ್ ಕುಮಾರ್ Bommai saaksha tv
ಚಿತ್ರದುರ್ಗ : ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಯ ಮಾತುಗಳು ಕೇಳಿಬಂದಿದ್ದು, ಈ ಬಗ್ಗೆ ಇಂಧನ ಸಚಿವ ಸುನೀಲ್ ಕುಮಾರ್, ಮುಖ್ಯ ಮಂತ್ರಿ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್ ಕುಮಾರ್, ಮುಖ್ಯಮಂತ್ರಿ ಬದಲಾವಣೆ ಮಾಡುವುದಿಲ್ಲ.
ಕೇಂದ್ರ ಗೃಹ ಸಚಿವರು ಸ್ಪಷ್ಠ ಪಡಿಸಿದ್ದಾರೆ. ಮಂತ್ರಿ ಮಂಡಲ ಸಹೋದ್ಯೋಗಿಯಾಗಿ ನಾನು ಸ್ಪಷ್ಠ ಪಡಿಸಿದ್ದೇನೆ.
ಮುಂದಿನ ಚುನಾವಣೆ ಬಸವರಾಜ ಬೊಮಾಯಿ ನೇತೃತ್ವದಲ್ಲೇ ಎಂದು ಪುನರುಚ್ಚರಿಸಿದರು.
ಇನ್ನು ಕಾಂಗ್ರೆಸ್ ಸರ್ಕಾರ ಬಂದರೇ ಮತಾಂತರ ಕಾಯ್ದೆ ವಾಪಸ್ ಪಡೆಯುವ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯೆ ನೀಡಿದ ಇಂಧನ ಸಚಿವರು, ಚುನಾವಣೆ ಪೂರ್ವದಲ್ಲಿ ನಮ್ಮ ಸರಕಾರ ನಮ್ಮ ನಡೆ ಏನು ಎಂಬುದನ್ನು ಹೇಳುತಾ ಬಂದಿದೆ.
ನಾವು ಮತಾಂತರ ಕಾಯ್ದೆ ತಂದಿದ್ದೇವೆ. ಸಿದ್ದರಾಮಯ್ಯ ಮುಂದೆ ನಮ್ಮ ಸರಕಾರ ಬಂದರೆ, ಟಿಪ್ಪು ಜಯಂತಿ ಗೊ ಹತ್ಯೆ ಮತಾಂತರ ಕಾಯ್ದೆ ವಾಪಸ್ಸು ಪಡೆಯುವುದು ಹೇಳಿರುವುದನ್ನು ಜನರು ಗಮನಿಸುತಿದ್ದಾರೆ.
ಜನರು ಚನ್ನಮ್ಮ ಜಯಂತಿ ಮಾಡೋ ಸರಕಾರ ಬೇಕೋ ಅಥವಾ ಟಿಪ್ಪು ಜಯಂತಿ ಮಾಡೋ ಸರಕಾರಬೇಕೊ ಅದನ್ನ ಜನರು ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.