ಸಾವರ್ಕರ್ ಟೀಕಾಕಾರರ ಮುಂದಿನ ಗುರಿ ಸ್ವಾಮಿ ವಿವೇಕಾನಂದ, ದಯಾನಂದ ಸರಸ್ವತಿ : ಭಾಗವತ್
ಸದಾ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ಸುದ್ದಿಯಲ್ಲಿರುವ ಮೋಹನ್ ಭಾಗವತ್ ಅವರು ಇದೀಗ ಸಾವರ್ಕರ್ ಟೀಕಾಕಾರರ ವಿರುದ್ಧ ಕಿಡಿಕಾರಿದ್ದಾರೆ. ಹೌದು ವಿನಾಯಕ ದಾಮೋದರ್ ಸಾವರ್ಕರ್ ಅವರ ಟೀಕಾರರ ಮುಂದಿನ ಗುರಿ ಸ್ವಾಮಿ ವಿವೇಕಾನಂದ ಎಂದು RSS ನ ಮುಖ್ಯಸ್ಥ ಮೋಹನ್ ಬಾಗವತ್ ಅವರು ಹರಿಹಾಯ್ದಿದ್ದಾರೆ.
ಇನ್ನೂ ಸ್ವಾತಂತ್ರ್ಯದ ನಂತರ ಸಂಘಟಿತ ಪ್ರಚಾರದ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಅಪಖ್ಯಾತಿಗೆ ಗುರಿಯಾಗಿಸಲಿದೆ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಸಾವರ್ಕರ್ ಅವರನ್ನು ಟೀಕಿಸುತ್ತಿರುವವರ ಮುಂದಿನ ಗುರಿ ಸ್ವಾಮಿ ವಿವೇಕಾನಂದ ದಯಾನಂದ ಸರಸ್ವತಿ ಮತ್ತು ಸ್ವಾಮಿ ಅರಬಿಂದೊ ಆಗಿರಬಹುದು ಎಂದು ಮೋಹನ್ ಭಾಗವತ್ ಹೇಳಿದ್ದಾರೆ.