ಕಾನ್ಪೆರಾ: ಇತ್ತೀಚೆಗೆ ಲೈಂಗಿಕ ತೃಪ್ತಿಗಾಗಿ ಹಲವಾರು ಮಾರ್ಗ ಹಿಡಿದು ಅವಘಡ ಮಾಡಿಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗಿ ದಾಖಲಾಗುತ್ತಿವೆ. ಸದ್ಯ ಇಂತಹ ಘಟನೆಯೊಂದು ಬೆಳಕಿಗೆ ಬಂದಿದೆ.
ಆಸ್ಟ್ರೇಲಿಯಾದ ವೃದ್ಧನೊಬ್ಬ ತಾತ್ಕಾಲಿಕ ಲೈಂಗಿಕ ತೃಪ್ತಿ ಪಡೆಯುವುದಕ್ಕಾಗಿ ಯಡವಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ. 73 ವರ್ಷದ ವೃದ್ಧ ತನ್ನ ಲೈಂಗಿಕ ತೃಪ್ತಿಗಾಗಿ ಬಟನ್ ಶೈಲಿಯ ಬ್ಯಾಟರಿಗಳನ್ನು ತನ್ನ ಶಿಶ್ನಕ್ಕೆ ಅಳವಡಿಸಿಕೊಂಡಿದ್ದಾನೆ. ಅದು ಶಿಶ್ನದಲ್ಲಿಯೇ ಸಿಲುಕಿ ತೊಂದರೆಯಾಗಿದೆ.
ಶಿಶ್ನದ ಒಳಕ್ಕೆ ಬ್ಯಾಟರಿ ತಳ್ಳುವ ಮೂಲಕ ತಾತ್ಕಾಲಿಕ ಲೈಂಗಿಕ ತೃಪ್ತಿ ಅನುಭವಿಸಿದ್ದಾನೆ. ಈ ಸಂದರ್ಭದಲ್ಲಿ ಬ್ಯಾಟರಿಗಳು ಮೂತ್ರನಾಳದಲ್ಲಿಯೇ ಸಿಲುಕಿಕೊಂಡಿವೆ. ಮೂತ್ರನಾಳ ನೈಕ್ರೋಸಿಸ್ನ ಮೊದಲ ಕೇಸ್ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಜನರು ಈ ಕುರಿತು ಎಚ್ಚೆತ್ತುಕೊಳ್ಳಬೇಕು. ಇಂಡಯ ಯಡವಟ್ಟು ಮಾಡಿಕೊಳ್ಳಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಇಂತಹ ಯಡವಟ್ಟುಗಳನ್ನು ಮಾಡಿಕೊಳ್ಳುವುದರಿಂದ ಗ್ಯಾಂಗ್ರಿನ್ ಸಂಭವಿಸುವ ಸಾಧ್ಯತೆಯಿದೆ. ಮಾರಣಾಂತಿಕ ಕಾಯಿಲೆ ಸಂಭವಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.