ವಿದ್ಯಾರ್ಥಿಗಳೇ ಗಮನಿಸಿ : ಮಾ.31ರವರೆಗೆ ಹಳೆಯ ‘ವಿದ್ಯಾರ್ಥಿ ಬಸ್ ಪಾಸ್’ ಅವಧಿ ವಿಸ್ತರಣೆ
ಬೆಂಗಳೂರು : ರಾಜ್ಯದ 2019-20ನೇ ಸಾಲಿನ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ಸಚಿವರು ಗುಡ್ ನ್ಯೂಸ್ ಕೊಟ್ಟಿದ್ದಾರೆ.
1019-20ನೇ ಸಾಲಿನ ವಿದ್ಯಾರ್ಥಿಗಳ ಹಳೆಯ ಬಸ್ ಪಾಸ್ ಅವಧಿಯನ್ನು ದಿನಾಂಕ 31-03-2021ರವರೆಗೆ ವಿಸ್ತರಣೆ ಮಾಡಿ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಆದೇಶಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವಂತ ಸವದಿ, ಪ್ರಸ್ತುತ ಶಾಲಾ ಕಾಲೇಜುಗಳ ಪುನರಾರಂಭದ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ 2019-20ನೇ ಸಾಲಿನ ಪಾಸಿನ ಅಧಾರದಲ್ಲಿಯೇ ಪ್ರಯಾಣಿಸಲು ದಿನಾಂಕ 28-02-2021ರವರೆಗೆ ಅವಕಾಶ ಕಲ್ಪಿಸಲಾಗಿತ್ತು.
ಇದೀಗ ಪಾಸುಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಮತ್ತಷ್ಟು ಕಾಲಾವಕಾಶ ನೀಡುವ ಸಲುವಾಗಿ ಎಲ್ಲಾ ವರ್ಗದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕಳೆದ ವರ್ಷದ (2019-20ನೇ ಸಾಲಿನ) ಬಸ್ ಪಾಸ್ ನೊಂದಿಗೆ ಪ್ರಸ್ತುತ ಸಾಲಿನಲ್ಲಿ ಶಾಲಾ-ಕಾಲೇಜುಗಳಿಗೆ ಶುಲ್ಕ ಪಾವತಿಸಿರುವ ರಸೀದಿಯನ್ನು ತೋರಿಸಿ, ಮಾರ್ಚ್ 31, 2021ರವರೆಗೆ ಸಾರಿಗೆ ನಿಗಮಗಳ ಬಸ್ಸುಗಳಲ್ಲಿ ತೆರಳಲು ಅವಕಾಶ ವಿಸ್ತರಿಸಲಾಗಿದೆ.
