ನಾಲ್ವರು ಹಿಂದುಗಳಿಗೆ ಟಿಕೆಟ್ ನೀಡಿದ ಓವೈಸಿ ಪಕ್ಷ Saaksha Tv
ಲಕ್ನೋ: ಈ ಬಾರಿಯ ಉತ್ತರ ಪ್ರದೇಶದ Uttar Pradesh ವಿಧಾನಸಭಾ ಚುನಾವಣೆಯಲ್ಲಿ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ ಪಕ್ಷ 27 ಕ್ಷೇತ್ರಗಳಲ್ಲಿ ಸ್ಪರ್ದಿಸಲಿದ್ದು, ನಾಲ್ವರು ಹಿಂದುಗಳಿಗೆ ಟಿಕೆಟ್ ನೀಡಲಾಗಿದೆ.
ಈ ಕುರಿತು ಮಾತನಾಡಿದ ಎಐಎಂನ ರಾಜ್ಯಾಧ್ಯಕ್ಷ ಶೌಕತ್ ಅಲಿ ನಾವು ಧರ್ಮದ ಆಧಾರದ ಮೇಲೆ ಟಿಕೆಟ್ ನೀಡಲ್ಲ, ಮುಂಬರುವ ಚುನಾವಣೆಗಳಲ್ಲಿ ಹಿಂದೂ ಬಾಂಧವರಿಗು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡುತ್ತೇವೆ. ಆದರೂ ನಮ್ಮನ್ನು ಕೋಮುವಾದಿಗಳು ಎಂದು ಬಣ್ಣಿಸುತ್ತಾರೆ. ಆದರೆ ಬಿಜೆಪಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ ಎಂದು ಹೇಳಿದರು.
ಇನ್ನೂ ಉತ್ತರ ಪ್ರದೇಶದಲ್ಲಿ ಎಐಎಂ ಪಕ್ಷದಿಂದ ಘಾಜಿಯಾಬಾದ್ನ ಸಾಹಿಬಾಬಾದ್ ಕ್ಷೇತ್ರದಿಂದ ಪಂಡಿತ್ ಮನಮೋಹನ್ ಝಾ, ಬುಧಾನಾ ಕ್ಷೇತ್ರದಿಂದ ಭೀಮ್ ಸಿಂಗ್ ಬಲ್ಯಾನ್, ಮೀರತ್ನ ಹಸ್ತಿನಾಪುರ ಕ್ಷೇತ್ರದಿಂದ ವಿನೋದ್ ಜಾತವ್ ಮತ್ತು ಬಾರಾಬಂಕಿಯ ರಾಮನಗರದಿಂದ ವಿಕಾಸ್ ಶ್ರೀವಾಸ್ತವ ಸ್ಪರ್ಧಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಎಐಎಂಐಎಂ ಜಿಲ್ಲಾಧ್ಯಕ್ಷ ಇಂತೇಜಾರ್ ಅನ್ಸಾರಿ ಮಾತನಾಡಿ ನಮ್ಮ ಪಕ್ಷ ಕೇವಲ ಮುಸ್ಲಿಂ ಪಕ್ಷವಲ್ಲ, ನಮ್ಮ ಪಕ್ಷದಲ್ಲು ಅನೇಕ ಹಿಂದು ಕಾರ್ಯಕರ್ತರಿದ್ದಾರೆ. ಆದರೆ ಮುಸ್ಲಿಂರಿಗೆ ತಮ್ಮ ಪಕ್ಷದ ಟಿಕೆಟ್ ನಲ್ಲಿ ಸ್ಪರ್ಧಿಸಲು ಬಿಜಪಿ ಏಕೆ ಅವಕಾಶ ನೀಡುವುದಿಲ್ಲ ಎಂದು ಪ್ರಶ್ನಿಸಿದರು.