ಬೆಂಗಳೂರು: ಪೊಲೀಸರು ಎಷ್ಟೇ ಎಚ್ಚರಿಕೆ ನೀಡಿದರೂ ಯುವಕರು ಮಾತ್ರ ಡೆಡ್ಲಿ ವ್ಹೀಲಿಂಗ್ ಬಿಡುತ್ತಿಲ್ಲ. ಅದೇ ರೀತಿ ದೆವ್ವದ ಹೆಸರಿನಲ್ಲಿ ಡೆಡ್ಲಿ ವೀಲ್ಹಿಂಗ್ (Deadly Wheeling) ಮಾಡುತ್ತಿದ್ದ ಯುವಕರಿಗೆ ಸಂಚಾರಿ ಪೊಲೀಸರು (Traffic Police) ಭರ್ಜರಿಯಾಗಿಯೇ ಚಳಿ ಬಿಡಿಸಿದ್ದಾರೆ.
ವ್ಹೀಲಿಂಗ್ ಗೆ ಸಂಬಂಧಿಸಿದಂತೆ ಮೂವರನ್ನು ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸರು ಬಂಧಿಸಿ ವಾಹನ ಜಪ್ತಿ ಮಾಡಿದ್ದಾರೆ. ಅಲ್ಲದೇ, ಪೋಷಕರಿಗೆ 25 ಸಾವಿರ ರೂ. ದಂಡ (Fine) ವಿಧಿಸಿದ್ದಾರೆ. ಈ ಯುವಕರು ವೀಲ್ಹಿಂಗ್ ಮಾಡುತ್ತಿದ್ದಾಗ ದೆವ್ವದ ಮುಖವಾಡ ಧರಿಸಿ, ʼಡೆವಿಲ್ಸ್ ಆನ್ ರೋಡ್ʼ ಎಂದು ತಾವೇ ತಮ್ಮನ್ನು ಕರೆದುಕೊಳ್ಳುತ್ತಿದ್ದರು. ಸದ್ಯ ವ್ಹೀಲಿಂಗ್ ಮಾಡುತ್ತಿದ್ದ ಯುವಕರ ಮೇಲೆ ಬರೋಬ್ಬರಿ 14 ಪ್ರಕರಣ ದಾಖಲಾಗಿವೆ. ಬೈಕ್‌ಗಳನ್ನು (Bike) ವಶಕ್ಕೆ ಪಡೆದು ಅದರ ಬಿಡಿಭಾಗವನ್ನು ಪೊಲೀಸರು ತೆಗೆದಿದ್ದಾರೆ.