2ನೇ ಟಿ-20 ಪಂದ್ಯದ ಟಿಕೆಟ್ ಸೋಲ್ಡ್ ಔಟ್ -ಸಾಕ್ಷಿಯಾಗಲಿದ್ದಾರೆ 39 ಸಾವಿರ ಪ್ರೇಕ್ಷಕರು

1 min read

2ನೇ ಟಿ-20 ಪಂದ್ಯದ ಟಿಕೆಟ್ ಸೋಲ್ಡ್ ಔಟ್ -ಸಾಕ್ಷಿಯಾಗಲಿದ್ದಾರೆ 39 ಸಾವಿರ ಪ್ರೇಕ್ಷಕರು

ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟಿ-20 ಪಂದ್ಯ ನವೆಂಬರ್ 19ರಂದು ರಾಂಚಿಯಲ್ಲಿ ನಡೆಯಲಿದೆ.
ಪಿಚ್ ಕ್ಯುರೇಟರ್ ಪ್ರಕಾರ ಇಬ್ಬನಿ ಅಡ್ಡಿಯನ್ನುಂಟು ಮಾಡುವ ಸಾಧ್ಯತೆಗಳು ದಟ್ಟವಾಗಿವೆ. ಹೀಗಾಗಿ ಟಾಸ್ ಪ್ರಮುಖ ಪಾತ್ರ ವಹಿಸಲಿದೆ ಎಂಬ ವಿಚಾರವನ್ನು ಹೇಳಿದ್ದಾರೆ.
ಈ ನಡುವೆ ಈ ಪಂದ್ಯವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಕಾರಣ ಜಾರ್ಖಂಡ್ ಸರ್ಕಾರದ ಅನುಮತಿಯಂತೆ ಹಂಡ್ರೆಡ್ ಪರ್ಸೆಂಟ್ ಪ್ರೇಕ್ಷಕರಿಗೆ ಪಂದ್ಯವನ್ನು ನೋಡಲು ಅವಕಾಶವನ್ನು ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯು ಕಲ್ಪಿಸಿದೆ.
ಹೀಗಾಗಿ ಈ ಪಂದ್ಯಕ್ಕೆ ಸುಮಾರು 39 ಸಾವಿರ ಪ್ರೇಕ್ಷಕರು ಸಾಕ್ಷಿಯಾಗಲಿದ್ದಾರೆ. ಈಗಾಗಲೇ ಎಲ್ಲಾ ಟಿಕೆಟ್ ಗಳು ಕೂಡ ಸೋಲ್ಡ್ ಔಟ್ ಆಗಿದೆ ಟಿಕೆಟ್ ಬೆಲೆ 900ರಿಂದ 9ಸಾವಿರ. ಕೇವಲ 80 ಟಿಕೆಟ್ ಗಳು ಮಾತ್ರ ಇವೆ. ಇದು ಎಮರ್ಜೆನ್ಸಿ ಕೋಟಾದಲ್ಲಿ ಇಟ್ಟುಕೊಳ್ಳಲಾಗಿದೆ. ಇದನ್ನು ಮಾರಾಟ ಮಾಡುವಂಗಿಲ್ಲ ಎಂದು ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಸಂಜಯ್ ಸಹಾಯ್ ಹೇಳಿದ್ದಾರೆ.
ಇನ್ನು ಈ ಪಂದ್ಯದ ವೇಳೆ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಪಂದ್ಯ ನೋಡಲು ಮೈದಾನಕ್ಕೆ ಬರುವ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಎರಡು ಡೋಸ್ ಲಸಿಕೆ ಪಡೆದಿರಬೇಕು. ಜೊತೆಗೆ 48 ಗಂಟೆಗಳ ಆರ್ ಟಿಪಿಆರ್ ವರದಿಯನ್ನು ನೀಡಬೇಕಿದೆ ಎಂದು ಸಂಜಯ್ ಸಹಾಯ್ ಹೇಳಿದ್ದಾರೆ.
ಜಾರ್ಖಂಡ್ ಸರ್ಕಾರದ ಸೂಚನೆಯಂತೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್, ಲಾಕ್ ಡೌನ್ ನಿಂದಾಗಿ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯವನ್ನು ನೋಡಲು ಉತ್ಸುಕರಾಗಿದ್ದಾರೆ.
ಹಾಗೇ ಧೋನಿ ತವರಿನಲ್ಲಿ ನಡೆಯುತ್ತಿರುವ ಈ ಪಂದ್ಯವನ್ನು ನೋಡಲು ಮೈದಾನಕ್ಕೆ ಆಗಮಿಸ್ತಾರೋ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರತಿ ದಿನ ಧೋನಿ ಟೆನಿಸ್ ಆಡುತ್ತಿರುತ್ತಾರೆ. ಪಂದ್ಯ ನೋಡಲು ಆಗಮಿಸ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ ಎಂದು ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ತಿಳಿಸಿದ್ದಾರೆ.

ಟಿ-20 ವಿಶ್ವಕಪ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ನೀಡಿದ್ದ ಟೀಮ್ ಇಂಡಿಯಾ ಈಗ ಮತ್ತೆ ಗೆಲುವಿನ ಟ್ರ್ಯಾಕ್ ಗೆ ಮರಳಿದೆ. ಟಿ-20 ವಿಶ್ವಕಪ್ ಸೋಲಿಗೆ ಮೊದಲ ಪಂದ್ಯದಲ್ಲೇ ಪ್ರತಿಕಾರ ತೀರಿಸಿಕೊಂಡಿರುವ ರೋಹಿತ್ ಪಡೆ ಈಗ ಸರಣಿ ಗೆಲ್ಲುವುದನ್ನು ಎದುರು ನೋಡುತ್ತಿದೆ. ಒಟ್ಟಿನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟಿ-20 ಪಂದ್ಯ ರಸದೌತಣವನ್ನು ಉಣಬಡಿಸಲಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd