ಬೆಂಗಳೂರು: ಪೊಲೀಸ್ ಇಲಾಖೆ ಇತ್ತೀಚೆಗೆ ದಂಡ ಪಾವತಿಗಾಗಿ ಡಿಸ್ಕೌಂಟ್ ಆಫರ್ ನೀಡಿತ್ತು. ಅದು ಯಶಸ್ವಿಯಾಗುತ್ತಿದ್ದಂತೆ ಈಗ ಕಳ್ಳರಿಗೆ ಒಂದು ಅವಕಾಶ ನೀಡಿದೆ.
ಕಳ್ಳತನ ಮಾಡಿದ ಮೊಬೈಲ್ ಗಳನ್ನು ಪೋಸ್ಟ್ ಮೂಲಕ ಹಿಂದಿರುಗಿಸಿದರೆ ಅಂತಹ ಕಳ್ಳರ ವಿರುದ್ಧ ಪ್ರಕರಣ ದಾಖಲಿಸುವುದಿಲ್ಲ ಎಂದು ಹೇಳಿದೆ. ಇದು ದೇಶದಲ್ಲಿಯೇ ಮೊದಲ ಪ್ರಯೋಗವಾಗಿದೆ. ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಮೊಬೈಲ್ ಕಳ್ಳತನಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹೊಸ ಮಾರ್ಗ ಕಂಡುಕೊಂಡಿದ್ದಾರೆ.
ತಪ್ಪನ್ನು ಅರಿತು ಮೊಬೈಲ್ ಪೋಸ್ಟ್ ಬಾಕ್ಸ್ಗೆ ಹಾಕಬೇಕು. ಆದರೆ ಕಳ್ಳತನ ಮಾಡಿಯೂ ಪೊಲೀಸರು ಕೊಟ್ಟ ಅವಕಾಶ ಮಿಸ್ ಮಾಡಿದರೆ ಕ್ರಮ ಗ್ಯಾರಂಟಿ ಎನ್ನಲಾಗಿದೆ. ಅಕಸ್ಮಾತ್, ಮೊಬೈಲ್ ರಸ್ತೆಯಲ್ಲಿ ಸಿಕ್ಕಿದರೂ ಕೂಡ ಪೊಲೀಸ್ ಠಾಣೆಗೆ ಒಪ್ಪಿಸದಿದ್ದರೂ ಮೊಬೈಲ್ಗಳನ್ನೂ ಪೋಸ್ಟ್ ಬಾಕ್ಸ್ಗೆ ಹಾಕಿದರೆ ಸಾಕು. ಇನ್ನು ಮುಂದೆ ಮೊಬೈಲ್ ಕಳೆದು ಹೋದರೆ ಇ – ಲಾಸ್ಟ್ನಲ್ಲಿ, ಎಫ್ಐಆರ್, ಎನ್ಸಿಆರ್ ಮಾಡಿಸುವ ಅವಶ್ಯಕತೆ ಇಲ್ಲ. ಮೊಬೈಲ್ ಕಳೆದು ಹೋದ ನಂತರ ಕಂಟ್ರೊಲ್ ರೂಂಗೆ ತಿಳಿಸಿ ನಂತರ Central equipment identity register ಆ್ಯಪ್ ಮುಖಾಂತರ ಮೊಬೈಲ್ ನಂಬರ್ ಐಎಂಇಐ ನಂಬರ್ ನಮೂದಿಸಬೇಕಾಗಿದೆ. ಇನ್ನೆರಡು ದಿನಗಳಲ್ಲಿ ಪೊಲೀಸರು ಕಮಾಂಡ್ ಸೆಂಟರ್ ಹತ್ತಿರ ಪೋಸ್ಟ್ ಬಾಕ್ಸ್ ಇಡಲು ನಿರ್ಧರಿಸಿದ್ದಾರೆ.