ನವದೆಹಲಿ: ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದವರನ್ನು ಪೊಲೀಸ್ ರೊಬ್ಬರು ಕಾಲಿನಿಂದ ಒದ್ದ ಘಟನೆ ನಡೆದಿದೆ.
ಈ ಘಟನೆ ದೆಹಲಿಯ ಇಂದರ್ ಲೋಕ್ ಪ್ರದೇಶದ ಮಸೀದಿಯೊಂದರ ಹೊರಗೆ ನಡೆದಿದೆ. ಪೊಲೀಸನ ಈ ವರ್ತನೆಯ ವಿಡಿಯೋ ಸೋಷಿಯಲ್ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ನಂತರ ಆ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಈ ವೇಳೆ ಪೊಲೀಸ್ ನನ್ನು ಸುತ್ತುವರೆದು ನಮಾಜ್ ಮಾಡುತ್ತಿದ್ದವರು ಪ್ರತಿಭಟಿಸಿದ್ದಾರೆ. ಆದರೆ, ಅದೃಷ್ಟವಶಾತ್ ಬೇರೆ ಯಾವ ಘಟನೆಯೂ ನಡೆದಿಲ್ಲ.