ಕೋಲ್ಕತ್ತಾ: ಪ್ರಧಾನಿ ಅವರು ಕಾಂಗ್ರೆಸ್ ಸೇರಿದಂತೆ ಇಂಡಿಯಾ ಒಕ್ಕೂಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷ ಹಗರಣ ಮಾಡುವುದನ್ನೇ ಫುಲ್ ಟೈಮ್ ಬಿಸಿನೆಸ್ ಆಗಿ ಮಾಡಿಕೊಂಡಿದೆ ಎಂದು ಪ್ರಧಾನಿ ಮೋದಿ (Narendra Modi) ಆಕ್ರೋಶ ವ್ಯಕ್ತಪಡಿಸಿದ್ದಾರೆ. 4ನೇ ಹಂತದ ಮತದಾನಕ್ಕೂ ಮುನ್ನಾದಿನ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದ ನಾಲ್ಕು ಚುನಾವಣಾ ರ‍್ಯಾಲಿ ಉದ್ಧೇಶಿಸಿ ಅವರು ಮಾತನಾಡಿದ್ದಾರೆ. ಹಗರಣ ಮಾಡುವುದನ್ನೇ ಟಿಎಂಸಿ ಪೂರ್ಣ ಸಮಯದ ವ್ಯವಹಾರ ಮಾಡಿಕೊಂಡಿದೆ.
ಕಾಂಗ್ರೆಸ್ (Congress), ಇಂಡಿಯಾ ಒಕ್ಕೂಟ ಯಾವುದೇ ಪಕ್ಷವಾಗಿರಲಿ. ಅವರೆಲ್ಲರಿಗೂ ಭ್ರಷ್ಟಾಚಾರ ಮಾಡುವುದು ಸಾಮಾನ್ಯ ಗುಣವಾಗಿಬಿಟ್ಟಿದೆ. ಇಂಡಿಯಾ ಒಕ್ಕೂಟದಲ್ಲಿ ಹೆಚ್ಚಿನ ಮಿತ್ರಪಕ್ಷಗಳು ರಹಸ್ಯವಾಗಿ ಹಗರಣಗಳನ್ನು ಮಾಡುತ್ತಿದ್ದರೆ, ಟಿಎಂಸಿ ಮುಕ್ತ ಉದ್ಯಮವನ್ನಾಗಿಯೇ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
25,000 ಸಾವಿರ ಶಿಕ್ಷಕರ ನೇಮಕಾತಿ ಹಗರಣ, ಪೊಂಜಿ ಹಗರಣ, ಕಲ್ಲಿದ್ದಲು ಹಗರಣ, ಚಿಟ್ ಫಂಡ್ ಹಗರಣ, ಪಡಿತರ ಹಗರಣ ಮಾಡಿರುವ ಟಿಎಂಸಿ ರೈತರನ್ನೂ ಬಿಡದೇ ಲೂಟಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.