ಸೈನ್ಯಕ್ಕೆ ಸೇರುವುದೇ ಹೆಮ್ಮೆಯ ಸಂಗತಿ. ಆದರೆ, ರಾಜಕುಮಾರಿಯೊಬ್ಬಳು ತನ್ನ ದೇಶದ ಸೇನೆಗೆ ಭರ್ತಿಯಾಗುವುದು ಅಪರೂಪ ಹಾಗೂ ಆಶ್ಚರ್ಯ. ಸ್ಪೇನ್ ನ ರಾಜಕುಮಾರಿ ಲಿಯೊನರ್ ತನ್ನ ದೇಶದ ಮಿಲಿಟರಿ ಪಡೆ ಸೇರಿಕೊಂಡಿದ್ದಾಳೆ. ಈ ಮೂಲಕ ಪ್ರಪಂಚದಾದ್ಯಂತ ರಾಜಕುಮಾರ್ ಚರ್ಚೆಗೆ ಗ್ರಾಸವಾಗಿದ್ದಾಳೆ. ಅರಮನೆಯಲ್ಲಿ ಐಷಾರಾಮಿ ಬದುಕು ನಡೆಸುತ್ತಿದ್ದ ರಾಜಕುಮಾರಿ ಲಿಯೊನರ್ ಈಗ ಸೈನ್ಯದ ಬೂಟು ಹಾಗೂ ಸಮವಸ್ತ್ರ ಧರಿಸುತ್ತಿದ್ದಾರೆ.
ಈ ರಾಜಕುಮಾರಿಗೆ ಸದ್ಯ 17 ವರ್ಷ. ಲಿಯೊನರ್ ಮೂರು ವರ್ಷಗಳ ಕಾಲ ಸೇನಾ ತರಬೇತಿ ಪಡೆಯಲು ನಿರ್ಧರಿಸಿದ್ದಾರೆ. ರಾಜಕುಮಾರಿ ಲಿಯೊನರ್ ಸ್ಪೇನ್ ನ ರಾಜ ಫೆಲಿಪೆ ಹಾಗೂ ರಾಣಿ ಲೆಟೆಜಿಯಾ ಅವರ ಹಿರಿಯ ಮಗಳು. ಈಗ ಅವರ ಕುಟುಂಬವು ರಾಜಕುಮಾರಿಗೆ ಬೀಳ್ಕೊಡುಗೆ ನೀಡಿದೆ. ರಾಜಕುಮಾರಿ ಲಿಯೊನರ್ ಮಾರ್ಚ್ ನಲ್ಲಿ ಈ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಿನ್ಸೆಸ್ ಲಿಯೊನರ್ ಮುಂದಿನ ಮೂರು ವರ್ಷಗಳ ಕಾಲ ಕಠಿಣ ಮಿಲಿಟರಿ ತರಬೇತಿ ಪಡೆಯಲಿದ್ದಾರೆ.
ರಾಜಕುಮಾರಿ ಅವರನ್ನು ಕಳುಹಿಸುವ ವೇಳೆ ಕುಟಂಬಸ್ಥರು ಭಾವುಕರಾಗಿದ್ದಾರೆ. ಕಿಂಗ್ ಫೆಲಿಪೆ ಸ್ಪ್ಯಾನಿಷ್ ಪಡೆಗಳ ಸರ್ವೋಚ್ಛ ಕಮಾಂಡರ್, ಜರಗೋಜಾ ಮಿಲಿಟರಿ ಅಕಾಡೆಮಿಯಿಂದ ತರಬೇತಿ ಪಡೆದಿದ್ದಾರೆ. 50 ವರ್ಷದ ರಾಣಿ ಲೆಟಿಜಿಯಾ ತಮ್ಮ ಮಗಳನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ದಾರೆ.