ಯಾರು ಊಹೆ ಮಾಡಿರಲ್ಲ, ಅರುಣ್ ಕುಮಾರ್ ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ರಣ ಕಣಕ್ಕೆ ದುಮುಕ್ಕುತ್ತಾರೆ ಎಂದು, ಆದ್ರೆ, ಹಿಂದೂ ಕಾರ್ಯಕರ್ತರ ಪರವಾಗಿ ಪುತ್ತಿಲರಿಗೂ ಇದು ಅನಿವಾರ್ಯ…
ಈಗಾಗಲೇ, ಪುತ್ತಿಲ ವಿರುದ್ಧ ಬಿಜೆಪಿಯ ಇಬ್ಬರು ನಾಯಕರು ಗೇಮ್ ಪ್ಲಾನ್ ಶುರುಹಚ್ಚಿದ್ದಾರೆ ಎಂಬ ಮಾಹಿತಿಯಿದೆ. ಅದ್ರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಅವ್ರ ಚೇಲಾಗಳು ಹೇಗೆ ವರ್ತಿಸ್ತಾರೆ ಅನ್ನೋ ಉದಾಹರಣೆ ಮುಂದೆ ನೀಡ್ತೀನಿ.
ಪುತ್ತಿಲರನ್ನು ನೇರವಾಗಿ ಟೀಕಿಸಲು ಯಾವುದೇ ಕಾರಣಗಳಿಲ್ಲ, ಕೆಲವು ದಿನಗಳ ಹಿಂದೆ ಒಬ್ಬಾತ ಅಣಬೆ ಹೇಳಿ ಮುಖಕ್ಕೆ ಉಗಿಸಿಕೊಂಡಿದ್ದ, ಅಂದು ಪುತ್ತಿಲ ಸಣ್ಣ ಸನ್ನೆ ಮಾಡಿದ್ದರೂ ಅಣಬೆ ಹೇಳಿದವನ ಒಂದು ಹಲ್ಲು ಇರುತ್ತಿರಲಿಲ್ಲ, ಆದ್ರೆ, ಜೀವಕ್ಕೆ ಜೀವ ಕೊಡುವ ತನ್ನ ಹಿಂದೂ ಕಲಿಗಳ ಆಕ್ರೋಶ ನಿಯಂತ್ರಣ ಮಾಡುವುದರಲ್ಲಿ ಪುತ್ತಿಲ ಗೆದ್ದಿದ್ದರು.
ಪಕ್ಷನಿಷ್ಠೆ ಎಂದು ಹಲವರು ಭಾಷಣ ಬಿಗಿಯುತ್ತಿದ್ದಾರೆ, ಪಕ್ಷನಿಷ್ಠೆ ಇದ್ದ ಕಾರಣ ಬರೋಬ್ಬರಿ 3 ದಶಕ ಅಂದ್ರೆ 30 ವರ್ಷಕ್ಕಿಂತಲೂ ಹೆಚ್ಚು ಕಾಲ ಬಿಜೆಪಿಗೆ ಯಾವುದೇ ಲಾಭವಿಲ್ಲದೆ ದುಡಿದಿದ್ದಾರೆ, ಆದ್ರೆ, ಪಕ್ಷದಲ್ಲಿದ್ದ ನಾಯಕರಿಗೂ ಹಿಂದೂ ನಾಯಕನ ಪರ ನಿಷ್ಠೆ ಇರಬೇಕಲ್ವಾ..? ಅದೇ ನೋಡಿ ಸಮಸ್ಯೆ…
ಕಾಂಗ್ರೆಸ್ ನಿಂದ ಬಂದವ ಪುತ್ತೂರು ಶಾಸಕನಾದ, ಮತ್ತೊಬ್ಬ ಕಾಂಗ್ರೆಸ್ ನಿಂದ ಬಂದವ ಮಂಡಲ ಇತ್ಯಾದಿ ಅಧ್ಯಕ್ಷನಾಗುತ್ತಾನೆ, ಆತ ಬಿಜೆಪಿಯವರಿಗೆ ಬೈಟಕ್ ಬೇರೆ ನೀಡುತ್ತಾನೆ.. ಇದೆ ಸಮಸ್ಯೆ..
ಇನ್ನೊಂದು ಈ ಬಿಜೆಪಿಯಲ್ಲಿ ಬಂಡಾಯ ಏಳುವ ಹಿಂದುತ್ವದ ನಾಯಕರ ಪರ ಅಥವಾ ಹಿಂದೆ ಕಾರ್ಯಕರ್ತರು ಹೋಗಬಾರದು ಅನ್ನುವ ದೃಷ್ಟಿಯಲ್ಲಿ ಒಂದು ಸ್ಟೇಟ್ ಮೆಂಟ್ ನೀಡುತ್ತಾರೆ, ಅದು ಹೇಗಿರುತ್ತೆ ಅಂದ್ರೆ, “ಬಿಜೆಪಿಯಿಂದ ಹಿಂದುತ್ವ”, ಜಿಹಾದಿಗಳ ಅಟ್ಟಹಾಸ ಇತ್ಯಾದಿ… ಬಿಜೆಪಿ ಸೋತರೆ ಜಿಹಾದಿಗಳ ಅಟ್ಟಹಾಸ ಹೆಚ್ಚಾಗುತ್ತೆ ಎಂಬುದಾಗಿ!
ಇದೆ ನೋಡಿ ಆಶ್ಚರ್ಯ… ಕಟ್ಟರ್ ಹಿಂದೂ ನಾಯಕರ ವಿರುದ್ಧ ಜಿಹಾದಿಗಳು ಎಷ್ಟು ಖತ್ತಿ ಮಸೀತಾರೋ, ಅದಕ್ಕಿಂತ ಮಿಗಿಲಾಗಿ ಅಂತ ಹಿಂದೂ ನಾಯಕರನ್ನು ಮುಗಿಸೋಕೆ ಬಿಜೆಪಿಯಲ್ಲಿರೋ ಕೆಲ ನಾಯಕರು ಗೇಮ್ ಪ್ಲಾನ್ ಮಾಡ್ತಾರೆ, ಇದೆ ಇವತ್ತು ಅರುಣ್ ಕುಮಾರ್ ಪುತ್ತಿಲರಿಗೂ ಆಗಿದ್ದು, ಬಿಜೆಪಿ ಕಾರ್ಯಕರ್ತರು ಪುತ್ತಿಲ ಹೆಸ್ರು ಹೇಳಿದ್ರೂ, ಆ ಒಬ್ಬ ಎರಡುವರೆ ಸಾವಿರದ ಮರಳು ವ್ಯಾಪಾರಿ, ಪುತ್ತಿಲಗೆ ಟಿಕೆಟ್ ಕೊಡ್ಲೆಬಾರ್ದು ಅಂತ ಪಟ್ಟು ಹಿಡಿದಿದ್ದಂತೆ, ಅಷ್ಟಕ್ಕೂ, ಆ ನಾಯಕ ಇರೋ ಮೊದ್ಲು ಬಿಜೆಪಿಯಿತ್ತು.. ಆದ್ರೆ, ತನ್ನಿಂದಲೇ ಎಲ್ಲಾ ಅನ್ನೋ ಭ್ರಮೆಯಲ್ಲಿದ್ದಾನೆ.. ಅದೇ ನಾಯಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ಬೆಳೆವಣಿಗೆ ನೋಡಿ ಮತ್ಸರಾ ಪಟ್ಟಿದ್ದ ಅನ್ನುವ ಮಾತು ಕೂಡ ಚಾಲ್ತಿಯಲ್ಲಿದೆ..
ಹೀಗೆ, ಜಿಹಾದಿ… ಕಾಂಗ್ರೆಸ್ ಗೆ ಲಾಭ ಅನ್ನುವ ಇವರಿಗೆ… ಅರುಣ್ ಕುಮಾರ್ ಪುತ್ತಿಲ ಪಕ್ಷೇತರವಾಗಿ ನಿಂತು ಗೆದ್ದಾಗ ಹೇಗೆ ಆಗಬಹುದು..? ಅದೇ ಪ್ರಯತ್ನದಲ್ಲಿ ಹಿಂದೂ ಕಲಿಗಳು ಕೆಲಸ ಮಾಡೋಕೆ ಶುರು ಮಾಡಿದ್ದಾರೆ. ಬೇರೆ ಯಾರಿಗೂ ಲಾಭವಾಗಲಿ ಎಂದು ಪುತ್ತಿಲ ನಿಂತದ್ದಲ್ಲ.. ಗೆಲ್ಲೋದಕ್ಕೆ ನಿಂತಿದ್ದು ಅನ್ನುವುದು ಸ್ಪಷ್ಟ.. ಆ ಮೂಲಕ ದೆಹಲಿಗೆ ಸಂದೇಶ ರವಾನೆ ಮಾಡೋ ಪಣತೊಡಲಾಗಿದೆ..
ಇಲ್ಲಿಯ ಬಿಜೆಪಿ ನಾಯಕರ ನವರಂಗಿ ಆಟ, ಕಾರ್ಯಕರ್ತರಿಗೆ ಮಾಡೋ ಮೋಸ, ಹಿಂದೂ ನಾಯಕರಿಗೆ ಮಾಡೋ ಅನ್ಯಾಯ, ಮೋದಿ, ಯೋಗಿಯಂತಹ ನಾಯಕರಿಗೆ ಗೊತ್ತಾದ್ರೆ ಹಳೆ ಚಪ್ಪಲಿಯಲ್ಲಿ ಹೊಡೆದರೂ ಅಚ್ಚರಿಯಿಲ್ಲ..!
ಹೀಗಾಗಿ ಪುತ್ತಿಲ ಪರ ಅಸಲಿ ಹಿಂದೂಗಳು ಫೀಲ್ಡ್ ಗೆ ಇಳಿದಿದ್ದಾರೆ, ನಕಲಿ ಹಿಂದೂಗಳು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ ಅಷ್ಟೇ..!!