ರಷ್ಯಾ-ಉಕ್ರೇನ್ ಬಿಕ್ಕಟ್ಟು – ಉಕ್ರೇನ್ ತೊರೆಯುವಂತೆ ದೇಶದ ನಾಗರೀಕರಿಗೆ ಆದೇಶಿಸಿದ ಭಾರತ…
ರಷ್ಯಾ-ಉಕ್ರೇನ್ ಬಿಕ್ಕಟ್ಟು ತೀವ್ರಗೊಂಡ ಬೆನ್ನಲ್ಲ ಎರಡು ದೇಶಗಳ ಮಧ್ಯೆ ಯುದ್ಧದ ಬೀತಿ ಸೃಷ್ಟೀಯಾಗಿದೆ. ಉಕ್ರೇನ್ ನಲ್ಲಿರುವ ತನ್ನ ದೇಶಗ ಪ್ರಜೆಗಳು ದೇಶ ತೊರೆಯುವಂತೆ ಭಾರತ ಸೂಚಿಸಿದೆ.
ಭಾರತೀಯ ವಿದ್ಯಾರ್ಥಿಗಳು ಮತ್ತು ಅನಿವಾರ್ಯವಲ್ಲದ ದೇಶದ ಪ್ರಜೆಗಳು ಉಕ್ರೇನ್ ದೇಶವನ್ನ ತಾತ್ಕಾಲಿಕವಾಗಿ ತೊರೆಯುವಂತೆ ಸಲಹೆ ನೀಡಿದೆ.
ಈ ಕುರಿತು ಉಕ್ರೇನ್ ನಲ್ಲಿರುವ ಭಾರತದ ರಾಯಭಾರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, “ಉಕ್ರೇನ್‌ನಲ್ಲಿನ ಸದ್ಯದ ಅನಿಶ್ಚಿತತೆ ಪರಿಸ್ಥಿತಿಯ ದೃಷ್ಟಿಯಿಂದ ಭಾರತೀಯ ಪ್ರಜೆಗಳು, ನಿರ್ದಿಷ್ಟವಾಗಿ ಉಳಿಯಲು ಅನಿವಾರ್ಯವಲ್ಲದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಹೊರಡಲು ಪರಿಗಣಿಸಬಹುದು” ಎಂದು ತಿಳಿಸಿದೆ.
ಉಕ್ರೇನ್ ಮೇಲೆ ರಷ್ಯಾದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಆತಂಕದಿಂದ ಭಾರತವು ಈ ಸಲಹೆ ನೀಡಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅತ್ತ ಗಡಿಯಲ್ಲಿ ರಷ್ಯಾ ತನ್ನ ಸೈನಿಕರ ಸಂಖ್ಯೆಯನ್ನು ಮತ್ತು ಸೇನಾವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಏರಿಕೆ ಮಾಡಿ, ಗಡಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗುವಂತೆ ಮಾಡಿದೆ.
ಉಕ್ರೇನ್ ತೊರೆಯಲು ತಮ್ಮ ಪ್ರಜೆಗಳಿಗೆ ಕರೆ ನೀಡಿರುವ ದೇಶಗಳಲ್ಲಿ ಅಮೆರಿಕ, ಕೆನಡಾ, ನಾರ್ವೆ, ಸ್ಲೊವೇನಿಯಾ, ಆಸ್ಟ್ರೇಲಿಯಾ, ಜಪಾನ್, ಎಸ್ಟೋನಿಯಾ, ಲಿಥುವೇನಿಯಾ, ಬಲ್ಗೇರಿಯಾ, ಜರ್ಮನಿ, ಇಟಲಿ, ಬ್ರಿಟನ್, ಐರ್ಲೆಂಡ್, ಬೆಲ್ಜಿಯಂ, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ಇಸ್ರೇಲ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಗಳು ಸೇರಿವೆ.