ಹಾವೇರಿ: ಪಲ್ಲಕ್ಕಿ ಹೊರಟಿದ್ದ ಸಂದರ್ಭದಲ್ಲಿ ಅದನ್ನು ತಡೆದು ಕಿಡಿಗೇಡಿಗಳು ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿರುವ ಘಟನೆಯೊಂದು ನಡೆದಿದೆ.
ವಿಜಯದಶಮಿ (Vijayadashami)ಯ ಹಿನ್ನೆಲೆಯಲ್ಲಿ ಹಾನಗಲ್ (Hangal)ನಲ್ಲಿನ ತಾರಕೇಶ್ವರ ದೇವರ (Tarakeshwara Temple) ಬನ್ನಿ ಮುಡಿಯುವ ಪಲ್ಲಕ್ಕಿ ಉತ್ಸವ ನಡೆದಿತ್ತು. ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಗ್ರಾಮದೇವಿ ಪಾದಗಟ್ಟಿ ಸರ್ಕಲ್ ನಿಂದ ಕಾಶ್ಮೀರಿ ದರ್ಗಾ ಮಾರ್ಗವಾಗಿ ಪಲ್ಲಕ್ಕಿ ಹೊರಟಾಗ ಮೆರವಣಿಗೆ ತಡೆದು ಕಿಡಿಗೇಡಿಗಳು ಈ ಘೋಷಣೆ ಕೂಗಿದ್ದಾರೆ.
ಇದಕ್ಕೆ ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿತ್ತು. ಕೂಡಲೇ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆದರೆ, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ಕುರಿತು ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.








