ಬೆಂಗಳೂರು: ಹಿರಿಯ ನಟಿ ತಾರಾ ಅನುರಾಧಾ (Tara Anuradha) ಹೊಸ ಮನೆ (House Warming) ಪ್ರವೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ನಟಿಯ ನೂತನ ಮನೆಯ ಗೃಹ ಪ್ರವೇಶ ನಡೆಯಿತು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ (Sandalwood) ಕಲಾವಿದರು ಭಾಗವಹಿಸಿ ಶುಭ ಕೋರಿದ್ದಾರೆ.
ನಟಿ ಮಾಲಾಶ್ರೀ, ಸೋನು ಗೌಡ, ಭಾವನಾ ರಾವ್, ಅಂಜಲಿ, ಸುಧಾ ಬೆಳವಾಡಿ, ಶ್ರುತಿ, ಪೂಜಾ ಗಾಂಧಿ, ಪದ್ಮಾವಾಸಂತಿ, ಸುಧಾರಾಣಿ, ಭಾರತಿ ವಿಷ್ಣುವರ್ಧನ್, ಅನುಪ್ರಭಾಕರ್, ಮಾಳವಿಕಾ, ಅಶ್ವಿನಿ ಪುನೀತ್‌ರಾಜ್‌ಕುಮಾರ್, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಭಾವನಾ ರಾವ್ ಮತ್ತು ಸುಧಾರಾಣಿ ಪುತ್ರಿ ಜೊತೆಯಾಗಿ ಕುಣಿದು ಕುಪ್ಪಳಿಸಿದ್ದಾರೆ. ನೂತನ ಮನೆ ನಿರ್ಮಿಸಿರುವ ನಟಿಗೆ ಅಭಿಮಾನಿಗಳು ಕೂಡ ಶುಭ ಕೋರುತ್ತಿದ್ದಾರೆ.








