ADVERTISEMENT
Tuesday, June 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹಾಡಿನ ಜೊತೆಗೆ ಹುಟ್ಟುವ, ಹಾಡಿನ ಸಂಗಡವೇ ಬದುಕುವ ಹಾಡಿನೊಂದಿಗೆ ಅಂತ್ಯವಾಗುವ ವಿಶಿಷ್ಟ ಸಂಪ್ರದಾಯದ ಆಫ್ರಿಕನ್ ಬುಡಕಟ್ಟು ಜನಾಂಗದ ಕಥಾನಕ:

admin by admin
July 14, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಹಾಡಿನ ಜೊತೆಗೆ ಹುಟ್ಟುವ, ಹಾಡಿನ ಸಂಗಡವೇ ಬದುಕುವ ಹಾಡಿನೊಂದಿಗೆ ಅಂತ್ಯವಾಗುವ ವಿಶಿಷ್ಟ ಸಂಪ್ರದಾಯದ ಆಫ್ರಿಕನ್ ಬುಡಕಟ್ಟು ಜನಾಂಗದ ಕಥಾನಕ:

ಹಾಡಿಗೂ, ಮಗುವಿಗೂ ಅವಿನಾಭಾವ ಸಂಬಂಧ.. ತಾಯಿಯ ಜೋಗುಳದ ಮಮತೆ ಇನ್ನೆಲ್ಲೂ ಸಿಗಲಾರದೇನೋ… ಒಂದು ಹಾಡು ಮಗುವಿನ ಹುಟ್ಟಿನಿಂದ ಜೊತೆಯಾಗಿ ಅದರ ಮರಣದ ತನಕವೂ ಜೊತೆಯಾಗುವ ಹಿಂಬಾ ಎನ್ನುವ ಆಫ್ರಿಕಾದ ಬುಡಕಟ್ಟು ಜನಾಂಗದ ಸುಂದರವಾದ ಸಂಪ್ರದಾಯವೊಂದರ ಪುಟ್ಟ ಪರಿಚಯವೊಂದು ಇಲ್ಲಿದೆ ನೋಡಿ.

Related posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

June 30, 2026
ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

June 30, 2026

ಒಂದು‌ ಸುಂದರ ದಾಂಪತ್ಯದ ಚೆಂದದ ಪ್ರತಿಫಲ ಮಗು. ಮಗುವಿನ ಬಗ್ಗೆ ಯಾವ ಕುಟುಂಬ ಕನಸು ಕಾಣುವುದಿಲ್ಲ ಹೇಳಿ?? ಮಗುವಿನ ಚೆಂದದ ಕಲ್ಪನೆಯಲ್ಲೇ ಕಳೆದುಹೋಗುವ ಎಷ್ಟೋ ಮಂದಿಯ ಬಾಳಿಗೆ ಮಗು ಒಂದು ಅತ್ಯಮೂಲ್ಯ ಕೊಡುಗೆಯಾಗಿ ಕಾಲಿಟ್ಟಿರುತ್ತದೆ.

ಹಾಗಾದರೆ ಮಗು ಹುಟ್ಟುವುದು ಅದು ತಾಯಿಯ ಗರ್ಭದಿಂದ ಹೊರಬಂದಾಗಲೇ? ಅಥವಾ ಆ ಮಗುವಿನ ಕಲ್ಪನೆ, ಮಗುವಿನ ಕುರಿತಾದ ಆಸೆ ಮೊಳಕೆಯೊಡೆಯುತ್ತದಲ್ಲ ಆಗಲೇ??? ಅದಕ್ಕೆ ಉತ್ತರ ದಕ್ಷಿಣ ಆಫ್ರಿಕಾದ ಹಿಂಬಾ ಪ್ರಾಂತ್ಯದ ಬುಡಕಟ್ಟು ಜನಾಂಗದ ವಿಶಿಷ್ಟ ಸಂಪ್ರದಾಯದಲ್ಲಿ ಅಡಗಿದೆ… ಇದನ್ನು ಓದಿದ ಮೇಲೆ ನಿಮಗೂ ಇದೆಷ್ಟು ಸುಂದರ ಭಾವ ಅನ್ನಿಸೋದು ಖಚಿತ.

ಈ ಹಿಂಬಾ ಪ್ರಾಂತ್ಯದಲ್ಲಿ ಮಗು ಮೊದಲು ತಾಯಿಯ ಚಿಂತನೆಯಲ್ಲಿ ಒಡಮೂಡುತ್ತದೆ ಎನ್ನುತ್ತಾರೆ. ಯಾವ ಕ್ಷಣದಲ್ಲಿ ತಾಯಿಯಾಗಬೇಕಾದವಳಿಗೆ ಮಗುವಿನ ಕುರಿತಾದ ತೀವ್ರ ಚಿಂತನೆ ಹುಟ್ಟಿಕೊಳ್ಳುತ್ತದೆಯೋ ಆಗ ಮಗುವಿನ ಜನನವಾಗುತ್ತದೆಯಂತೆ.
ಇಲ್ಲಿ ತಾಯ್ತನದ ಬಯಕೆಯ ಹೆಣ್ಣು ಒಂದು ಮರದ ಕೆಳಗೆ ವಿಶ್ರಾಂತಿ ಪಡೆಯಲು ತೆರಳುತ್ತಾಳಂತೆ. ಆ ವಿಶ್ರಾಂತಿ ಎಲ್ಲಿಯವರೆಗೂ ಮುಂದುವರೆಯುತ್ತದೆಂದರೆ, ಆ ತಾಯಿಗೆ ತನ್ನ ಮಗುವಿನ ಕುರಿತಾದ ಹಾಡೊಂದು ತನ್ನ ಕಿವಿಯಲ್ಲಿ ಅನುರಣಿತವಾಗುವವರೆಗೂ… ಆ ಹಾಡು ಆಕೆಯ ಮನಸ್ಸಿಗಿಳಿದು ಅದವಳ ಜೀವಮಾನ ಪರ್ಯಂತ ನೆನಪಿಡುವಂತಾಯಿತು ಎಂದಾದ ಮೇಲೆ ಆ ತಾಯಿ, ತನ್ನ ಮಗುವಿನ ತಂದೆಯಾಗಬೇಕಾದವನ ಬಳಿ ಬಂದು ಆತನಿಗೂ ಆ ಹಾಡನ್ನು ಕಲಿಸುತ್ತಾಳೆ. ನಂತರದಲ್ಲಿ ಅವರಿಬ್ಬರೂ ದೈಹಿಕವಾಗಿ ಒಂದಾಗುವಾಗಲೂ ಆ ಮಗುವನ್ನು ತಮ್ಮೊಡಲಿಗೆ ಆವಾಹಿಸಿ, ಆಹ್ವಾನಿಸಿಕೊಳ್ಳುವ ಸಲುವಾಗಿ ಅದೇ ಹಾಡನ್ನು ಹಾಡುತ್ತಾರೆ.

ಇಷ್ಟೇ ಅಲ್ಲ ಈ ಯಾತ್ರೆ ಹೀಗೇ ಮುಂದುವರೆಯುತ್ತದೆ. ತನ್ನ ಮಗುವಿಗಾಗಿ ತನ್ನಿಂದ ಹುಟ್ಟಿಕೊಂಡ ಹಾಡನ್ನು ಆ ತಾಯಿ ಸೂಲಗಿತ್ತಿ ಹಾಗೂ ಹಳ್ಳಿಯ ಇತರೆ ವಯಸ್ಸಾದ ಮಹಿಳೆಯರಿಗೆ ಹೇಳಿಕೊಡುತ್ತಾಳೆ. ಏಕೆಂದರೆ ಮುಂದೆ ಮಗು ಜನಿಸಿದಾಗ ಆ ಮಗುವಿನ ಸುತ್ತ ಇರುವವರೆಲ್ಲರೂ ಆ ಮಗುವನ್ನು ಅದೇ ಹಾಡಿನಿಂದ ಸ್ವಾಗತಿಸಬೇಕಲ್ಲವೇ???

ನಂತರ ಮಗು ಬೆಳೆಯುತ್ತಾ ಬಂದಂತೆ ಹಳ್ಳಿಗರು ಆ ಮಗುವಿನ ಹಾಡನ್ನು ಕಲಿಯುತ್ತಾರೆ. ಅಕಸ್ಮಾತ್ ಮಗು ಬಿದ್ದರೆ, ಮಗುವಿಗೇನಾದರೂ ನೋವಾದರೇ ಅವನನ್ನು ಅವನ ಹಾಡು ಗೊತ್ತಿರುವ ಯಾರಾದರೂ ಎತ್ತಿಕೊಂಡು ಸಮಾಧಾನ ಮಾಡುತ್ತಾರೆ. ಮಗುವಿಗೂ ಆ ಹಾಡು ಪರಿಚಿತವಾಗಿರುತ್ತದೆಯಾದ್ದರಿಂದ ಅದು ತನ್ನ ಜನರನ್ನು ಸುಲಭವಾಗಿ ಗುರುತಿಸುತ್ತದೆ.

ಈ ಮಗುವಿನ ಬೆಳವಣಿಗೆಯೊಂದಿಗೆ ಹಾಡು ಕೂಡ ಪ್ರಚಲಿತವಾಗುತ್ತಾ ಹೋಗುತ್ತದೆ. ಬೆಳೆದು ದೊಡ್ಡದಾದ ಮಗು ಏನನ್ನಾದರೂ ಅದ್ಭುತವಾದುದನ್ನು ಸಾಧಿಸಿದರೆ ಹಳ್ಳಿಗರು ಆ ಮಗುವಿನ ಗೌರವಾರ್ಥವಾಗಿ ಇದೇ ಹಾಡನ್ನು ಹಾಡುತ್ತಾರೆ.
⠀
ಈ ಪ್ರೀತಿಯನ್ನು ಹೇಗೆ ಮುಂದುವರೆಸಿಕೊಂಡು ಹೋಗುತ್ತಾರೆ ಅನ್ನೋದು‌ ಇನ್ನೂ ಒಂದು‌ ಸೋಜಿಗ. ಆ ಮಗು ಏನಾದರೂ ಕೆಟ್ಟ ಕೆಲಸ ಮಾಡಿ ಅಪರಾಧಿ ಸ್ಥಾನದಲ್ಲಿ ನಿಂತರೆ, ಅಥವಾ ಅಪರಾಧಿ ಎಂದು ಸಾಬೀತಾದರೆ ಆ ಮಗುವಿನ ಸುತ್ತ ಹಳ್ಳಿಗರು‌ ವೃತ್ತಾಕಾರವಾಗಿ‌ನಿಂತು ಆ ಮಗುವಿನ ಹಾಡು ಹಾಡುತ್ತಾರೆಯೇ ವಿನಃ ಯಾವುದೇ ಶಿಕ್ಷೆ ನೀಡುವುದಿಲ್ಲ. ಆ ಮಗುವನ್ನು ಹಳ್ಳಿಗರು ಎಷ್ಟು ಪ್ರೀತಿಸುತ್ತಾರೆ, ಅವನ‌ಮೇಲಿರುವ ಭರವಸೆ ಎಂಥದ್ದು ಎಂಬುದನ್ನು‌ ಮತ್ತೆ ನೆನಪಿಸಲಿಕ್ಕಾಗಿಯೇ ಅವರು ಈ ರೀತಿ ಮಾಡುತ್ತಾರೆ. ಯಾವಾಗ ಈ ರೀತಿಯಾಗಿ ತನ್ನದೇ ಹಾಡನ್ನು ತನ್ನ ಹಳ್ಳಿಗರು, ಬಾಂಧವರು ಹಾಡುತ್ತಾರೋ ಆಗ ಆ ಮಗುವಿಗೆ ಇನ್ನೊಬ್ಬರಿಗೆ ತೊಂದರೆ ಕೊಡಬಾರದು ಎಂಬ ಪ್ರಜ್ಞೆ ಜಾಗೃತವಾಗಿ, ಪ್ರೀತಿ, ಸ್ನೇಹದ ಸವಿಭಾವಗಳು ಮೂಡುತ್ತವೆ. ಹೀಗೆಯೇ ಈ ಹಾಡು ಅವರ ಜೀವನದ ಪ್ರಮುಖ ಘಟ್ಟಗಳಾದ ಮದುವೆಯಂತಹ ಕಾರ್ಯಕ್ರಮಗಳಲ್ಲೂ ಮುಂದುವರೆಯುತ್ತದೆ.
ನಂತರ ವಯಸ್ಸಾಗಿ ಸಾಯುವ ಹಂತ ತಲುಪಿದಾತನಿಗೆ ಆತನ ಹಳ್ಳಿಯವರು ಆ ಮಗುವಿಗಾಗಿ ಕೊನೆಯ ಬಾರಿಗೆ ಹಾಡುತ್ತಾರೆ.

ಹೀಗೆ ಜನನದಿಂದ ಆರಂಭವಾಗಿ‌ ಮರಣದವರೆಗೂ ಒಂದು ಹಾಡಿನ ಪ್ರಯಾಣ ಸಾಗುತ್ತದೆ. ಇದೊಂದು ಹಾಡಿನ ಪ್ರಯಾಣ ಮಾತ್ರವಲ್ಲ, ಪ್ರೀತಿ- ವಾತ್ಸಲ್ಯದ ಪಯಣವೂ ಆಗಿರುತ್ತದೆ. ಹೀಗೆ ಹಿಂಬಾ ಜನಾಂಗದ ಪ್ರತೀ ವ್ಯಕ್ತಿಗೂ ಅವನದ್ದೇ ಆದ ಹಾಡಿದೆ. ಅದು ಆತನ ಜೀವನದುದ್ದಕ್ಕೂ ಅವನ ಜೊತೆಗಿರುತ್ತದೆ. ಅವನ ಮರಣಕ್ಕೂ ಜೊತೆಯಾಗುತ್ತದೆ.

ಅಂಬಿಕಾ ಸೀತೂರು, ಬೆಂಗಳೂರು

Tags: african tribecultureThe story of a typical tradition African tribe
ShareTweetSendShare
Join us on:

Related Posts

ಜೇಬಿಗೆ 50 ಕೋಟಿ ಕ್ಷೇತ್ರಕ್ಕೆ 100 ಕೋಟಿ: ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಆಮಿಷ – ಮೈತ್ರಿ ಮುರಿಯಲು ಕೈ ಪಡೆಯಿಂದ ನೂರಾರು ಕೋಟಿ ಆಫರ್: ಅಡ್ಡಮತದಾನದ ಅಸಲಿ ಗುಟ್ಟು ರಟ್ಟು ಮಾಡಿದ ಕುಮಾರಸ್ವಾಮಿ

ಬಿಡದಿ ವಿಚಾರದಲ್ಲಿ ಚರ್ಚೆಗೆ ಈಗಲೂ ಸಿದ್ಧ: ಹೆಚ್.ಡಿ. ಕುಮಾರಸ್ವಾಮಿ

by Shwetha
June 30, 2026
0

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬಿಡದಿ ಟೌನ್‌ಶಿಪ್‌ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಮತ್ತೊಮ್ಮೆ ಬಹಿರಂಗ ಚರ್ಚೆಯ ಆಹ್ವಾನ ನೀಡಿದ್ದಾರೆ. ಈ...

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

ಮತದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ಮತದಾನದ ಹಕ್ಕಿಗೆ ಕುತ್ತು ಬರಬಹುದು -ಇಂದೇ ದಾಖಲೆಗಳನ್ನು ರೆಡಿ ಇಟ್ಟುಕೊಳ್ಳಿ

by Shwetha
June 30, 2026
0

ನಿಮ್ಮ ಮತ ನಿಮ್ಮ ಹಕ್ಕು. ಆದರೆ ಆ ಹಕ್ಕನ್ನು ಚಲಾಯಿಸಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಅನಿವಾರ್ಯ. ಭಾರತೀಯ ಚುನಾವಣಾ ಆಯೋಗದ ಆದೇಶದಂತೆ ಇಂದಿನಿಂದ ರಾಜ್ಯಾದ್ಯಂತ...

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ಮಾಸ್ ಲೀಡರ್ ಗೆ ಸ್ವಪಕ್ಷೀಯರಿಂದಲೇ ಸಂಚು ಸಿದ್ದರಾಮಯ್ಯ ಅವರನ್ನು ಮೂಲೆಗುಂಪು ಮಾಡುತ್ತಿರುವುದರ ಹಿಂದಿದೆ ಭಾರಿ ಲೆಕ್ಕಾಚಾರ :ಕಿಂಗ್ ಮೇಕರ್ ಪಟ್ಟಕ್ಕಾಗಿ ನಡೆಯುತ್ತಿದೆ ಒಳಗೊಳಗೆ ರಾಜಕೀಯ ಯುದ್ಧ

by Shwetha
June 30, 2026
0

ಕರ್ನಾಟಕ ರಾಜಕೀಯದ ಇತಿಹಾಸದಲ್ಲಿ ಅತಿ ದೊಡ್ಡ ಮಾಸ್ ಲೀಡರ್ ಎನಿಸಿಕೊಂಡಿರುವ ಸಿದ್ದರಾಮಯ್ಯ ಅವರ ರಾಜಕೀಯ ಭವಿಷ್ಯದ ಬಗ್ಗೆ ಈಗ ಕಾಂಗ್ರೆಸ್ ಒಳಾಂಗಣದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಮುಖ್ಯಮಂತ್ರಿ...

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

ಗೃಹಜ್ಯೋತಿಗೆ ಮರು ಅರ್ಜಿ ಸಲ್ಲಿಕೆ; ಹೊಸ ಅರ್ಜಿ ವಿತರಣೆ ಘೋಷಿಸಿದ ಸಿಎಂ ಡಿಕೆಶಿ

by Shwetha
June 30, 2026
0

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ...

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

ಶ್ರೀರಾಮ ನಮ್ಮ ಅಸ್ಮಿತೆ ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ದಂಡ ಅಯೋಧ್ಯಾ ಬಾರ್ ಕೌನ್ಸಿಲ್ ಖಡಕ್ ಆದೇಶ

by Shwetha
June 30, 2026
0

ಅಯೋಧ್ಯೆಯ ಭವ್ಯ ರಾಮಮಂದಿರಕ್ಕೆ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಅಕ್ರಮ ನಡೆದಿದೆ ಎನ್ನುವ ಆರೋಪ ಈಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಹಗರಣದ ತನಿಖೆ ಚುರುಕುಗೊಂಡಿದ್ದು ಈಗಾಗಲೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram