ಬೆಂಗಳೂರು: ಯುವತಿಯ ಕಾರು ಚೇಸ್ ಮಾಡಿದ ಮೂವರು ಪುಂಡರು ಡೋರ್ ತೆಗೆಯಲು ಯತ್ನಿಸಿ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಈ ಘಟನೆ ಕೋರಮಂಗದಲ್ಲಿ ನಡೆದಿದೆ. ಮಡಿವಾಳ ಸಿಗ್ನಲ್ ನಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಮೂವರು ಯುವಕರು ಕಾರಿನಲ್ಲಿ ತೆರಳುತ್ತಿದ್ದ ಯುವತಿಗೆ ಕಿರುಕುಳ ನೀಡಿದ್ದಾರೆ. ಮಡಿವಾಳ ಅಂಡರ್ ಪಾಸ್ ಸೇತುವೆಯಿಂದ ಕೋರಮಂಗಲ 5ನೇ ಬ್ಲಾಕ್ ವರೆಗೆ ಕಾರನ್ನು ಕಿಡಿಗೇಡಿಗಳು ಹಿಂಬಾಲಿಸಿದ್ದಾರೆ. ಕೋರಮಂಗಲದಲ್ಲಿ ಕಾರು ಡೋರ್ ಓಪನ್ ಮಾಡಲು ಯತ್ನಿಸಿ ಕೋರಮಂಗಲ 5ನೇ ಬ್ಲಾಕ್ ನಲ್ಲಿ ಪರಾರಿಯಾಗಿದ್ದಾರೆ.
ಯುವಕರು ಕಾರು ಫಾಲೋ ಮಾಡುವ ದೃಶ್ಯ ಮೊಬೈಲ್ ನಲ್ಲಿ ಯುವತಿ ರೆಕಾರ್ಡ್ ಮಾಡಿದ್ದಾರೆ. ನಂತರ ಯುವತಿ ಆಳುತ್ತಲೇ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಈ ಕುರಿತು ಮಡಿವಾಳ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರ ಪೈಕಿ ಇಬ್ಬರನ್ನು ಬಂಧಿಸಿ ಮತ್ತೋರ್ವನಿಗಾಗಿ ಬಲೆ ಬೀಸಿದ್ದಾರೆ. ತೇಜಸ್, ಜಗನ್ನಾಥ ಬಂಧಿತ ಆರೋಪಿಗಳು.