50 ಜನರನ್ನು ಹೊತ್ತು ಸಾಗುತ್ತಿದ್ದ ಪ್ಯಾಸೆಂಜರ್ ರೈಲು (Passenger Train) ಹಳಿಗಳ ನಿರ್ಮಾಣ ಉಪಕರಣಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಹಳಿ ತಪ್ಪಿರುವ ಘಟನೆ ನೆದರ್‌ಲ್ಯಾಂಡ್ (Netherland)ನಲ್ಲಿ ನಡೆದಿದೆ.
ಅಲ್ಲಿಯ ವೂರ್ ಸ್ಕೊಟೆನ್‌ನಲ್ಲಿ (Voorschoten) ಈ ಘಟನೆ ನಡೆದಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿ, 30 ಜನರು ಗಾಯಗೊಂಡಿದ್ದಾರೆ. ಈ ಪೈಕಿ 19 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಉಳಿದವರಿಗೆ ಸ್ಥಳದಲ್ಲಿಯೇ ಚಿಕಿತ್ಸೆಯನ್ನು ನೀಡಲಾಗಿದೆ ಎಂದು ಡಚ್ ತುರ್ತು ಸೇವೆಗಳು ತಿಳಿಸಿವೆ.
ಲೈಡೆನ್ (Leiden) ನಗರದಿಂದ ಹೇಗ್‌ಗೆ (Hague) ಈ ರೈಲು ತೆರಳುತ್ತಿದ್ದ ಸಂದರ್ಭದಲ್ಲಿ ಬೆಳಗಿನ ಜಾವ ರೈಲಿನ ಮುಂಭಾಗ ಹಳಿಗಳ ನಿರ್ಮಾಣಕ್ಕೆಂದು ಇರಿಸಿದ್ದ ಉಪಕರಣಗಳಿಗೆ ಡಿಕ್ಕಿ ಹೊಡೆದು ಹಳಿ ತಪ್ಪಿದೆ. ರೈಲಿನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು ನಂದಿಸಲಾಗಿದೆ ಎಂದು ವರದಿಗಳು ಹೇಳಿವೆ.
ಹೀಗಾಗಿ ಲೈಡೆನ್ ಮತ್ತು ಹೇಗ್ ಭಾಗಕ್ಕೆ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಡಚ್ ರೈಲ್ವೇಸ್ (Dutch Railways) ಟ್ವೀಟ್ ಮೂಲಕ ತಿಳಿಸಿದೆ.








