ಕಲಬುರಗಿ: ಬೈಕ್ ನಿಂದ ಕೆಳಗೆ ಬಿದ್ದಿದ್ದ ಸವಾರನ ಮೇಲೆ ಬಸ್ ಹರಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕಲಬುರಗಿ ನಗರದ ಹುಮನಾಬಾದ್(Humnabad) ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಆಟೋ ಟಚ್ ಆಗಿ ಬೈಕ್ ನಿಂದ ಸವಾರ ಬಿದ್ದಿದ್ದಾನೆ. ಈ ವೇಳೆ ಸಾರಿಗೆ ಬಸ್ ಹರಿದಿದೆ. ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದಾನೆ.
ಸೋಮಶೇಖರ್(34) ಸಾವನ್ನಪ್ಪಿದ ದುರ್ದೈವಿ. ದಾಲ್ ಮೀಲ್‌ನಲ್ಲಿ ಕೆಲಸ ಮುಗಿಸಿ ಬೈಕ್‌ನಲ್ಲಿ ಸೋಮಶೇಖರ್ ತೆರಳುತ್ತಿದ್ದಾಗ ಆಟೋ ಟಚ್ ಆಗಿದೆ. ಆಗ ಸೋಮಶೇಖರ್ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬೀದರ್ ಕಡೆಯಿಂದ ಕಲಬುರಗಿ ಕಡೆಗೆ ಬರುತ್ತಿದ್ದ ಸಾರಿಗೆ ಬಸ್ ಹರಿದಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.