ಗಾಂಧಿ ಪ್ರತಿಮೆಯನ್ನು ಹಾನಿಗೊಳಿಸಿದ ಕಿಡಿಗೇಡಿಗಳು Saaksha Tv
ಬಿಹಾರ: ಪಾರ್ಕ್ ನಲ್ಲಿರುವ ಗಾಂಧಿ ಪ್ರತಿಮೆ ಹಾನಿಗೊಳಗಾಗಿರುವ ಘಟನೆ ಬಿಹಾರದ ಚರ್ಖಾ ಪಾರ್ಕ ನಲ್ಲಿ ನಡೆದಿದೆ.
ಈ ಕುರಿತು ಮಾತನಾಡಿರುವ ಪೂರ್ವ ಚಂಪಾಣ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಶಿರ್ಷತ್ ಕಪಿಲ್ ಅಶೋಕ್ ಭಾನುವಾರ ರಾತ್ರಿ ಪಾರ್ಕ್ ಬಳಿ ಧಾರ್ಮಿಕ ಘೋಷಣೆಗಳು ಕೂಗಿರುವ ಬಗ್ಗೆ ಮಾಹಿತಿಗಳಿವೆ. ಇದರಲ್ಲಿ ಕೆಲ ಗುಂಪಿನ ಒಳಗುಳ್ಳುವಿಕೆ ಕಂಡುಬರುತ್ತಿದೆ ತನಿಕೆಯಿಂದ ಸತ್ಯಾಂಶ ತಿಳಿಯಲಿದೆ ಎಂದು ಹೇಳಿದರು.
1917 ರಲ್ಲಿ ಬ್ರಿಟೀಷರ ವಿರುದ್ಧವಾಗಿ ಮೊದಲ ಸತ್ಯಾಗ್ರಹವನ್ನು ಮಹಾತ್ಮ ಗಾಂಧಿ ಚಂಪಾರಣ್ಯದಲ್ಲಿ ಪ್ರಾರಂಭಿಸಿದ್ದರು. ಇದರ ಸ್ಮರಣಾರ್ಥ ಚರ್ಖಾ ಪಾರ್ಕನಲ್ಲಿ ಗಾಂಧಿ ಪ್ರತಿಮೆ ಸ್ಥಾಪಿಸಲಾಗಿದೆ. ಈ ಉದ್ಯಾನದ ನಿರ್ವಹಣೆಯನ್ನು ಪವರ್ ಗ್ರಿಡ್ ಕಾರ್ಪೂರೇಷನ್ ಆಫ್ ಇಂಡಿಯಾ ತನ್ನ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ನಿರ್ವಹಿಸುತ್ತಿದೆ.
ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕೈಗೊಳ್ಳಲು ನಾವು ಅವರಿಗೆ ಸಲಹೆ ನೀಡುತ್ತೇವೆ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಖಚಿತಪಡಿಸಿಕೊಳ್ಳಲಾಗುವುದು. ಜಿಲ್ಲಾಡಳಿತವು ಶೀಘ್ರದಲ್ಲೇ ಪ್ರತಿಮೆ ಮರು ನಿರ್ಮಾಣ ಮಾಡಲಿದೆ ಎಂದು ತಿಳಿಸಿದರು.








