ಶ್ರೀ ರಾಮ ಮಂದಿರ ನಿರ್ಮಾಣದಲ್ಲಿ ಕಬ್ಬಿಣದ ಬದಲು ತಾಮ್ರದ ಹಾಳೆ ಬಳಕೆ
ಲಕ್ನೋ, ಅಗಸ್ಟ್ 21: ನವದೆಹಲಿಯಲ್ಲಿ ಗುರುವಾರ ನಡೆದ ಶ್ರೀ ರಾಮ ಜನ್ಮ ಭೂಮಿ ಕ್ಷೇತ್ರ ಟ್ರಸ್ಟ್ ಸದಸ್ಯರ ಸಭೆಯ ನಂತರ, ಮಂದಿರ ನಿರ್ಮಾಣದಲ್ಲಿ ಕಬ್ಬಿಣವನ್ನು ಬಳಸಲಾಗುವುದಿಲ್ಲ ಎಂದು ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮತ್ತು ವಿಎಚ್ಪಿ ನಾಯಕ ಚಂಪತ್ ರಾಯ್ ಹೇಳಿದ್ದಾರೆ. ಕಬ್ಬಿಣದ ಬದಲಿಗೆ ಭಕ್ತರು ದಾನ ಮಾಡಿದ ತಾಮ್ರದ ಹಾಳೆಗಳನ್ನು ಮಂದಿರ ನಿರ್ಮಿಸಲು ಬಳಸಲಾಗುತ್ತದೆ ಎಂದು ಅವರು ಹೇಳಿದರು.
ಅಂದಾಜಿನ ಪ್ರಕಾರ, ಮಂದಿರ ನಿರ್ಮಾಣದಲ್ಲಿ 10,000 ಕ್ಕೂ ಹೆಚ್ಚು ತಾಮ್ರದ ಹಾಳೆಗಳನ್ನು ಬಳಸಲಾಗುವುದು ಎಂದು ಚಂಪತ್ ರಾಯ್ ಗುರುವಾರ ಹೇಳಿದರು.ಭೂಕಂಪ, ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪಗಳನ್ನು ತಡೆದುಕೊಳ್ಳುವ ನಿಟ್ಟಿನಲ್ಲಿ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಕಬ್ಬಿಣ ಬಳಸುವುದಿಲ್ಲ ಎಂದು ಟ್ರಸ್ಟ್ ಹೇಳಿದೆ
ಸಭೆಯಲ್ಲಿ, ರಾಮ ಜನ್ಮಭೂಮಿ ಆವರಣ ಮತ್ತು ದೇವಾಲಯದ ಸ್ಥಳವನ್ನು ಪರೀಕ್ಷಿಸಲು ರೂರ್ಕಿ ಮೂಲದ ಕೇಂದ್ರ ಕಟ್ಟಡ ಸಂಶೋಧನಾ ಸಂಸ್ಥೆ (ಸಿಬಿಆರ್ಐ) ಮತ್ತು ಐಐಟಿ ಮದ್ರಾಸ್ ನ ಇಂಜಿನಿಯರ್ಸ್ ಗೆ ವಹಿಸಲು ಟ್ರಸ್ಟಿಗಳು ನಿರ್ಧರಿಸಿದರು. ದೇವಾಲಯದ ನಿರ್ಮಾಣದ ಪ್ರಮುಖ ನಿರ್ಮಾಣ ಸಂಸ್ಥೆಯಾದ ಲಾರ್ಸೆನ್ ಮತ್ತು ಟೌಬ್ರೊದ ತಜ್ಞರು ಮತ್ತು ಎಂಜಿನಿಯರ್ಗಳು ಸಹಾಯ ಮಾಡುತ್ತಿದ್ದಾರೆ ಎಂದು ಟ್ರಸ್ಟ್ ಹೇಳಿದೆ.
ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಟ್ರಸ್ಟ್ ಟ್ವಿಟರ್ ನಲ್ಲಿ ಇದು 36 ರಿಂದ 40 ತಿಂಗಳುಗಳಲ್ಲಿ (3 ರಿಂದ 3.5 ವರ್ಷಗಳು) ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ನಿರ್ಮಾಣದಲ್ಲಿ ಬಳಸಬೇಕಾದ ತಾಮ್ರದ ಹಾಳೆಗಳು ಕಲ್ಲಿನ ಬ್ಲಾಕ್ಗಳನ್ನು ಪರಸ್ಪರ ಬೆಸೆಯುವಲ್ಲಿ ಸೂಕ್ತವಾಗುತ್ತವೆ ಎಂದು ಟ್ವೀಟ್ ಮಾಡಿದೆ. ಫಲಕಗಳು 18 ಇಂಚು ಉದ್ದ, 30 ಮಿಮೀ ಅಗಲ ಮತ್ತು 3 ಮಿಮೀ ಆಳದಲ್ಲಿರಬೇಕು. ನಿರ್ಮಾಣಕ್ಕಾಗಿ ಇಂತಹ 10,000 ಕ್ಕೂ ಹೆಚ್ಚು ಫಲಕಗಳು ಬೇಕಾಗುತ್ತವೆ ಎಂದ ಟ್ರಸ್ಟ್ ,ರಾಮನ ಭಕ್ತರು ಮುಂದೆ ಬಂದು ಅಂತಹ ತಾಮ್ರದ ಹಾಳೆಗಳನ್ನು ಟ್ರಸ್ಟ್ಗೆ ದಾನ ಮಾಡುವಂತೆ ಸೂಚಿಸಿದರು.
ಚಂಪತ್ ರಾಯ್ ಅವರ ಹೇಳಿಕೆಯ ಪ್ರಕಾರ, ದಾನಿಗಳು ಕುಟುಂಬದ ಹೆಸರುಗಳು, ಮೂಲದ ಸ್ಥಳ ಅಥವಾ ಅವರ ಸಮುದಾಯ ದೇವಾಲಯಗಳ ಹೆಸರುಗಳನ್ನು ಈ ಹಾಳೆಗಳಲ್ಲಿ ಕೆತ್ತಬಹುದು. ಈ ರೀತಿಯಾಗಿ ತಾಮ್ರ ಫಲಕಗಳು ಈ ದೇಶದ ಏಕತೆಯನ್ನು ಸಂಕೇತಿಸುತ್ತದೆ ಮಾತ್ರವಲ್ಲದೆ ಮಂದಿರ ನಿರ್ಮಾಣಕ್ಕೆ ಇಡೀ ದೇಶದ ಕೊಡುಗೆಗೆ ಸಾಕ್ಷಿಯಾಗುತ್ತದೆ ಎಂದರು.