ಗ್ರಾಹಕರಿಗೆ ಊಟ-ತಿಂಡಿ ಸಪ್ಲೈ ಮಾಡಲು ಲೇಡಿ ರೋಬೋ ಬಳಕೆ Saaksha Tv
ಮೈಸೂರು: ಮೈಸೂರು ಸಿದ್ದಾರ್ಥ ಹೋಟೆಲ್ ನಲ್ಲಿ ಗ್ರಾಹಕರಿಗೆ ಊಟ-ತಿಂಡಿ ನೀಡಲು ಲೇಡಿ ರೋಬೋ ಸಪ್ಲೈ ಮಾಡುತ್ತಿದೆ.
ಇಷ್ಟು ದಿನ ಹೊಟೇಲ್ ನಲ್ಲಿ ಗ್ರಾಹಕರಿಗೆ ಸಪ್ಲೇಯರ್ಸ್ ಸರ್ವ ಮಾಡುತ್ತಿದ್ದರು. ಆದರೆ ಇದೀಗ ಸಪ್ಲೇಯರ್ಸ್ ಬದಲಾಗಿ ಲೇಡಿ ರೋಬೋವನ್ನು ಹೋಟೆಲ್ ಬಳಕೆ ಮಾಡುತ್ತಿದೆ. ಈಗಾಗಲೇ ಲೇಡಿ ರೋಬೋ ಮೈಸೂರು ರೇಷ್ಮೆ ಸೀರೆ ಉಟ್ಟು ಗ್ರಾಹಕರಿಗೆ ಊಟ ತಿಂಡಿ ಸಪ್ಲೈ ಮಾಡುತ್ತಿದ್ದು, ಇದು ಮೈಸೂರಿನ ಸಿದ್ದಾರ್ಥ ಹೋಟೆಲ್ನ ಪ್ರಮುಖ ಆಕರ್ಷಣೆಯಾಗಿದೆ.
ರೋಬೋ ಅಡುಗೆ ಕೋಣೆಯಿಂದ ಗ್ರಾಹಕರ ಟೇಬಲ್ಗೆ ಊಟ ತಿಂಡಿ ಸಪ್ಲೈ ಸಲಿಸಾಗಿ ಮಾಡುತ್ತಿದೆ. 2.5 ಲಕ್ಷ ರೂ. ವೆಚ್ಚದಲ್ಲಿ ರೋಬೋ ಸಿದ್ಧಪಡಿಸಲಾಗಿದೆ. ಬ್ಯಾಟರಿ ಚಾಲಿತ ರೋಬೋ ಇದ್ದಾಗಿದ್ದು ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆಗಳ ಕಾಲ ಕೆಲಸ ನಿರ್ವಹಿಸಲಿದೆ.
ಕೊರೊನಾ ಟೈಮ್ನಲ್ಲಿ ನಮಗೆ ರೋಬೋ ಬಗ್ಗೆ ಚಿಂತನೆ ಹೆಚ್ಚಾಯಿತು. ಇದೀಗ ರೋಬೋವನ್ನು ಟ್ರಯಲ್ ರನ್ ಮಾಡುತ್ತಿದ್ದೇವೆ. ಆರ್ಡರ್ ತೆಗೆದುಕೊಂಡು ಬಳಿಕ ರೋಬೋ ಕೈಯಲ್ಲಿ ಹಿಡಿದುಕೊಂಡಿರುವ ತಟ್ಟೆ ಮೇಲೆ ಊಟ-ತಿಂಡಿ ಇಟ್ಟರೆ ಗ್ರಾಹಕರ ಬಳಿ ತೆರಳಿ ಅದು ಸರ್ವ್ ಮಾಡುತ್ತದೆ. ವಾಯ್ಸ್ ಕಮಾಂಡ್ ಮೂಲಕ ಇದನ್ನು ನಿಯಂತ್ರಿಸಲಾಗುತ್ತಿದೆ. ಮೈಸೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೋಬೋ ಸಿಸ್ಟಮ್ ಆಳವಡಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.








