ಗದಗ : ಚಲಿಸುತ್ತಿದ್ದ ಸಂದರ್ಭದಲ್ಲಿಯೇ ಬಸ್ ವೊಂದರ ಚಕ್ರ ಕಳಚಿ ಬಿದ್ದಿರುವ ಘಟನೆ ಜಿಲ್ಲೆಯ ಹೊಂಬಳ ಗ್ರಾಮದ ಬಳಿ ನಡೆದಿದೆ.
ಗದಗದಿಂದ ನರಗುಂದಕ್ಕೆ ಹೊರಟಿದ್ದ ಬಸ್‌ನ ಚಕ್ರ ಕಳಚಿ ಬಿದ್ದರೂ ಬಸ್ ಮುಂದಕ್ಕೆ ಚಲಿಸಿದೆ. ಹಿಂಬದಿಯ ಡಬಲ್ ಚಕ್ರದ ಪೈಕಿ ಒಂದು ಚಕ್ರ ದಿಢೀರ್ ಕಳಚಿದೆ. ಹಿಂಬದಿಯ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಬಸ್ ಗದಗ ಡಿಪೋಗೆ ಸೇರಿದ್ದು, ಘಟನೆ ಸಂದರ್ಭದಲ್ಲಿ ಸುಮಾರು 50 ಜನರು ಅದರಲ್ಲಿ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಈ ಬಸ್ ನಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು ಎನ್ನಲಾಗಿದೆ.