ಬೆಳಗಾವಿ : ಮಹಾರಾಷ್ಟ್ರ ಗಡಿಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಗೋಕಾಕ್ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಯಾವುದೇ ಭಯವಿಲ್ಲದೆ ಯುವಕರು ತಮ್ಮ ಹುಚ್ಚಾಟ ಮೆರೆಯುತ್ತಿದ್ದಾರೆ. ಜಲಪಾತದ ತುದಿಗೆ ಹೋಗಿ ಯುವಕರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ. 180 ಅಡಿಯಿಂದ ಧುಮ್ಮುಕ್ಕುತ್ತಿರುವ ಜಲಪಾತದ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಯುವಕರು ಮಜಾ ಮಾಡುತ್ತಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.
ಭಾರತದ ನಯಾಗಾರ್ ಫಾಲ್ಸ್ ಎಂದೇ ಪ್ರಸಿದ್ಧಿ ಪಡೆದಿರುವ ಗೋಕಾಕ್ ಫಾಲ್ಸ್ ಸಮೀಪ ಯಾರೂ ಹೋಗದಂತೆ ತಾಲೂಕು ಆಡಳಿತ ಇನ್ನೂ ಕಡಿವಾಣ ಹಾಕಿಲ್ಲ ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.