ಮಂಡ್ಯ: ಪತಿಯನ್ನೇ ಪತ್ನಿಯೇ ಕೊಲೆ ಮಾಡಿರುವ ಘಟನೆಯೊಂದು ಜಿಲ್ಲೆಯ ಮದ್ದೂರಿನ ಚಾಪುರದೊಡ್ಡಿ ಎಂಬಲ್ಲಿ ನಡೆದಿದೆ.
ಮನೆಯ ಒಳಗೆ ಬರಬೇಡ ಎಂದಿದ್ದಕ್ಕೆ ಪತ್ನಿ (Wife) ಹಾಗೂ ಮಗ ಸೇರಿಕೊಂಡು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಮೃತನನ್ನು ಉಮೇಶ್ (45) ಎನ್ನಲಾಗಿದ್ದು, ಪತ್ನಿ ಸವಿತಾ ಹಾಗೂ ಮಗ ಶಶಾಂಕ್ ಹತ್ಯೆ ಮಾಡಿದ ಆರೋಪಿ ಎನ್ನಲಾಗಿದೆ. ಪತ್ನಿಯು ಕಳೆದ ಮೂರು ತಿಂಗಳಿಂದ ಪತಿ ತೊರೆದು ಮಗನೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಆದರೆ, ನಿನ್ನೆ ಊರಿಗೆ ಬಂದಿದ್ದರು.
ಆಗ ಪತಿ ಮನೆಯ ಒಳಗೆ ಬರಬೇಡಿ ಎಂದು ಹೇಳಿದ್ದಾನೆ. ಆಗ ಎಲ್ಲರ ಮಧ್ಯೆ ಜಗಳ ಆರಂಭವಾಗಿದೆ. ಕೂಡಲೇ, ಪತ್ನಿ ಮಗನನ್ನು ಬೆಂಗಳೂರಿನಿಂದ ಕರೆಯಿಸಿಕೊಂಡಿದ್ದಾರೆ. ಆನಂತರ ಇಬ್ಬರೂ ಉಮೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಉಮೇಶ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎನ್ನಲಾಗಿದ್ದು, ಈ ಕುರಿತು ಬೆಸಗರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆ ಮರೆಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ.