ಕಾರವಾರ: ಇತ್ತೀಚೆಗೆ ಕುಮಟಾ ತಾಲೂಕಿನ ಗಡಿ ಭಾಗದ ದೇವಿಮನೆ ಘಟ್ಟ ಭಾಗದ ಮಾಸ್ತಿಮನೆ ದೇವಸ್ಥಾನದ ಹಿಂಭಾಗದಲ್ಲಿ ಅನಾಥ ಶವವೊಂದು ಪತ್ತೆಯಾಗಿತ್ತು.
ಸದ್ಯ ಈ ಪ್ರಕರ ಕುಮಟಾ ಪೊಲೀಸರು (Kumta Police) ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದು, ಪತ್ನಿಯೇ ತನ್ನ ಸರಸಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಕೊಲೆ ಮಾಡಿಸಿರುವ ಘಟನೆ ಬಯಲಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಮತ್ತು ಬಾಗಲಕೋಟೆ (Bagalkote) ಮೂಲದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗದಗ ಮೂಲದ ಪರಶುರಾಮ, ಬಾಗಲಕೋಟೆ ಮೂಲದ ರವಿ, ಕೊಲೆಯಾದ ವ್ಯಕ್ತಿಯ ಪತ್ನಿ ರಾಜಮಾ, ಗದಗ ಮೂಲದ ಬಸವರಾಜ್ ಬಂಧಿತ ಆರೋಪಿಗಳು.
ಬಾಗಲಕೋಟೆ ಮೂಲದ ಬಶೀರ್ ಸಾಬ್ ಎಂಬಾತನನ್ನು ಮಂಗಳೂರಿಗೆ ಬೀಚ್ ನೋಡುವುದಕ್ಕಾಗಿ ಪತ್ನಿ ರಾಜಮಾ ತಾನೇ 10 ಸಾವಿರ ರೂ. ಹಣ ನೀಡಿ ತಾನು ಅಕ್ರಮ ಸಂಬಂಧ ಹೊಂದಿದ್ದ ಪರಶುರಾಮನೊಂದಿಗೆ ಕಳುಹಿಸಿದ್ದಾಳೆ. ಕೊಲೆ ಮಾಡುವ ಉದ್ಧೇಶದ ಆತ ಮಂಗಳೂರಿಗೆ ಕರೆ ತಂದಿದ್ದ ಅಲ್ಲಿ, ಆತನಿಗೆ ದೊಡ್ಡಮ್ಮನ ಮಗ ರವಿ, ಬಸವರಾಜ್ ಜೊತೆಯಾಗಿದ್ದಾರೆ. ಅಲ್ಲಿಂದ ಮಂಗಳೂರಿನಿಂದ ಕುಮಟಾ ಮಾರ್ಗವಾಗಿ ದೇವಿಮನೆ ಘಟ್ಟದಲ್ಲಿ ಕೊಲೆಯಾದ ಬಶೀರ್ ಸಾಬ್ ನೊಂದಿಗೆ ಇಳಿದು ದೇವಸ್ಥಾನದ ಹಿಂಭಾಗದಲ್ಲಿ ಮದ್ಯ ಸೇವಿಸಿದ್ದಾರೆ. ಈ ಸಂದರ್ಭದಲ್ಲಿ ಪರಶುರಾಮ, ಬಶೀರ್ ಸಾಬ್‍ಗೆ ಹಿಂಭಾಗದಿಂದ ಕಟ್ಟಿಗೆಯಲ್ಲಿ ಹೊಡೆದು ಕೊಲೆ ಮಾಡಿ, ಅಲ್ಲಿಯೇ ಕಾಡಿನಲ್ಲಿ ಶವ ಹಾಕಿ ಹೋಗಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅಕ್ರಮ ಸಂಬಂಧಕ್ಕೆ ಗಂಡ ಅಡ್ಡಿಯಾಗುತ್ತಾನೆ ಎಂಬ ಕಾರಣದಿಂದ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಪತ್ನಿ ಹೇಳಿದ್ದಾಳೆ. ಸದ್ಯ ಆರೋಪಿಗಳನ್ನು ಕೋರ್ಟ್ ಗೆ ಒಪ್ಪಿಸಲಾಗಿದೆ.