ಮದುವೆ ನಿರಾಕರಿಸಿದ ಯುವಕನಿಗೆ ಆಸಿಡ್ ಎರಚಿದ ಮಹಿಳೆ

1 min read

ಮದುವೆ ನಿರಾಕರಿಸಿದ ಯುವಕನಿಗೆ ಆಸಿಡ್ ಎರಚಿದ ಮಹಿಳೆ

ಮದುವೆ ಮಾಡಿಕೊಳ್ಳಲು ನಿರಾಕರಿಸಿದ  ಎನ್ನವ ಕಾರಣಕ್ಕೆ ಮಹಿಳೆಯೊಬ್ಬಳು ಯವಕನ ಮೇಲೆ ಆಸಿಡ್ ಎರಚಿರುವ ಘಟನೆ ಕೇರಳ ರಾಜ್ಯದಲ್ಲಿ ನಡೆದಿದೆ. ನವೆಂಬರ್  16 ರಂದು ಆದಿಮಲೈ ಜಿಲ್ಲೆಯ ಇರುಪಂಪುಲಮ್  ನ ಚರ್ಚ್  ಬಳಿ ಯುವತಿ  ಯುವಕನ ಮೇಲೆ ಆಸಿಡ್ ಎರಚುವ ವೀಡಿಯೋ ಸಿ ಸಿ ಟಿವಿಯಲ್ಲಿ  ದಾಖಲಾಗಿದೆ.

ಶಿಬಾ ಎನ್ನುವ 35 ವರ್ಷದ ಮಹಿಳೆಯು ಗೆ ಫೇಸ್ ಬುಕ್  ನಲ್ಲಿ ಅರುಣ್ ಕುಮಾರ್ ಎನ್ನುವ ಯುವಕನ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಸ್ನೇಹ ಪ್ರೀತಿಗೆ ತಿರುಗಿದೆ…ನಂತರ ಯುವಕನಿಗೆ ಅಘತಕಾರಿ ವಿಷಯವೊಂದು ತಿಳಿದಿದೆ. ಯುವತಿಗೆ ಆಗಲೆ ಮದುವೆಯಾಗಿದ್ದು 2 ಮಕ್ಕಳು ಕೂಡ ಇದ್ದಾರೆ.

ಈ ವಿಷಯ ತಿಳಿದು ಯುವಕ ಹಿಂದೇಟು ಹಾಕಿದ್ದಾನೆ ಮತ್ತು ಮಹಿಳೆಯಿಂದ ದೂರವಾಗಿದ್ದನೆ. ಆದರೆ ಮಹಿಳೆ ಯುವಕನಿಗೆ ಮದುವೆ ಆಗುವಂತೆ ದುಂಬಾಲು ಬಿದ್ದಿದ್ದಾಳೆ. ಯುವಕ ಮದುವೆ ಆಗಲು ನಿರಾಕರಿಸಿದಾಗ 2 ಲಕ್ಷ ಹಣ ಕೊಡುವಂತೆ ಬ್ಲಾಕ್ಮೇಲ್ ಮಾಡಿದ್ದಾಳೆ. ಇದರ ಬಗ್ಗೆ ಮಾತನಾಡಲು ಆದಿಮಲೆ ಗೆ ಬರುವಂತೆ ಯುವನನ್ನ ಕರೆದಿದ್ದಾಳೆ.

ಯುವಕ ಅಲ್ಲಿಗೆ ಬಂದ ಬಳಿಕ  ಆತನ ಮೇಲೆ ಆಸಿಡ್ ಎರಚಿ ಸೇಡು ತೀರಿಸಿಕೊಂಡಿದ್ದಾಳೆ. ಆಸಿಡ್ ಪರಿಣಾಮದಿಂದಾಗಿ ಯವಕ ತನ್ನೆರಡು ಕಣ್ಣುಗಳನ್ನ ಕಳೆದುಕೊಂಡಿದ್ದಾನೆ. ಮುಖ ಮತ್ತು ಕುತ್ತಿಗೆ ಬಾಗಶಃ ಸುಟ್ಟು ಹೋಗಿದೆ.

ಪೊಲೀಸರು ಶಿಬಾ ಎನ್ನುವ  ಮಹಿಳೆಯನ್ನ ಅರೆಸ್ಟ್ ಮಾಡಿದ್ದಾರೆ.  ರಬ್ಬರ್ ಸಂಸ್ಕರಣೆಗೆ ಬಳಸುವ ಆಸಿಡ್ ನ ಬಳಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd