ಶ್ರೀಲಂಕಾಗೆ 600 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡಿದ ವಿಶ್ವಬ್ಯಾಂಕ್
ಶ್ರೀಲಂಕ: ಆರ್ಥಿಕವಾಗಿ ಸಂಪೂರ್ಣವಾಗಿ ಕುಸಿದು ಹೋಗಿದ್ದು, ಶ್ರೀಲಂಕಾಕ್ಕೆ ವಿಶ್ವಬ್ಯಾಂಕ್ 600 ಮಿಲಿಯನ್ ಯುಎಸ್ ಡಾಲರ್ ಆರ್ಥಿಕ ನೆರವು ನೀಡಲು ಮುಂದಾಗಿದೆ.
ಅಗತ್ಯ ಆಮದುಗಳ ಪಾವತಿ ಅವಶ್ಯಕತೆಗಳನ್ನು ಪೂರೈಸಲು ಈ ಹಣವನ್ನು ನೀಡುತ್ತಿದೆ. ಈ ಕುರಿತು ಶ್ರೀಲಂಕಾ ಅಧ್ಯಕ್ಷರು ಹೊರಡಿಸಿದ ಮಾಧ್ಯಮ ಪ್ರಕಟಣೆಯಲ್ಲಿ ವಿಶ್ವಬ್ಯಾಂಕ್ 400 ಮಿಲಿಯನ್ ಡಾಲರ್‌ಗಳನ್ನು “ಶೀಘ್ರದಲ್ಲೇ” ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಶ್ರೀಲಂಕಾಕ್ಕೆ ಸಹಾಯ ಮಾಡುವುದನ್ನು ಮುಂದುವರಿಸುವುದಾಗಿ ವಿಶ್ವಬ್ಯಾಂಕ್ ಹೇಳಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಲಂಕಾ ತನ್ನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು, ಇಂಧನ, ಔಷಧಗಳು ಮತ್ತು ಆಹಾರ ಪಡೆಯಲು ಸಹಾಯ ವಿಶ್ವಬ್ಯಾಂಕ್ ಸಹಾಯ ಮಾಡುತ್ತಿದೆ.
1948 ರಲ್ಲಿ ಸ್ವಾತಂತ್ರ್ಯದ ನಂತರ ಶ್ರೀಲಂಕಾದ ಆರ್ಥಿಕತೆ ಅತಿ ಕೆಳ ಮಟ್ಟಕ್ಕೆ ಇಳಿದಿದ್ದು, ಆರ್ಥಿಕತೆ ಕಳೆದ ಎರಡು ವರ್ಷಗಳಲ್ಲಿ 70 ಪ್ರತಿಶತದಷ್ಟು ಕುಸಿದಿದೆ ಮತ್ತು ಮಾರ್ಚ್ ಅಂತ್ಯದ ವೇಳೆಗೆ 1.93 ಶತಕೋಟಿ ಡಾಲರ್‌ಗಳನ್ನು ಮುಟ್ಟಿದೆ. ಅದರ ಮೀಸಲುಗಳಲ್ಲಿ ತೀವ್ರ ಕುಸಿತದಿಂದ ಉಂಟಾಗಿದೆ.