ವಿಶ್ವದ ಅತ್ಯಂತ ಹಿರಿಯ ಶ್ವಾನ ಎಂದೇ ಖ್ಯಾತಿಯಾಗಿದ್ದ ಬಾಬಿ ಸಾವನ್ನಪ್ಪಿದೆ.
ಶ್ವಾನಗಳ ಜೀವಿತಾವಧಿ ಸರಾಸರಿ 12 ರಿಂದ 15 ವರ್ಷ. ಆದರೆ, ಈ ಬಾಬಿ ಶ್ವಾನ ಮಾತ್ರ ಬರೋಬ್ಬರಿ 31 ವರ್ಷಗಳ ಕಾಲ ಬದುಕಿತ್ತು. ಈ ಮೂಲಕ ಅತೀ ಹೆಚ್ಚು ಕಾಲ ಬದುಕಿದ ಶ್ವಾನ ಎಂಬ ವಿಶ್ವ ದಾಖಲೆ ಮಾಡಿತ್ತು. ಆದರೆ 31 ರ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದೆ.
ಮೇ 11, 1992 ರಲ್ಲಿ ಜನಿಸಿದ ಬಾಬಿ “ರಾಫೀರೊ ಡೊ ಅಲೆಂಟೆಜೊ” ತಳಿಯದ್ದಾಗಿದ್ದು, ಆಶ್ಚರ್ಯಕರವೆಂಬಂತೆ 31 ವರ್ಷಗಳ ಕಾಲ ಬದುಕಿದೆ. ಈ ತಳಿಯ ನಾಯಿಗಳು 12 ರಿಂದ 14 ವರ್ಷಗಳ ಕಾಲ ಬದುಕುತ್ತವೆ. ಹೀಗಾಗಿ ಈ ನಾಯಿ ವಿಶ್ವದಾಖಲೆ ಮಾಡಿ ಸಾವನ್ನಪ್ಪಿದೆ.
ಪೋರ್ಚುಗಲ್ನ ಸಣ್ಣ ಹಳ್ಳಿಯೊಂದರಲ್ಲಿ ಲಿಯೋನೆಲ್ ಕೋಸ್ವಾ ಎಂಬವರ ಕುಟುಂಬದ ಜೊತೆಗೆ ಬಾಬಿ ವಾಸವಿತ್ತು. ಮೊದಲು ಆಸ್ಟ್ರೇಲಿಯಾದ ನಾಯಿಯೊಂದು 29 ವರ್ಷ, ಐದು ತಿಂಗಳ ಕಾಲ ಬದುಕಿತ್ತು. ಸದ್ಯ ವಿಶ್ವದ ಅತೀ ಹಿರಿಯ ವಯಸ್ಸಿನ ಶ್ವಾನ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿತ್ತು.