ವಿಶ್ವದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ಜಾನ್ ವಾಟ್ಕಿನ್ಸ್ ಇನ್ನಿಲ್ಲ
ವಿಶ್ವದ ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ಜಾನ್ ವಾಟ್ಕಿನ್ಸ್ ವಿಧಿವಶರಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 98 ವಯಸ್ಸಿನ ಜಾನ್ ಡರ್ಬಾನ್ ನಲ್ಲಿ ನಿಧನರಾಗಿದ್ದಾರೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ ಸೋಮವಾರ ಘೋಷಿಸಿದೆ.
ರೈಡ್ ಹ್ಯಾಂಡ್ ಬ್ಯಾಟ್ಸ್ ಮೆನ್ ಆಗಿದ್ದ ಜಾನ್, ಸ್ವಿಂಗ್ ಬೌಲರ್ ಮತ್ತು ಉತ್ತಮ ಸ್ಲಿಪ್ ಫೀಲ್ಡರ್ ಆಗಿದ್ದರು. ಅವರು 1949/50ಮತ್ತು 1956/57ರ ನಡುವೆ 15 ಟೆಸ್ಟ್ ಗಳಲ್ಲಿ ಆಡಿದ್ದರು.
ಇವರು ಕ್ರಿಕೆಟ್ ಗೂ ಮುನ್ನಾ ದಕ್ಷಿಣ ಆಫ್ರಿಕಾದ ವಾಯುಪಡೆಯೊಂದಿಗೆ ಸ್ಪಿಟ್ ಫೈರ್ ಪೈಲಟ್ ಆಗಿ ತರಬೇತಿ ಪಡೆದರು.
ಬಳಿಕ ಪ್ರಥಮ ದರ್ಜೆ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿ ಸೌತ್ ಆಫ್ರಿಕಾ ಪರ 15 ಟೆಸ್ಟ್ ಪಂದ್ಯಗಳನ್ನಾಗಿದ್ದಾರೆ.
ಅದರಲ್ಲೂ 1952/53ರ ಸಾಲಿನಲ್ಲಿ ಮೆಲ್ಬೋರ್ನ್ ನಲ್ಲಿ ನಡೆದ ಐದನೇ ಟೆಸ್ಟ್ ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಆಸ್ಟ್ರೇಲಿಯಾಕೆ ಸೋಲುಣಿಸಿದ್ದರು.