ಬಾಗಲಕೋಟೆ: ಬ್ರಿಟಿಷರಿಗೆ ವೀರ ಸಾವರ್ಕರ್ ಕ್ಷಮಾಪಣಾ ಪತ್ರ ಬರೆದುಕೊಟ್ಟದ್ದು ಬಿಟ್ಟರೆ ಈ ದರಿದ್ರ ಆರ್ಎಸ್ಎಸ್, ಸಂಘಪರಿವಾರದವರಿಗೆ ಸ್ವಾತಂತ್ರ್ಯ ಹೋರಾಟದ ಯಾವ ಹಿನ್ನೆಲೆಯೂ ಇಲ್ಲ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್ ಹಿರೇಮಠ ಅವರು ಹೇಳಿಕೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಸನಗೌಡ ಯತ್ನಾಳ ಅಂತಹವರ ಉದ್ಧಟತನದ ಹೇಳಿಕೆ ಒಬ್ಬ ಜನಪ್ರತಿನಿಧಿಗೆ ಶೋಭೆ ತರುವುದಿಲ್ಲ. ಯತ್ನಾಳ ಅಷ್ಟೇ ಅಲ್ಲ ಇಂತಹ ನಾಲಿಗೆ ಹರಿಯಬಿಡುವವರು ತಕ್ಷಣ ತಮ್ಮ ಬಾಯಿ ಬಂದ್ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ಬಸನಗೌಡ ಪಾಟೀಲ ಯತ್ನಾಳ ಅಂತಹವರು ಬಹುಬೇಗ ಜನರ ವಿಶ್ವಾಸ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.
ಇನ್ನು ಈ ದರಿದ್ರ ಆರ್ ಎಸ್ ಎಸ್, ಸಂಘಪರಿವಾರದಲ್ಲಿ ಯಾರೂ ಸ್ವಾತಂತ್ರ್ಯ ಹೋರಾಟಗಾರರೇ ಇಲ್ಲ. ಹೀಗಿದ್ದ ಮೇಲೆ ದೊರೆಸ್ವಾಮಿ ಅವರನ್ನು ಕೇಳಲು ಇರ್ಯಾರು ಎಂದು ಹಿರೇಮಠ ಅವರು ಪ್ರಶ್ನಿಸಿದರು.
ನಾಗೇಂದ್ರ ರಾಜೀನಾಮೆ ಬೆನ್ನಲ್ಲೇ ತಾರಕಕ್ಕೇರಿದ ಕೈ ಕಮಲ ಯುದ್ಧ: ಬಿಜೆಪಿಯಲ್ಲಿ ಜೈಲು ಬೇಲು ಆದವರು ಬ್ಯಾಟಿಂಗ್ ಬೌಲಿಂಗ್ ಮಾಡ್ತಿಲ್ವಾ ಎಂದು ಕಾಂಗ್ರೆಸ್ ಘರ್ಜನೆ
ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಬಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೂ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಂಘರ್ಷ ಮಾತ್ರ...








