ಹಾವೇರಿ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯ ಬಂದ್ ಗೆ ಹಲವು ಕನ್ನಡಪರ ಸಂಘಟನೆಗಳು ಕರೆ ನೀಡಿವೆ.
ಈ ವೇಳೆ ಬಸ್ ಗಾಗಿ ಕಾಯುತ್ತಿದ್ದ ಯುವತಿಯ ಮೊಬೈಲ್ ಕದ್ದು ಓಡುತ್ತಿದ್ದ ಕಳ್ಳನನ್ನು ಸ್ವತಃ ಅವಳೇ ಬೆನ್ನು ಹತ್ತಿ ಹಿಡಿದಿರುವ ಘಟನೆ ಹಾವೇರಿ(Haveri) ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ.
ಖದೀಮನನ್ನು ಯುವತಿ ಹಿಡಿಯುತ್ತಿದ್ದಂತೆ ಸಹಾಯಕ್ಕೆ ಬಂದ ಜನರು, ಆತನಿಗೆ ತಾನೊಂದು, ನೀನೊಂದು ಎಂಬಂತೆ ಧರ್ಮದೇಟು ನೀಡಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೊಬೈಲ್ ಕದ್ದು ಓಡುತ್ತಿದ್ದವನ ಹೆಸರು ರಾಜು ಎಂದು ಗುರಿತಸಲಾಗಿದೆ. ಯುವತಿಯ ಧೈರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.








