ಮೊಬೈಲ್ ಕದ್ದು ಓಡಿ ಹೋದ ಕಳ್ಳ… ಮತ್ತೆ ಬಂದು ಮೊಬೈಲ್ ಕೊಟ್ಟ..! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..!
ಉತ್ತರ ಪ್ರದೇಶ : ಉತ್ತರಪ್ರದೇಶದ ನೋಯ್ಡಾದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಕಳ್ಳನೊಬ್ಬ ಹಿರಿಯ ಪ್ರತಕರ್ತರೊಬ್ಬರ ಬಳಿಯಿಂದ ಮೊಬೈಲ್ ಕಸಿದು ಪರಾರಿಯಾಗ್ತಿದ್ದ ಕಳ್ಳ ಮಾಲೀಕ ಕಿರುಚಾಡೋ ಮುನ್ನವೇ ವಾಪಸ್ ಕೂಡ ತಂದುಕೊಟ್ಟಿದ್ದಾನೆ.
ಪ್ರಕರಣದ ಹಿನ್ನೆಲೆ
ಬಣ್ಣದ ಮಾಸ್ಕ್ ಹಾಕಿಕೊಂಡು ಬಂದ ವ್ಯಕ್ತಿ ದೆಬಾಯನ್ ರಾಯ್ ಎಂಬುವವರ ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 10 ಪ್ಲಸ್ ಫೋನನ್ನ ಕಸಿದು ಪರಾರಿಯಾಗುತ್ತಿದ್ದ. ಆದ್ರೆ ಕ್ಷಣಾರ್ಧಲ್ಲೇ ವಾಪಸ್ ಬಂದು ಖದೀಮ ವಾಪಸ್ ಮತ್ತೆ ಬಂದು ಪತ್ರಕರ್ತನಿಗೆ ಆತನ ಮೊಬೈಲ್ ಹಿಂದಿರುಗಿಸಿ ಮತ್ತೆ ಓಡಿ ಹೋಗಿದ್ದಾನೆ.
ಅಂದ್ಹಾಗೆ ಕೆಟ್ಟುಹೋಗಿದ್ದೋ, ಒಡೆದುಹೋಗಿದ್ದೋ, ಇಲ್ಲ ಕೀಪ್ಯಾಡ್ ಸೆಟ್ಟೋ ಅಲ್ಲ. ಅಷ್ಟೇ ಅಲ್ಲ ದುಬಾರಿ ಸೆಟ್ ಕೂಡ.. ಆದ್ರೂ ಯಾಕೆ ಆ ಕಳ್ಳ ಮೊಬೈಲ್ ವಾಪಸ್ ಕೊಟ್ಟ. ಓಡಿ ಹೋಗೋಕು ಮುನ್ನ ಆತನ ಮಾತು ಕೇಳಿ ಮೊಬೈಲ್ ಮಾಲೀಕರು ಒಂದು ಕ್ಷಣ ದಂಗಾಗಿದ್ದಾರೆ. ತಮ್ಮ ಅನುಭವವನ್ನ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ.
ಕಳ್ಳ ಮೊಬೈಲ್ ವಾಪಸ್ ಬಿಸಾಡುವಾಗ ನಾನು ಇದನ್ನ ಒನ್ ಪ್ಲಸ್ 9 ಪ್ರೋ ಎಂದು ಭಾವಿಸಿ ಕದ್ದೆ.. ಆದ್ರೆ ಈ ಫೋನ್ ಅದಲ್ಲಾ.. ನನಗೆ ಅದೇ ಫೋನ್ ಬೇಕು.. ಕ್ಷಮಿಸಿ ಎಂದು ಹೇಳಿ ಪರಾರಿಯಾಗಿದ್ದಾನೆ. ಕಳ್ಳನ ವರಸೆಗೆ ಪತ್ರಕರ್ತ ಶಾಕ್ ಆಗಿದ್ದಾರೆ. ಅವರ ಅನುಭವ ಕೇಳಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ನಾನಾ ರೀತಿಯಾದ ಫನ್ನಿ ಕಮೆಂಟ್ ಗಳನ್ನ ಮಾಡ್ತಿದ್ದಾರೆ.








