ಇನ್ಮುಂದೆ ಮಾಸ್ಕ್ ಧರಿಸದೇ ಹೋದ್ರೆ 1000 ರೂಪಾಯಿ ದಂಡ..!

1 min read
cotton face mask

ಇನ್ಮುಂದೆ ಮಾಸ್ಕ್ ಧರಿಸದೇ ಹೋದ್ರೆ 1000 ರೂಪಾಯಿ ದಂಡ..!

ಹೈದರಾಬಾದ್ : ಕೊರೊನಾ 2ನೇ ಅಲೆಎ ನಡುವೆ , ಸರ್ಕಾರ ಎಷ್ಟೇ ಕ್ರಮಗಳನ್ನ ಕೈಗೊಂಡರೂ ಸಹ ಜನರು ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅಂತಹವರಿಗೆ ಬಿಸಿ ಮುಟ್ಟಿಸಲು ತೆಲಂಗಾಣ ಸರ್ಕಾರ 100-200 ರೂಪಾಯಿ ಇದ್ದ ದಂಡದ ಪ್ರಮಾಣವನ್ನ 1000 ರೂಪಾಯಿಗೆ ಏರಿಕೆ ಮಾಡಿ ಜನರಿಗೆ ಶಾಕ್ ನೀಡಿದೆ.

ಮಾಸ್ಕ್ ಧರಿಸದೇ ಅಸಡ್ಡೆ ತೋರಿಸುವ ಜನರಿಗೆ 1,000ರೂ. ದಂಡ ವಿಧಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಗುರುವಾರ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಗುರುವಾರ ಪ್ರಧಾನಿ ನರೇಂದ್ರ ಮೋದಿಯವರು ಆಯೋಜಿಸಿದ್ದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿದ್ದ ಸಿಎಂ ಚಂದ್ರಶೇಖರ್ ನಂತರ ಆರೋಗ್ಯ ಅಧಿಕಾರಿಗಳೊಂದಿಗೆ ಪ್ರಸ್ತುತ ಕೊರೊನಾ ಸೋಂಕಿನ ಬಗ್ಗೆ ಚರ್ಚೆ ನಡೆಸಿದರು.

ರಾಜ್ಯದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸುವಂತೆ ಸಿಎಂ ಚಂದ್ರಶೇಖರ್ ರಾವ್ ಅಧಿಕಾರಿಗಳಿಗೆ ತಿಳಿಸಿದರು. ಅಲ್ಲದೇ ಮುಂಜಾಗ್ರತಾ ಕ್ರಮವಾಗಿ ಎಲ್ಲ ಆರೋಗ್ಯ ಸಿಬ್ಬಂದಿಗೂ ಲಸಿಕೆ ನೀಡಬೇಕು ಹಾಗೂ ಈ ಪ್ರಕ್ರಿಯೆ ಈ ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ.

ತಮಿಳು ಸಿನಿಮಾದಲ್ಲಿ ನಟಿಸುತ್ತೇನೆ.. ಆದ್ರೆ ಒಂದು ಷರತ್ತಿನ ಮೇಲೆ – ಪುನೀತ್ ರಾಜ್ ಕುಮಾರ್ ಹಾಕಿದ ಕಂಡೀಷನ್ ಏನ್ ಗೊತ್ತಾ..?  

ಲಕ್ಷಾಂತರ ರೂಪಾಯಿ ವಂಚನೆ : ನಕಲಿ ಸೇನಾಧಿಕಾರಿ ಅರೆಸ್ಟ್

ಕೊರೊನಾ ಲಾಕ್ ಡೌನ್ ಬಗ್ಗೆ ಮೋದಿ ಸ್ಪಷ್ಟನೆ

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd