ಸಾಹಿತಿಗಳು ಸಿದ್ದರಾಮಯ್ಯ ಮನೆ ಬಾಗಿಲಿನಲ್ಲಿ ನಿಲ್ಲುತ್ತಿದ್ದರು: ನಿರ್ದೇಶಕ ಅಡ್ಡಂಡ ಕಾರ್ಯಪ್ಪ
ಧಾರವಾಡ: ಸಾಹಿತಿಗಳು ಸಿದ್ದರಾಮಯ್ಯ ಮನೆ ಬಾಗಿಲಿನಲ್ಲಿ ನಿಲ್ಲುತ್ತಿದ್ದರು ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದರು.
ಧಾರವಾಡದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗಿರೀಶ್ ಕಾರ್ನಾಡ್ ಸಹ ರಾಜಕಾರಣ ಮಾಡಿದವರೇ. ಸಾಹಿತಿಗಳು ಸಿದ್ದರಾಮಯ್ಯ ಮನೆ ಬಾಗಿಲಿನಲ್ಲಿ ನಿಲ್ಲುತ್ತಿದ್ದರು. ರಂಗಭೂಮಿಯಲ್ಲಿ ರಾಜಕಾರಣ ಮೊದಲಿನಿಂದ ಇದೆ. ಈಗ ಬಂದಿದೆ ಎನ್ನುವುದು ಸುಳ್ಳೇ?. ಈಗ ಸರ್ಕಾರದ ಭಾಗ ಅಲ್ಲದವರಿಗೆ ಆಗಿನದು ಅಲ್ಲ ಅನಿಸುತ್ತಿದೆ. ಸರ್ಕಾರದ ಭಾಗ ಆಗಿದ್ದಾಗ ರಾಜಕೀಯವಾಗಿಯೇ ಇದ್ದರು. ಹಿರಿಯ ಸಾಹಿತಿ ಮರುಳಸಿದ್ದಪ್ಪ ಸೇರಿ ಅನೇಕರು ಕಾಂಗ್ರೆಸ್ ಕರಪತ್ರ ಹಂಚಿದ್ದಾರೆ ಎಂದರು
ಅಲ್ಲದೇ. ಗಿರೀಶ್ ಕಾರ್ನಾಡ್ ಸಹ ರಾಜಕೀಯ ಮಾಡಿದ್ದಾರೆ. ಅರ್ಬನ್ ನಕ್ಸಲ್ ಅಂತಾ ಬೋರ್ಡ್ ಹಾಕಿಕೊಂಡು ಕುಳಿತ್ತಿದ್ದರು. ಸಿದ್ದರಾಮಯ್ಯ ಸರ್ಕಾರವಿದ್ದಾಗ ಸಾಹಿತಿಗಳು ಅವರ ಮನೆ ಬಾಗಿಲಿನಲ್ಲೇ ಇದ್ದರು. ರಾಜಕೀಯ ಅಂದರೆ ಹೊಲಸು ಅಲ್ಲ. ರಾಜಕೀಯವೂ ಬೇಕು. ಸಂವಿಧಾನದ ಅಡಿಯಲ್ಲಿಯೇ ರಾಜಕೀಯ ನಡೆಯುತ್ತಿದೆ. ರಾಜಕಾರಣ, ಧರ್ಮ, ರಂಗಭೂಮಿ ಬಿಟ್ಟು ಇರುವುದಿಲ್ಲ ಎಂದು ಹೇಳಿದ್ದಾರೆ.
ಹಾಗೇ ನಾನು RSS ಕಾರ್ಯಕರ್ತರನ್ನು ಗೌರವಿಸುತ್ತೇನೆ. ಅವರು ದೇಶಕ್ಕಾಗಿ ಚಿಂತನೆ ಮಾಡುತ್ತಾರೆ. RSS ನವರು ಮದುವೆಯಾಗದೆ, ಚಾಪೆಯಲ್ಲಿ ಮಲಗುತ್ತಾರೆ. ಪ್ರತಿದಿನ ದೇಶಕ್ಕಾಗಿ ಚಿಂತನೆ ಮಾಡುತ್ತಾರೆ. ಅವರನ್ನು ನಾನು ಪ್ರೀತಿಸುತ್ತೇನೆ, ಗೌರವಿಸುತ್ತೇನೆ ಎಂದು ಮಾತನಾಡಿದರು.