ಅಂದು…
ಸಾವು ಕಣ್ಣೆದುರು ಕಾಣುತ್ತಿದ್ರೂ ಆತ ಕಣ್ಣೀರು ಹಾಕಲಿಲ್ಲ.. ರಕ್ತ ಸುರಿಯುತ್ತಿದ್ರೂ ಎದೆಗುಂದಿರಲಿಲ್ಲ.. ದೇಹ ನುಜ್ಜು ಗುಜ್ಜು ಆಗಿದ್ರೂ ಒಂಚೂರು ನೋವನ್ನು ತೋರಿಸಿಕೊಂಡಿರಲಿಲ್ಲ.. ಅಪಘಾತಕ್ಕಿಡಾಗಿ ಬೆಂಕಿಯ ಜ್ವಾಲೆಯಲ್ಲಿ ಸುಟ್ಟು ಹೋಗಿದ್ದ ಕಾರನ್ನು ರಕ್ತದ ಮಡುವಿನಲ್ಲಿ ಏನು ಆಗಿಲ್ಲ ಎಂಬಂತೆ ಕುಳಿತು ನೋಡುತ್ತಿದ್ದ…
ಇಂದು…
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನ.. ಇನ್ನೇನು ದಿನದ ಆಟ ಮುಗಿಯುವ ಸಮಯ.. ಅಷ್ಟು ಹೊತ್ತು ಸಂಯಮದಿಂದಲೇ ಆಡುತ್ತಿ ದ್ದ ಆತ ಮನಸು ಬದಲಾಯಿಕೊಂಡ. ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಲು ಮುಂದಾದಾಗ ಆತನ ಲಯ ತಪ್ಪಿ ಹೋಯಿತು. ಬ್ಯಾಟ್ ನ ಅಂಚಿಗೆ ತಗುಳಿದ್ರೂ.. ಕ್ರಿಸ್ ವೋಕ್ಸ್ ನ ಯಾರ್ಕರ್ ಎಸೆತ ಆತನ ಎಡ ಕಾಲಿನ ಪಾದಕ್ಕೆ ಬಡಿದಿದೆ.. ಅಷ್ಟೇ.. ಆತನಿಗೆ ಆ ನೋವನ್ನು ಸಹಿಸಿಕೊಳ್ಳಲು ಆಗಲಿಲ್ಲ.. ರಕ್ತ ಜೊತೆಗೆ ಪಾದ ಊದಿಕೊಂಡಿತ್ತು. ನಡೆಯುವುದು ಬಿಡಿ ಆ ನೋವಿಗೆ ಆತ ಗಳ ಗಳ ನೇ ಅತ್ತುಬಿಟ್ಟ.. ಆತನಿಗೆ ನೋವು ಸಹಿಸಿ ಕೊಳ್ಳಲು ಸಾಧ್ಯವಾಗಿಲ್ಲ.. ಇದನ್ನೆಲ್ಲ ನೋಡಿದಾಗ ಆತ ಈ ಪಂದ್ಯದಲ್ಲಿ ಆಡುವುದಿಲ್ಲ.. ಸರಣಿಯಿಂದ ಲೇ ಔಟ್ ಅಂತ ಭಾವಿಸಲಾಗಿತ್ತು.
ಆದ್ರೆ ಎರಡನೇ ದಿನ ಆಗಿದ್ದೇ ಬೇರೆ.. ಕುಂಟುತ್ತಲೇ ಕ್ರೀಸ್ ಗೆ ಆಗಮಿಸಿದಾಗ ಅನಿಸಿದ್ದು ಇಷ್ಟೇ.. ಈತ ಸಾಮಾನ್ಯ ನಲ್ಲ… ಅಸಾಮಾನ್ಯ ರಣ ಬೇಟೆಗಾರ. ಟೀಮ್ ಪ್ಲೇಯೆರ್.. ಘಾಸಿಗೊಂಡ ಹುಲಿ ಆಂಗ್ಲರನ್ನು ಬೇಟೆ ಹೇಗೆ ಆಡುತ್ತೆ ಅನ್ನೊದನ್ನು ನೋಡುವುದೇ ಚೆಂದ.. ರಿಷಬ್ ಪಂತ್ ಫಿಯರ್ ಲೆಸ್ ಪ್ಲೇಯರ್.. ಗಾಯಗೊಂಡು ತಂಡಕ್ಕಾಗಿ ಆಡಿದ್ದ ಸಚಿನ್.. ಕುಂಬ್ಳೆ ಅವರ ಆ ಮಹೋನ್ನತ ಇನ್ನಿಂಗ್ಸ್ ಗಳು ಒಂದು ಕ್ಷಣ ಕಣ್ಣ ಮುಂದೆ ಹಾದು ಹೋದವು.
ಸನತ್ ರೈ








