ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ಸೇರಿ ಒಟ್ಟು 67 ವೈದ್ಯಕೀಯ ಕಾಲೇಜುಗಳಿವೆ : ಕೆ ಸುದಾಕರ್
ಬೆಂಗಳೂರು: ರಾಜ್ಯದಲ್ಲಿ ಒಂದೇ ಒಂದು ಸರ್ಕಾರಿ ವೈದ್ಯಕೀಯ ಸೀಟ್ ಕೂಡ ಲ್ಯಾಪ್ಸ್ ಆಗಲ್ಲ. ಎಲ್ಲ ಸೀಟ್ ಗಳನ್ನು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ತಿಂಬಿಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುದಾಕರ್ ವಿಧಾನ ಪರಿಷತ್ ನಲ್ಲಿ ಹೇಳಿದ್ದಾರೆ.
ಪರಿಷತ್ ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತಾಡಿದ ಅವರು ಕ್ಲಿನಿಕ್ ಮತ್ತು ಪ್ಯಾರಾ ಮೆಡಿಕಲ್ ಹೊರತುಪಡಿಸಿ ಬೇರೆ ಯಾವುದೇ ಬಾಕಿ ಇರಲ್ಲ. ಅಲ್ಲದೇ ನಮ್ಮ ರಾಜ್ಯದಲ್ಲಿ ಸರಕಾರಿ ಮತ್ತು ಖಾಸಗಿ ಸೇರಿ ಒಟ್ಟು 67 ವೈದ್ಯಕೀಯ ಕಾಲೇಜುಗಳಿವೆ ಎಂದು ಹೇಳಿದರು.
ಹಾಗೇ ರಾಜ್ಯದಲ್ಲಿ 10 ಸಾವೀರಕ್ಕೂ ಹೆಚ್ಚೂ ಮೆಡಿಕಲ್ ಸೀಟ್ ಗಳಿವೆ. ಅವುಗಳಿಗಾಗಿ ಮೂರು ಸುತ್ತುಗಳ ಕೌನ್ಸೆಲಿಂಗ್ ಮಾಡಲಾಗುತ್ತದೆ. ಇನ್ನೂ ಮಾಪ್-ಅಪ್ ರೌಂಡ್ (Mop – Up Round) ನಂತರ ಬಾಕಿ ಉಳಿದ ಸೀಟ್ಗಳನ್ನು ಮೆರಿಟ್ ಮೂಲಕ ವಿದ್ಯಾರ್ಥಿಗಳಿಗೆ ನೀಡಲು ಆಯಾ ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗುತ್ತಿದೆ ಎಂದರು.