ADVERTISEMENT
Saturday, September 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಹೈಕಮಾಂಡ್ – ‌ʻಕೈʼ ಗೂ ʻಕಮಲʼ ಕ್ಕೂ ವ್ಯತ್ಯಾಸ ಇಲ್ಲ..!

Shwetha by Shwetha
August 3, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Share on FacebookShare on TwitterShare on WhatsappShare on Telegram

ಹೈಕಮಾಂಡ್ – ‌ʻಕೈʼ ಗೂ ʻಕಮಲʼ ಕ್ಕೂ ವ್ಯತ್ಯಾಸ ಇಲ್ಲ..!

ಹೈಕಮಾಂಡ್‌ ಮುಂದೆ ಕೈಕಟ್ಟಿ ನಿಲ್ಲೋ ಗುಲಾಮಗಿರಿ ಪದ್ದತಿಯಿಂದ ಅದ್ಯಾವಾಗ ಕರ್ನಾಟಕಕ್ಕೆ ಮುಕ್ತಿ ಸಿಗುತ್ತೋ..? ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಚುನಾವಣೆಗೆ ಟಿಕೆಟ್‌ ಪಡೆಯಲು, ಮುಖ್ಯಮಂತ್ರಿ ಆಯ್ಕೆ, ಕ್ಯಾಬಿನೆಟ್‌ ರಚನೆ ಹೀಗೆ ಏನೇ ಆಗಬೇಕಾದ್ರೂ ಎಲ್ಲವೂ ನಿರ್ಧಾರ ಆಗ್ತಾ ಇದ್ದದ್ದು ದೆಹಲಿಯಲ್ಲಿ. ಹೈಕಮಾಂಡ್‌ ನಾಯಕರ ಮನವೊಲಿಸಿಕೊಂಡ್ರೆ ಏನು ಬೇಕಾದ್ರೂ ಮಾಡಬಹುದು. ಎದುರುಹಾಕಿಕೊಂಡ್ರೆ ಪದಚ್ಯುತಿ ಗ್ಯಾರಂಟಿ ಅನ್ನೋ ಸ್ಥಿತಿ ಇತ್ತು.
There is no difference between bjp highcommand and congress highcommand
ಮತ್ತೊಂದು ರಾಷ್ಟ್ರೀಯ ಪಕ್ಷ ಭಾರತೀಯ ಜನತಾ ಪಕ್ಷ ಶಿಸ್ತಿಗೆ ಹೆಸರಾದದ್ದು. ಬಿಜೆಪಿ ಕಾಂಗ್ರೆಸ್‌ ಗಿಂತ ಭಿನ್ನವಾದ ಪಕ್ಷ ಎಂಬಂತೆ ಬಿಂಬಿಸಿಕೊಂಡಿತ್ತು. ಆದರೆ ಅಧಿಕಾರದ ವಿಚಾರ ಬಂದಾಗ ಬಿಜೆಪಿ ತಾನು ಕಾಂಗ್ರೆಸ್‌ ಗಿಂತ ಭಿನ್ನವಲ್ಲ ಅನ್ನೋದನ್ನು ಸಾಧಿಸಲು ಹೊರಟಿದೆ. ಕಳೆದ ಕೆಲ ದಿನಗಳಿಂದ ರಾಜ್ಯ ರಾಜಕಾರಣವನ್ನ ಗಮನಿಸಿದವರಿಗೆ ಇದು ಸ್ಪಷ್ಟವಾಗಿ ಗೋಚರಿಸಿರುತ್ತದೆ. 2008 ರಲ್ಲಿ ಅಧಿಕಾರಕ್ಕೆ ಬಂದಾಗ 5 ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳು ಬದಲಾದಾಗಲೇ ಬಿಜೆಪಿ ಕಾಂಗ್ರೆಸ್‌ಗಿಂತ ಭಿನ್ನವಲ್ಲ ಅಂತ ನಿರೂಪಿಸಿತ್ತು. 2 ವರ್ಷಗಳ ಹಿಂದೆ ರಾಜ್ಯದಲ್ಲಿ ಅಧಿಕಾರ ಹಿಡಿಯುವ ಅವಕಾಶ ಸಿಕ್ಕಾಗ ತನ್ನದೇ ನಿಯಮ(75 ವರ್ಷ ಮೀರಿದವರಿಗೆ ನಿವೃತ್ತಿ)ವನ್ನು ಮೀರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಅವಕಾಶ ಕೊಟ್ಟು ಪೂರ್ಣಾವಧಿ ಮುಗಿಸುವ ಭರವಸೆ ನೀಡಿತ್ತು.
ಆದರೆ ಬಿಎಸ್‌ವೈ ಗೆ ವಯಸ್ಸಾಗಿದೆ ಅನ್ನೋ ಕಾರಣ ಕೊಟ್ಟು ಸಿಎಂ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿತು ಹೈಕಮಾಂಡ್‌. ಯಾವಾಗ ಸಿಎಂ ಬದಲಾವಣೆ ನಿರ್ಧಾರವಾಯ್ತೋ ಆಗಲೇ ಮುಂದಿನ ಸಿಎಂ ಯಾರಾಗಬೇಕು ಅನ್ನೋದು ಮುಂಚೆಯೇ ನಿರ್ಧಾರ ಮಾಡಿರಲಿಲ್ಲವೇ ಹೈಕಮಾಂಡ್‌. ಮುಖ್ಯಮಂತ್ರಿ ರಾಜೀನಾಮೆ ಕೊಟ್ಟ ಮೇಲೆ ಸಾಕಷ್ಟು ಹೈಡ್ರಾಮಾ ನಡೆಯಲು‌ ಹೈಕಮಾಂಡ್‌ ಅವಕಾಶ ಕೊಟ್ಟ ಪರಿಣಾಮ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಎಸ್‌ವೈ ಸ್ಥಳೀಯ ಹೈಕಮಾಂಡ್‌ ಆಗಿ ರೂಪಗೊಳ್ಳುವಂತೆ ಮಾಡಿತು.
ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಅಧಿಕಾರ ಸ್ವೀಕರಿಸಿದ ಮೇಲೆ ಅವರಿಗಿರೋದು ಕೇವಲ ಒಂದೂವರೆ ವರ್ಷದ ಅವಧಿ. ಆದರೆ ಅವರು ಸಿಎಂ ಆದ ಒಂದು ವಾರದ ನಂತರವೂ ತಮ್ಮ ಸಂಪುಟ ರಚನೆ ಮಾಡಲು ಎರಡೆರಡು ಬಾರಿ ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರ ಜೊತೆ ಮಾತನಾಡಲು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ತಮ್ಮದೇ ಪಕ್ಷದ ಸಿಎಂ ಕ್ಯಾಬಿನೆಟ್‌ ರಚಿಸಲು ದೆಹಲಿಯಲ್ಲಿ ಹೈಕಮಾಂಡ್‌ ಅಪ್ಪಣೆಗಾಗಿ ಕಾಯುವಂತಾಗಿದೆ. ಕ್ಯಾಬಿನೆಟ್‌ ರಚನೆ ಅಷ್ಟು ಸುಲಭವಲ್ಲ ನಿಜ. ಅದರಲ್ಲೂ ಈಗಿನ ಸರ್ಕಾರದಲ್ಲಿ ಮೂಲ ಶಾಸಕರು, ವಲಸಿಗ ಶಾಸಕರು, ಹಿರಿಯರು. ಕಿರಿಯರು, ಆರ್‌ಎಸ್‌ಎಸ್‌ ಕಡೆಯವರು, ಬಿಎಸ್‌ವೈ ಕಡೆಯವರು, ಪ್ರಾದೇಶಿಕ ಸಮಾನತೆ, ಸಾಮಾಜಿಕ ನ್ಯಾಯ ಹೀಗೆ ಹಲವಾರು ಚಾಲೆಂಜಸ್‌ ಇದೆ. ಇದರ ಜೊತೆಗೆ ಮುಂದಿನ ಚುನಾವಣೆಗೆ ತಯಾರಿ ಆಗಬೇಕಾಗುತ್ತೆ ಅದನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತೆ. ಎಲ್ಲರನ್ನೂ ಸಮಾಧಾನ ಪಡಿಸೋದು ಕಷ್ಟ. ಏನೇ ಸರ್ಕಸ್‌ ಮಾಡಿ ಲೆಕ್ಕಾಚಾರ ಹಾಕಿದ ಮೇಲೂ ಹಲವರಿಗೆ ಅಸಮಧಾನ ಆಗೋದು ನಿಶ್ಚಿತ.
There is no difference between bjp highcommand and congress highcommand
ಇಂದು ಕರ್ನಾಟಕದಲ್ಲಿ ಒಂದು ಕಡೆ ನೆರೆ, ಮತ್ತೊಂದು ಕಡೆ ಕೋವಿಡ್‌ ಹಾವಳಿ ಇಂತಹ ಸಂದರ್ಭದಲ್ಲಿ ಸಿಎಂ ಬದಲಾವಣೆ, ಕ್ಯಾಬಿನೆಟ್‌ ರಚನೆಗಾಗಿ ಹೊಸ ಸಿಎಂ ದೆಹಲಿಗೆ ಅಲೆಯಬೇಕಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಸರ್ಕಾರವೇ ಅಸ್ತಿತ್ವದಲ್ಲಿ ಇಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಸಂದರ್ಭದಲ್ಲಿ ಹೈಕಮಾಂಡ್‌ ನಾಯಕರಿಗೆ ಜನರ ಸಮಸ್ಯೆಗಳಿಗಿಂತ ತಮ್ಮ ಭವಿಷ್ಯದ ಲಾಭವೇ ಮುಖ್ಯವಾದಂತಿದೆ. ಇದೆಲ್ಲಾ ಗಮನಿಸಿದ್ರೆ ಕೈ ಹೈಕಮಾಂಡ್‌ ಹೇಗೆ ವರ್ತಿಸ್ತಾ ಇತ್ತೋ ಅದೇ ರೀತಿ ಬಿಜೆಪಿ ಹೈಕಮಾಂಡ್‌ ಸಹ ವರ್ತಿಸುತ್ತಿದೆ. ಹೀಗಾಗಿ ಕೈ ಕಮಾಂಡ್‌ಗೂ ಕಮಲ ಕಮಾಂಡ್‌ಗೂ ಯಾವುದೇ ವ್ಯತ್ಯಾಸವಿಲ್ಲದಂತಾಗಿದೆ. ಒಟ್ಟಿನಲ್ಲಿ ಯಾರೇ ಅಧಿಕಾರಕ್ಕೆ ಬಂದ್ರೂ ದೆಹಲಿಯಲ್ಲಿ ಕೈ ಕಟ್ಟಿ ನಿಲ್ಲೋದು ಮಾತ್ರ ತಪ್ಪಲಿಲ್ಲ ಎನ್ನುವಂತಾಗಿದೆ.

Related posts

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

September 19, 2026
ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

September 19, 2026

#bjp #highcommand #congress #highcommand

Tags: bjp highcommandcongress highcommand
ShareTweetSendShare
Join us on:

Related Posts

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

ಸ್ವಂತ ಅಭ್ಯರ್ಥಿ ಕೈಕೊಟ್ಟ ಬೆನ್ನಲ್ಲೇ ಕಾಂಗ್ರೆಸ್ ಕೈ ಹಿಡಿದ ಮಮತಾ ಬ್ಯಾನರ್ಜಿ:ಬಿಜೆಪಿಯ ಕಮಲ ಬಾಡಿಸಲು ಕೈ ಜೊತೆಗೂಡಿದ ತೃಣಮೂಲ-ನಂದಿಗ್ರಾಮದ ರಣಕಣದಲ್ಲಿ ದೀದಿ ಹೊಸ ರಣತಂತ್ರಕ್ಕೆ ಬೆಚ್ಚಿಬಿದ್ದ ಕೇಸರಿ ಪಡೆ

by Shwetha
September 19, 2026
0

ನಂದಿಗ್ರಾಮ: ಪಶ್ಚಿಮ ಬಂಗಾಳದ ಹೈವೋಲ್ಟೇಜ್ ಕ್ಷೇತ್ರ ನಂದಿಗ್ರಾಮದ ಉಪಚುನಾವಣೆಯಲ್ಲಿ ಈಗ ಅನಿರೀಕ್ಷಿತ ರಾಜಕೀಯ ತಿರುವು ಕಂಡುಬಂದಿದೆ. ತನ್ನ ಬಣದ ಅಭ್ಯರ್ಥಿಯೇ ಕಣದಿಂದ ಹಿಂದೆ ಸರಿದು ಆಘಾತ ನೀಡಿದ...

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ಸಚಿವ ರುದ್ರಪ್ಪ ಲಮಾಣಿ ಅವರಿಗೆ ₹3 ಕೋಟಿ ದಂಡ

by Shwetha
September 19, 2026
0

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರಿಗೆ ಬರೋಬ್ಬರಿ ₹3...

ಕರ್ನಾಟಕದ 2ನೇ ಅಧಿಕೃತ ಭಾಷೆಯಾಗಿ ತುಳುವಿಗೆ ಸ್ಥಾನಮಾನ: ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೂ ಸಂಪುಟದ ಕ್ರಮ

ಕರ್ನಾಟಕದ 2ನೇ ಅಧಿಕೃತ ಭಾಷೆಯಾಗಿ ತುಳುವಿಗೆ ಸ್ಥಾನಮಾನ: ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೂ ಸಂಪುಟದ ಕ್ರಮ

by Shwetha
September 19, 2026
0

ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವ ಕರ್ನಾಟಕ ಸರ್ಕಾರ, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಮಹತ್ವದ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್...

ಮೃತದೇಹದ ಬಳಿ ರೈಲು ಟಿಕೆಟ್ ಸಿಗಲಿಲ್ಲ ಎಂದ ಮಾತ್ರಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾನೆ ಎನ್ನಲಾಗದು: ಹೈಕೋರ್ಟ್

ಮೃತದೇಹದ ಬಳಿ ರೈಲು ಟಿಕೆಟ್ ಸಿಗಲಿಲ್ಲ ಎಂದ ಮಾತ್ರಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಾನೆ ಎನ್ನಲಾಗದು: ಹೈಕೋರ್ಟ್

by Shwetha
September 19, 2026
0

ರೈಲು ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕನ ಮೃತದೇಹದ ಬಳಿ ಪ್ರಯಾಣದ ಟಿಕೆಟ್ ಪತ್ತೆಯಾಗಿಲ್ಲ ಎಂಬ ಒಂದೇ ಕಾರಣಕ್ಕೆ ಆತ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು...

ಸಂಪೂರ್ಣ ವಂದೇ ಮಾತರಂ ಹಾಡ್ತೀವಿ ತಾಕತ್ತಿದ್ರೆ ಕ್ರಮ ತಗೊಳ್ಳಿ: ತಂಗಡಗಿ ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಸೂಲಿಬೆಲೆ

ಸಂಪೂರ್ಣ ವಂದೇ ಮಾತರಂ ಹಾಡ್ತೀವಿ ತಾಕತ್ತಿದ್ರೆ ಕ್ರಮ ತಗೊಳ್ಳಿ: ತಂಗಡಗಿ ಎಚ್ಚರಿಕೆಗೆ ಡೋಂಟ್ ಕೇರ್ ಅಂದ ಸೂಲಿಬೆಲೆ

by Shwetha
September 19, 2026
0

ಬೆಂಗಳೂರು: ರಾಜ್ಯದಲ್ಲಿ 'ವಂದೇ ಮಾತರಂ' ಗೀತೆಯ ಗಾಯನ ಈಗ ಸರ್ಕಾರ ಮತ್ತು ಹಿಂದುತ್ವನಿಷ್ಠ ನಾಯಕರ ನಡುವಿನ ನೇರ ಸಂಘರ್ಷಕ್ಕೆ ನಾಂದಿ ಹಾಡಿದೆ. ವಂದೇ ಮಾತರಂ ಗೀತೆಯ ಕೇವಲ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram